ನವದೆಹಲಿ: ಕೇಂದ್ರ ಸರಕಾರವು ಜಾರಿಗೆ ತಂದಿರುವ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಗೆ ದೇಶದ ಎಲ್ಲೆಡೆ ಒಂದೇ ರೀತಿಯ ದರವನ್ನು ನಿಗದಿಪಡಿಸಬೇಕೆಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಸರಕಾರ ಅನುಸರಿಸುತ್ತಿರುವ ತಾರತಮ್ಯದ ನೀತಿಯಿಂದಾಗಿ ದೇಶದಲ್ಲಿ ಕೊರೊನಾ ಉಲ್ಬಣಗೊಳ್ಳುತ್ತಿದೆ. ಅದರೊಂದಿಗೆ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್‌ಗಳು ಲಭ್ಯವಾಗುತ್ತಿಲ್ಲ. ಜೊತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಆರೋಗ್ಯ ಕ್ಷೇತ್ರ ಮತ್ತಷ್ಟು ಬಿಗಡಾಯಿಸಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಬಡವರ ಬಗ್ಗೆ ಕಾಳಜಿಯೇ ಇಲ್ಲದ ಮೋದಿ ಸರ್ಕಾರ
ಎಲ್ಲರಿಗೂ ಕೊರೊನಾ ಲಸಿಕೆ ನೀಡಬೇಕೆಂದು ಕೇಂದ್ರ ಸರಕಾರದ ನೀತಿಯನ್ನು ಜಾರಿಗೆ ತಂದಿದೆ. ಈ ನಡುವೆ ಲಸಿಕೆಯನ್ನು ಉತ್ಪಾದನೆ ಮಾಡುವ ಸೀರಮ್ ಇನ್ಸ್‌ಸ್ಟಿಟ್ಯೂಟ್ ಸಂಸ್ಥೆ ಲಸಿಕೆಗಾಗಿ ದರವನ್ನು ನಿಗದಿಪಡಿಸಿದೆ.
ಸೀರಮ್ ಸಂಸ್ಥೆ ವಿವಿಧ ದರವನ್ನು ನಿಗದಿಪಡಿಸಿದೆ. ಲಾಭಕೋರತನಕ್ಕೆ ಇಳಿದಿರುವ ಕಂಪನಿ ತಯಾರಿಸುವ ಒಂದೇ ಲಸಿಕೆಗೆ ಅದೇಕೆ ಮೂರು ರೀತಿಯ ದರವನ್ನು ನಿಗದಿಪಡಿಸಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೆ ನೀಡಿದರೆ ದೇಶದಲ್ಲಿ ಉತ್ಪಾದಿಸುವ ಒಟ್ಟು ಲಸಿಕೆಗಳಲ್ಲಿ ಶೇ.50ರಷ್ಟು ಕೇಂದ್ರ ಸರಕಾರಕ್ಕೆ ಲಭ್ಯವಾಗುತ್ತದೆ.
ಆಸ್ಪತ್ರೆಗಳಲ್ಲಿ ಬೆಡ್ ಲಭ್ಯವಿಲ್ಲ, ಆಕ್ಸಿಜನ್ ಸರಬರಾಜು ತೀವ್ರಗೊಳ್ಳುತ್ತಿಲ್ಲ. ಔಷಧಗಳ ಕೊರತೆಯಿದೆ. ಇಂಥಾ ಸಂದರ್ಭದಲ್ಲಿ ಸರ್ಕಾರ ಈ ರೀತಿಯ ತಾರತಮ್ಯ ನೀತಿ ಅನುಸರಿಸುತ್ತಿರೋದು ಏಕೆ ಎಂದೂ ಪ್ರಶ್ನಿಸಿರುವ ಸೋನಿಯಾ ಗಾಂಧಿ, ಗಣತಂತ್ರ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವೇ ಶೇ. 50ರಷ್ಟು ಲಸಿಕೆಯ ಕೋಟಾ ಪಡೆಯೋದು ಏಕೆ ಎಂದು ಬರೆದಿದ್ದಾರೆ.
ಇದನ್ನು ಓದಿ: ‘ವಿಚಾರವಂತರು ಯೋಚಿಸಬೇಕಾದ್ದು’..
ಲಸಿಕೆಗಳ ಹಂಚಿಕೆ ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿರಬೇಕು. ಕೇಂದ್ರ ಸರಕಾರ ಏಕರೂಪದ ದರ ನಿಗದಿಗೆ ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರಕಾರವು ಕೊರೊನಾ ಲಸಿಕೆಯ ದರಕ್ಕೆ ಸಂಬಂಧಿಸಿದಂತೆ ಏಕರೂಪದ ಬೆಲೆಗೆ ನಿಗದಿಗೊಳಿಸಲು ನೀತಿಯನ್ನು ಜಾರಿಗೆ ತರಬೇಕು. ರಾಷ್ಟ್ರದ ಪ್ರತಿಯೊಬ್ಬರು ಅವರ ಆರ್ಥಿಕ ಪರಿಸ್ಥಿತಿಗಳ ಹೊರತಾಗಿಯೂ ಲಸಿಕೆ ಪಡೆದುಕೊಳ್ಳಲು ಸಹಕಾರಿಯಾಗಿರುವಂತೆ ರೂಪಿಸಬೇಕೆಂದು ಆಗ್ರಹಿಸಿದ್ದಾರೆ.