ಗಾಂಧಿ ಕೊಂದವರ ವೈಭವೀಕರಣ-ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ: ಸೋನಿಯಾ ಗಾಂಧಿ

ಉದಯಪುರ: ಕಾಂಗ್ರೆಸ್‌ ಚಿಂತನ ಶಿಬಿರದಲ್ಲಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ಮಹಾತ್ಮ ಗಾಂಧಿಯನ್ನು ಕೊಂದರವರನ್ನು ವೈಭವೀಕರಿಸುತ್ತಿದೆ ಮತ್ತು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಚಿಂತನ ಶಿಬಿರದ ಮೊದಲ ದಿನವಾದ ಇಂದು (ಮೇ 13)  ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈಗಿನ ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ ಮೇಲೆ ದ್ವೇಷ ಹರಡುವ ಮೂಲಕ ದಮನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

‘ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ’ ಎಂಬ ಘೋಷವಾಕ್ಯದ ಮೂಲಕ ಪ್ರಧಾನಿ ಮೋದಿ ಮತ್ತು ಅವರ ಮಿತ್ರಪಕ್ಷಗಳ ಅರ್ಥವೇನೆಂಬುದು ಇದೀಗ ಸಂಪೂರ್ಣವಾಗಿ ಸ್ಪಷ್ಟವಾಗಿದೆ. ಇದರರ್ಥ ದೇಶವನ್ನು ಶಾಶ್ವತ ಧ್ರುವೀಕರಣದ ಸ್ಥಿತಿಯಲ್ಲಿ ಇರಿಸುವುದು, ಜನರು ನಿರಂತರ ಭಯ ಮತ್ತು ಅಭದ್ರತೆಯ ಸ್ಥಿತಿಯಲ್ಲಿ ಬದುಕಲು ಒತ್ತಾಯಿಸುವುದು, ನಮ್ಮ ಸಮಾಜ ಮತ್ತು ನಮ್ಮ ದೇಶದ ಅವಿಭಾಜ್ಯ ಅಂಗವಾಗಿರುವ ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ಗುರಿಯಾಗಿಸುವುದು ಮತ್ತು ದಬ್ಬಾಳಿಕೆ ಮಾಡುವುದು ಎಂದಿದ್ದಾರೆ.

ಬಿಜೆಪಿ ಆರ್ ಎಸ್ ಎಸ್  ನೀತಿಗಳಿಂದ ದೇಶ ಎದುರಿಸುತ್ತಿರುವ ಸಂಕಷ್ಟವನ್ನು  ಪ್ರತಿಬಂಬಿಸಲು ಈ ಸಭೆಯು ಪ್ರತ್ಯುತ್ತರವಾಗಿದೆ. ಚಿಂತನಾ ಶಿಬಿರವು ಆಚರಣೆ ಆಗಬಾರದು ದೇಶದ ಸೈದ್ಧಾಂತಿಕ, ಚುನಾವಣಾ ಎದುರಿಸುವ ಸವಾಲುಗಳನ್ನು  ಪಕ್ಷವು ಪುನರ‍್ರಚನೆಗೆ ಮಾಹಿತಿ ಹಾಕಿಕೊಡಬೇಕು.

‘ಒಂದು ಕುಟುಂಬ ಒಂದು ಟಿಕೆಟ್’ ನಿಯಮವನ್ನು ಮರಳಿ ಜಾರಿಗೆ ತರುವ ಬಗ್ಗೆ ಸರ್ವಾನುಮತವಿದೆ. ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರವೇ ಟಿಕೆಟ್ ಪಡೆಯಲು ಸಾಧ್ಯ. ಒಬ್ಬರಿಗಿಂತ ಹೆಚ್ಚಿನವರಿಗೆ ಚುನಾವಣಾ ಟಿಕೆಟ್ ನೀಡುವುದಕ್ಕೆ ನಿಷೇಧ ವಿಧಿಸುವುದು ಮೂಲ ಮಂತ್ರವಾಗಿದೆ. ಆದರೆ, ಈ ನಿಯಮದಿಂದ ಗಾಂಧಿ ಕುಟುಂಬ ಹೊರತಾಗಿರಲಿದೆ ಎಂಬ ಸುಳಿವನ್ನು ಪಕ್ಷದ ಮೂಲಗಳು ತಿಳಿಸಿವೆ.

“ಈ ನಿಮಯಕ್ಕೆ ಎಲ್ಲರ ಸಹಮತ ಇದೆ. ಒಬ್ಬರಿಗಿಂತ ಹೆಚ್ಚಿನವರು ಒಂದು ಕುಟುಂಬದಿಂದ ಸ್ಪರ್ಧಿಸಲೇಬೇಕು ಎಂದು ಬಯಸಿದ್ದರೆ, ಅವರು ಪಕ್ಷದ ಚಟುವಟಿಕೆಗಳಲ್ಲಿ ಐದು ವರ್ಷಗಳಿಂದ ಸಕ್ರಿಯರಾಗಿರಬೇಕು” ಎಂದು ಅಜಯ್ ಮಾಕೆನ್ ಹೇಳಿದ್ದಾರೆ. ಗಾಂಧಿ ಕುಟುಂಬಕ್ಕೆ ಇದು ಅನ್ವಯ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಅವರು, “ಅವರು ಕಳೆದ ಐದು ವರ್ಷಗಳಿಂದ ಸಕ್ರಿಯರಾಗಿ ಇದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2018ರಂದ ಪಕ್ಷದಲ್ಲಿ ಅಧಿಕೃತವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ. ಕುಟುಂಬಕ್ಕೆ ಮನ್ನಣೆ ನೀಡುವ ಪಕ್ಷ ಎಂಬ ಟೀಕೆಯಿಂದ ಹೊರಗೆ ಬರುವ ಸಲುವಾಗಿ ‘ಒಂದು ಕುಟುಂಬ, ಒಂದು ಟಿಕೆಟ್’ ಮಂತ್ರ ಜಪಿಸುತ್ತಿರುವ ಕಾಂಗ್ರೆಸ್, ತನ್ನ ನಿಯಮದಲ್ಲಿಯೇ ಎದ್ದು ಕಾಣುವ ಬಹುದೊಡ್ಡ ಲೋಪವನ್ನು ಹೊಂದಿದೆ. ಪಕ್ಷದ ರಚನೆಯಲ್ಲಿನ ಆಮೂಲಾಗ್ರ ಬದಲಾವಣೆಗೆ ಬೇಡಿಕೆ ಬಂದಿರುವ ಸಂದರ್ಭದಲ್ಲಿ, ಸಣ್ಣಪುಟ್ಟ ಬದಲಾವಣೆಗಳ ಹೊರತಾಗಿ ಬೇರೇನೂ ಮಹತ್ವದ್ದು ಜರುಗುವುದಿಲ್ಲ ಎಂಬ ಸಂಕೇತ ನೀಡಿದೆ.

ನಿರ್ಣಾಯಕ ಚುನಾವಣೆಗಳಿಗೂ ಮುನ್ನ ಪಕ್ಷಕ್ಕೆ ಹೊಸ ಹುರುಪು ತರುವ ಪ್ರಯತ್ನವಾಗಿ ಕಾಂಗ್ರೆಸ್‌ನ ಪ್ರತಿ ಹಂತದಲ್ಲಿಯೂ ಅರ್ಧದಷ್ಟು ಸ್ಥಾನಗಳನ್ನು 50ಕ್ಕಿಂತ ಕಡಿಮೆ ವರ್ಷ ವಯಸ್ಸಿನ ನಾಯಕರಿಗೆ ಮೀಸಲಿಡುವ ಬಗ್ಗೆ ಕೂಡ ಚಿಂತನೆ ನಡೆದಿದೆ.

ದೇಶದಲ್ಲಿ 60%ನಷ್ಟು  ಜನರು 40ಕ್ಕಿಂತ ಕಡಿಮೆ ವಯಸ್ಸಿನ ಯುವಕರಿದ್ದಾರೆ ಹಾಗಾಗಿ  ಯುವಜನರಿಗೆ ಹೆಚ್ಚು ಆದ್ಯತೆ ಚುನಾವಣೆಯಲ್ಲಿ ಪ್ರತಿನಿಧಿಸಬೇಕೆಂದು ಮಾಣಿಕ್ಯ ಟ್ಯಾಗೂರ್ ಹೇಳಿದ್ದಾರೆ.

ಕಾಂಗ್ರೆಸ್‌ನ 400ಕ್ಕೂ ಹೆಚ್ಚಿನ ನಾಯಕರು ಶಿಬಿರದಲ್ಲಿ ಭಾಗವಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *