ಸಂವಿಧಾನದಲ್ಲಿ ಹಿಂದಿ ರಾಷ್ಟ್ರ ಭಾಷೆಯೆಂದಿಲ್ಲ: ಸೋನು ನಿಗಮ್

ನವದೆಹಲಿ : ದೇಶದಲ್ಲಿ ಹೆಚ್ಚು ಮಂದಿ ಹಿಂದಿ ಮಾತಾನಾಡುವವರೇ ಇರುವುದು. ಆದರೆ ಹಿಂದಿ ಮಾತಾನಾಡದೆ ಇರುವವರ ಮೇಲೆ ಹಿಂದಿ ರಾಷ್ಟ್ರ ಭಾಷೆ ಎಂದು ಹೇಳುವುದು ಸರಿಯಲ್ಲ. ಹಿಂದಿ ರಾಷ್ಟ್ರ ಭಾಷೆ ಎಂದು ಸಂವಿಧಾನದಲ್ಲಿ ಉಲ್ಲೇಖಿಸಿಲ್ಲ ಎಂದು  ಖ್ಯಾತ ಗಾಯಕ ಸೋನುನಿಗಮ್ ಪ್ರತಿಕ್ರಿಯಿಸಿದ್ದಾರೆ.

ನಾನು ಎಷ್ಟೊ ತಜ್ಞರನ್ನು ಬಳಿ ಸಮಾಲೋಚಿಸಿದ್ದೇನೆ ಹಾಗೆಯೇ ನನ್ನ ಜ್ಞಾನದ ಪ್ರಕಾರ ಹಿಂದಿ ರಾಷ್ಟ್ರ ಬಾಷೆಯಲ್ಲ ಎಂದಿದ್ದಾರೆ. ಹಲವು ದಿನಗಳಿಂದ ಸುದ್ದಿಯಾಗಿರುವ ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಸ್ಯಾಂಡಲ್ ವುಡ್ ನಟ ಸುದೀಪ್ ಇವರಿಬ್ಬರ ನಡುವಿನ ಟ್ವೀಟ್ ಸಮಯದ ನಡುವೆ ಸೋನುನಿಗಮ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಬಗೆಹರಿಸಲಾಗದ ಹಲವು ಸಮಸ್ಯೆಗಳಿವೆ. ಅದರ ಮದ್ಯೆ ಇನ್ನೊಂದು ಸಮಸ್ಯೆ ತರಬೇಕೆ. ವಿಶ್ವದ ಹಳೆಯ ಭಾಷೆ ಸಂಸ್ಕೃತ ಎಂದು ಈಗ ಮತ್ತೊಂದು ವಿವಾದ ಸೃಷ್ಠಿಸಲಾಗುತ್ತಿದೆ.

ತಮಿಳಿಗನಾದವನು ಹಿಂದಿಯನ್ನೇ ಮಾತನಾಡಬೇಕು ಎಂದು ಹೇರುವುದು ಸರಿಯೇ? ಜನರಿಗೆ ತಮ್ಮ ಭಾಷೆಯನ್ನು  ಸ್ವಾತಂತ್ರ್ಯವಾಗಿ ಮಾತಾಡುವ ಹಕ್ಕಿದೆ ಎಂದು ಸೋನು ನಿಗಮ್ ವಾಗ್ವಾದಕ್ಕಿಳಿದಿದ್ದಾರೆ.

ನಮ್ಮ ದೇಶದ ನ್ಯಾಯಲಯಗಳಲ್ಲಿ ತೀರ್ಪುನೀಡುವುದು ಇಂಗ್ಲಿಷನಲ್ಲೇ, ವಿಮಾನದಲ್ಲಿ ಗಗನ ಸಖಿ ನೀರು ಬೇಕಾ ಎಂದು ಇಂಗ್ಲಿಷನಲ್ಲೇ ಮಾತನಾಡುವುದು, ಅವರೆಲ್ಲ ಹಿಂದಿ ಮಾತನಾಡುವುದಿಲ್ಲ. ಇಂತಹ ಸಂಧರ್ಭದಲ್ಲಿ ಎಲ್ಲಾ ಭಾಷೆಗಳ ಸಮಾನತೆಯನ್ನು ಒಪ್ಪಿಕೊಳ್ಳಬೇಕೆಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *