ಬೆಂಗಳೂರು: ಪ್ಯಾಲೆಸ್ತೀನ್ ಪರ ಸದಾಗ್ರಹ ಸಭೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಡಿಸೆಂಬರ್ 2ರ ಶನಿವಾರ ಸಂಜೆ 4.30ಕ್ಕೆ ನಡೆಯಲಿದ್ದು, ಈ ಬಗ್ಗೆ ಹೋರಾಟಗಾರರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ನೀಡಿದ್ದಾರೆ. ಪ್ಯಾಲಿಸ್ತೀನಿಯರಿಗೆ ನ್ಯಾಯ ಸಿಗಲಿ, ಇಸ್ರೇಲ್ ನಡೆಸುತ್ತಿರುವ ನರಮೇಧ ನಿಲ್ಲಲಿ, ಜೋರ್ಡನ್ ನದಿ, ಭೂಮಧ್ಯ ಕಡಲ ನಡುವಿನ ನಾಡಲ್ಲಿ ಶಾಂತಿ-ಸೌಹಾರ್ದ ನೆಲೆಸಲಿ ಎಂದು ಹೋರಾಟಗಾರರು ಕರೆ ನೀಡಿದ್ದಾರೆ. ಈ ಸಭೆಯಲ್ಲಿ ಭಾಗವಹಿಸುತ್ತಿರುವ ಬಗ್ಗೆ ಹಲವಾರು ಹೋರಾಟಗಾರರು ಸಹಿ ಹಾಕಿದ್ದಾರೆ. ಫ್ರೀಡಂ
ಇದನ್ನೂ ಓದಿ:ಪ್ಯಾಲೆಸ್ತೀನ್ ಪರ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ
ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ವಿರೋಧಿಸಿ ಬೆಂಗಳೂರಿನ ರಂಗಶಂಕರದಲ್ಲಿ ನವೆಂಬರ್-29ರಂದು ಆಯೋಜಿದ್ದ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಲಾವಿದರಿಂದ ಆಕ್ರೋಶ ವ್ಯಕ್ತಪಡಿಸಿದ್ದರು.
ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರ ಬಗ್ಗೆ ಗಾಯಕಿ ಎಂಡಿ ಪಲ್ಲವಿ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ “ಕಾರ್ಯಕ್ರಮ ರದ್ದಾಗಿದೆ. ಪೊಲೀಸರು ಅನುಮತಿ ನಿರಾಕರಿಸಿದ್ದಾರೆ” ಎಂದು ಪೋಸ್ಟ್ ಮಾಡಿದ್ದರು. ಫ್ರೀಡಂ
ಸಂಜೆ 5:30ಕ್ಕೆ ಕಾವ್ಯಗೋಷ್ಠಿ, ಕಿರು ನಾಟಕ ಸೇರಿದಂತೆ ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡವನ್ನು ವಿರೋಧಿಸಿ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಖ್ಯಾತ ಕಲಾವಿದರಾದ ಎಂ.ಡಿ ಪಲ್ಲವಿ ಶ್ವೇತಾಂಶು ಬೋರ, ರಮಣೀಕ್ ಸಿಂಗ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ರಂಗಶಂಕರದಂತಹ ಸಂಸ್ಥೆಯನ್ನು ಹೆದರಿಸುವ ಕೆಲಸವನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಸಂಘಟಕರು ಆರೋಪಿಸಿದ್ದರು. ಫ್ರೀಡಂ
ಒಳಾಂಗಣ ಕಾರ್ಯಕ್ರಮಕ್ಕೆ ಯಾವುದೇ ಪೊಲೀಸ್ ಅನುಮತಿ ಅಗತ್ಯವಿಲ್ಲ ಬೆಂಗಳೂರು ಪೊಲೀಸರು ಮತ್ತು ಕರ್ನಾಟಕ ಸರ್ಕಾರಕ್ಕೆ ನಾಚಿಕೆಯಾಗಬೇಕು” ಎಂದು ರಮಣೀಕ್ ಸಿಂಗ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಇದನ್ನೂ ಓದಿ:ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಕೋರಿ ಮುಖ್ಯಮಂತ್ರಿಗೆ ಬಹಿರಂಗ ಪತ್ರ
ಮಹಾತ್ಮ ಗಾಂಧಿ ರಸ್ತೆಯಲ್ಲಿ ನಡೆದಿದ್ದ ಪ್ರತಿಭಟನಕಾರರ ಮೇಲೆಯೂ ಪ್ರಕರಣ ದಾಖಲು ಮಾಡಲಾಗಿದೆ. ʼನಾವು ಎಲ್ಲಿದ್ದೀವಿʼ ಎಂದು ಹಲವು ಹೋರಾಟಗಾರರು ಸಾಮಾಜಿಕ ಮಧ್ಯಮದಲ್ಲಿ ಪ್ರಶ್ನಿಸಿ , ಆಕ್ರೋಶ ಹೊರಹಾಕಿದ್ದರು.
ಇದು ನಾಚಿಕೆಗೇಡಿನ ಸಂಗತಿ ಕಲಾವಿದರು, ತಮ್ಮ ಅಭಿಮತ ಹೇಳುವುದಕ್ಕೂ ಆಸ್ಪದವಿಲ್ಲವೇ? ಸರ್ಕಾರ ಅನುಮತಿ ಕೊಡಬೇಕು ಎಂದು ಸಾಹಿತಿ ರಹಮತ್ ತರೀಕೆರೆ ಅಗ್ರಹಿಸಿದ್ದರು.
ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆಗೆ ನ್ಯಾಯಲಯ ಅನುಮತಿ ನೀಡಿದೆ. ಆದರೆ, ಅಲ್ಲಿಯೂ ಪ್ರತಿಭಟನೆ ಮಾಡದಂತೆ ತಡೆದಿದ್ದು ಏಕೆ? ಅಂದು ಎಡಪಕ್ಷಗಳು ʼಪ್ಯಾಲಿಸ್ಟೀನ್ ಕುರಿತು ಯದ್ಧ ಬೇಡ ಶಾಂತಿ ಬೇಕುʼ ಎಂಬ ಘೋಷಣೆಯೊಂದಿಗೆ ಸಭೆ ನಡೆಸಲು ಕೇಳಲಾಗಿತ್ತು. ಆಗಲೂ ನಿರಾಕರಣೆ ಮಾಡಲಾಗಿತ್ತು. ನೂರಾರು ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಮಾಡಿದಾಗ ಎಲ್ಲರನ್ನೂ ಬಂಧಿಸಲಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಅಂದರೆ ಇದೇನಾ ಎಂದು ರಂಗಕರ್ಮಿ ಶಶಿಕಾಂತ ಯಡಹಳ್ಳಿ ಪ್ರಶ್ನಿಸಿದ್ದರು.
ಸಮಾಜವಾದಿ, ಸಂವಿಧಾನ ರಕ್ಷಿಸುವ, ಪ್ರಜಾ ಪ್ರಭುತ್ವ ರಕ್ಷಕರ ಸರ್ಕಾರದಲ್ಲಿಯೆ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಕಿತ್ತುಕೊಳ್ಳಲಾಗುತ್ತಿದೆ. ಅಮಾನವೀಯ ಹಿಂಸೆ, ಆಕ್ರಮಣ, ದೌರ್ಜನ್ಯಗಳ ವಿರುದ್ಧ ವ್ಯಕ್ತಪಡಿಸುವ ಸಾಂವಿಧಾನಿಕ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಮತ್ತು ಹಕ್ಕುಗಳನ್ನು ರಕ್ಷಿಸುವ ಹೊಣೆಗಾರಿಕೆ ಚುನಾಯಿತ ಸರ್ಕಾರದ ಕರ್ತವ್ಯ ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಯ ಶಾಂತಿಯುತ ಪ್ರತಿಭಟನೆಯ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಹತ್ತಿಕ್ಕದಂತೆ ಪೋಲೀಸ್ ಇಲಾಖೆಗೆ ನಿರ್ದೇಶನ ನೀಡಿ ದೇಶದ ಜನರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕೆಂದು ಜಾಗೃತ ನಾಗರಿಕ ಕರ್ನಾಟಕವು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತ್ತು. ಸಭೆ
ವಿಡಿಯೋ ನೋಡಿ: ಪ್ಯಾಲಿಸ್ತೇನ್ ಪರ ಪ್ರತಿಭಟನೆ ಮಾಡುವುದು ಅಪರಾಧವೆ? Janashakthi Media