ಡಿಸೆಂಬರ್ 11ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಎಸ್‌ಕೆಎಂ ಕರೆ

ರೈತ ಚಳುವಳಿಯ ವಿರುದ್ಧ ಪ್ರತೀಕಾರಕ್ಕಿಳಿದಿರುವ ಮೋದಿ ಸರ್ಕಾರ: ಆಂದೋಲನವನ್ನು ಹತ್ತಿಕ್ಕುವ ಅಕ್ರಮ ತಂತ್ರ

ಸಂಯುಕ್ತ ಕಿಸಾನ್ಮೋರ್ಚಾದ ಕೌನ್ಸಿಲ್ಸದಸ್ಯ  ಮತ್ತು ರೈತ ನಾಯಕ ಯುಧವೀರ್ ಸಿಂಗ್ ಅಕ್ರಮ ಬಂಧನ ಮತ್ತು ಪ್ರಯಾಣ ನಿಷೇಧ ಮತ್ತು ಇತರ ಮುಖಂಡರನ್ನು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸಿರುವುದು ಕೇಂದ್ರ ಸರ್ಕಾರ ನೀಡಿದ ಗಂಭೀರ ಭರವಸೆಗಳ ಉಲ್ಲಂಘನೆಯಾಗಿದೆ. ಎಸ್‍ಕೆಎಂ ಮತ್ತು ಕಾರ್ಮಿಕ ಸಂಘಟನೆಗಳ  ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಯಶಸ್ಸಿನಿಂದಾಗಿ ಮೋದಿ ಸರ್ಕಾರದ ಆತಂಕ ಹೆಚ್ಚಾಗಿದೆ. ಆದ್ದರಿಂದ ಅದು ರೈತ ನಾಯಕರ ವಿರುದ್ಧ ತನಿಖಾ ಸಂಸ್ಥೆಗಳು ಮತ್ತು ದೆಹಲಿ ಪೊಲೀಸರನ್ನು ಅಕ್ರಮವಾಗಿ ಬಳಸುತ್ತಿದೆ ಎಂದು ಸಂಯುಕ್ತ ಕಿಸಾನ್‌ಮೋರ್ಚಾದ ಮುಖಂಡರು ಡಿಸೆಂಬರ್ ‍2ರಂದು ದಿಲ್ಲಿಯಲ್ಲಿ ನಡೆದ ಪತ್ರಿಕಾ ಸಮ್ಮೇಳನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ 11 ಡಿಸೆಂಬರ್ 2023 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತದೆ ಮತ್ತು ಜಿಲ್ಲಾಧಿಕಾರಿಗಳ ಮೂಲಕ ಭಾರತದ ರಾಷ್ಟ್ರಪತಿ ಮತ್ತು ಗೃಹ ಕಾರ್ಯದರ್ಶಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲಾಗುವುದು ಎಂದು ಅವರು ಪತ್ರಿಕಾ ಸಮ್ಮೇಳನದಲ್ಲಿ ಪ್ರಕಟಿಸಿದ್ದಾರೆ

ರೈತರ ಚಳವಳಿಯ ವಿರುದ್ಧ ಯಾವುದೇ ಪ್ರತೀಕಾರದ ಕ್ರಮವನ್ನು ದೊಡ್ಡ ಪ್ರಮಾಣದ ಮತ್ತು ಶಾಂತಿಯುತ ಸಾಮೂಹಿಕ ಹೋರಾಟದ ಮೂಲಕ ಎದುರಿಸಲಾಗುವುದು ಎಂದು ಎಸ್‍ಕೆಎಂ ಹೇಳಿಕೆ ತಿಳಿಸಿದೆ. ಎಸ್‌ಕೆಎಂ

ರೈತ ನಾಯಕರ ಮೇಲಿನ ದಮನದ ಕೆಳಗಿನ ಪ್ರಕರಣಗಳನ್ನು ಎಸ್‌ಕೆಎಂ ಗಮನಿಸಿದೆ:

1) ಎಸ್‌ಕೆಎಂ ನಾಯಕ ಮತ್ತು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಪ್ರಧಾನ ಕಾರ್ಯದರ್ಶಿ ಯುಧವೀರ್ ಸಿಂಗ್ ಅವರನ್ನು ನವೆಂಬರ್ 29, 2023 ರಂದು ಬೆಳಗಿನ ಜಾವ 2 ಗಂಟೆಗೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2020-21ರ ರೈತರ ಹೋರಾಟಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆಧಾರದ ಮೇಲೆ ಬಂಧಿಸಲಾಯಿತು. ಇದರಿಂದಾಗಿ ಅವರು ಅಂತರಾಷ್ಟ್ರೀಯ ರೈತರ ಸಮ್ಮೇಳನದಲ್ಲಿ ಭಾಗವಹಿಸಲು ಕೊಲಂಬಿಯಾಕ್ಕೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ನಂತರ ರೈತರ ಚಳವಳಿಯ ತೀವ್ರ ವಿರೋಧದಿಂದಾಗಿ, ದೆಹಲಿ ಪೊಲೀಸರು ಅವರನ್ನು ಬಿಡುಗಡೆ ಮಾಡಬೇಕಾಗಿ ಬಂತು.

2) ಹರಿಯಾಣದ ರೋಹ್ಟಕ್‌ನ ಬಿಕೆಯು ನಾಯಕ ವೀರೇಂದ್ರ ಸಿಂಗ್ ಹೂಡಾ ಅವರಿಗೆ 22 ನವೆಂಬರ್ 2023 ರಂದು ದಿಲ್ಲಿ ಪೊಲೀಸರಿಂದ ನೋಟಿಸ್ ಹೋಗಿದೆ, ದಿನಾಂಕ 26.11.2020 ರ ಎಫ್‌ಐಆರ್ ಸಂಖ್ಯೆ 522/2020 ಗೆ ಸಂಬಂಧಿಸಿದ ಪ್ರಕರಣದಲ್ಲಿ ಹಾಜರಾಗುವಂತೆ ಸೂಚಿಸಲಾಗಿತ್ತು. ಇಲ್ಲಿಯೂ  ರೈತರ ದೃಢವಾದ ಪ್ರತಿಭಟನೆಯ ನಂತರ, ದಿಲ್ಲಿ ಪೊಲೀಸರು ನೋಟಿಸ್ ಹಿಂಪಡೆಯಲಾಗಿದೆ ಎಂದು ಸಾರ್ವಜನಿಕವಾಗಿ ಘೋಷಿಸಬೇಕಾಗಿ ಬಂತು.

3) 7 ಡಿಸೆಂಬರ್ 2022 ರಂದು, ಹೊಸ ದೆಹಲಿ ವಿಮಾನ ನಿಲ್ದಾಣದಲ್ಲಿ ಬಿಕೆಯುನ ಅರ್ಜುನ್ ಬಲಿಯಾನ್ ನೇಪಾಳಕ್ಕೆ ಹೋಗುವುದನ್ನು ತಡೆಯಲಾಯಿತು.

4) ದಿಲ್ಲಿ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪಂಜಾಬ್‌ನ ಎಸ್‍ಕೆಎಂ ನಾಯಕರು, ಸತ್ನಾಮ್ ಸಿಂಗ್ ಬೆಹರು ಮತ್ತು ಹರಿಂದರ್ ಸಿಂಗ್ ಲೋಕೋವಾಲ್ ಅವರು ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್‌ನಲ್ಲಿ ಕಾನೂನು ಪ್ರಕ್ರಿಯೆಗಳನ್ನು ಎದುರಿಸುತ್ತಿದ್ದಾರೆ.

ಕೇಂದ್ರ ಸರ್ಕಾರವು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಅಗರ್ವಾಲ್ ಅವರು ಸಹಿ ಹಾಕಿದ್ದ 9 ಡಿಸೆಂಬರ್ 2021 ರ ಪತ್ರದ ಮೂಲಕ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಹರಿಯಾಣ ರಾಜ್ಯ ಸರ್ಕಾರಗಳು ಕಿಸಾನ್‍ ಹೋರಾಟಕ್ಕೆ ಸಂಬಂಧಿಸಿದ ಎಲ್ಲ ಕೇಸುಗಳನ್ನು ಕೂಡಲೇ  ಹಿಂತೆಗೆದುಕೊಳ್ಳಲು ಸಂಪೂರ್ಣವಾಗಿ ಒಪ್ಪಿರುವುದಾಗಿ ಹೇಳಿದ್ದರು. ಇದಲ್ಲದೆ, ಕೇಂದ್ರ ಸರ್ಕಾರ ಮತ್ತು ಅದರ ಸಂಸ್ಥೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ರೈತರ ಹೋರಾಟಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲು ಸಹ ಒಪ್ಪಿಕೊಂಡಿದ್ದವು. ರೈತರ ಪ್ರತಿಭಟನೆ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳಿಗೂ ಮನವಿ ಮಾಡಿತ್ತು.

ಎರಡನೆಯದಾಗಿ,  ರಾಜ್ಯಸಭೆಯಲ್ಲಿ ಕೇಳಿದ 19 ಡಿಸೆಂಬರ್ 2022 ರ ಪ್ರಶ್ನೆ ಸಂಖ್ಯೆ 1158 ಗೆ ಉತ್ತರವಾಗಿ, ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಗೃಹ ಸಚಿವಾಲಯದಲ್ಲಿ ಸ್ವೀಕರಿಸಿದ ವರದಿಯ ಪ್ರಕಾರ ರೈತರ ವಿರುದ್ಧದ 86 ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಪ್ರಸ್ತಾಪವಿದೆ ಎಂದು ಉತ್ತರಿಸಿದರು. ಹಾಗೆ ಮಾಡಲು ಗೃಹ ಸಚಿವಾಲಯ ಅನುಮತಿ ನೀಡಿದೆ. ಇದಲ್ಲದೇ ರೈತರ ಮೇಲೆ ರೈಲ್ವೇ ರಕ್ಷಣಾ ಪಡೆ ದಾಖಲಿಸಿರುವ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವಂತೆ ರೈಲ್ವೆ ಸಚಿವಾಲಯ ಸೂಚಿಸಿದೆ ಎಂದೂ ಹೇಳಿದ್ದರು.

ಸಂಸತ್ತಿನ ಮೂಲಕ ಎಸ್‌ಕೆಎಂ ಮತ್ತು ಇಡೀ ರಾಷ್ಟ್ರಕ್ಕೆ ಈ ಗಂಭೀರವಾದ ಲಿಖಿತ ಭರವಸೆಗಳನ್ನು ನೀಡಿದ್ದರೂ, ಮೋದಿ ಸರ್ಕಾರವು ರೈತ ಮುಖಂಡರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು (ಎನ್‌ಐಎ) ನಿಯೋಜಿಸಿದೆ ಮತ್ತು ಎನ್‌ಐಎ ದೆಹಲಿಯಲ್ಲಿ ರೈತರನ್ನು ಬಂಧಿಸಿದೆ. ಸಂಘರ್ಷ ಸಂಬಂಧಿತ ಪ್ರಕರಣಗಳಲ್ಲಿ ಎಸ್‍ಕೆಎಂ ನಾಯಕರ ವಿರುದ್ಧ ಲುಕ್ ಔಟ್ ಸುತ್ತೋಲೆ (ಎಲ್‌ಒಸಿ ) ಹೊರಡಿಸಲಾಗಿದೆ. ಈ ಬಗ್ಗೆ ಸರಕಾರ ಪಾರದರ್ಶಕವಾಗಿರಬೇಕು ಮತ್ತು ಎಲ್ಲಾ LOC ಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಕೇಂದ್ರ ಗೃಹ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಎಸ್‍ಕೆಎಂ ಒತ್ತಾಯಿಸಿದೆ.

ರೈತ ಮುಖಂಡರನ್ನು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸುವ ಪ್ರಸ್ತುತ ವಿಧಾನ ಮೋದಿ ಸರ್ಕಾರವು ನೀಡಿದ ಗಂಭೀರ ಭರವಸೆಯ ಸಂಪೂರ್ಣ ಉಲ್ಲಂಘನೆಯಾಗಿದೆ. ಇಂತಹ ಕ್ರಮವನ್ನು ಬಲವಾಗಿ ಖಂಡಿಸುವುದಾಗಿ ಹೇಳಿರುವ ಎಸ್‍ಕೆಎಂ ಮುಖಂಡರು ಕೇಂದ್ರ ಸರ್ಕಾರದ ಭರವಸೆಯನ್ನು ಉಲ್ಲಂಘಿಸಿ ಎನ್‌ಐಎ ಮತ್ತು ಇತರ ತನಿಖಾ ಸಂಸ್ಥೆಗಳನ್ನು ಏಕೆ ಬಳಸಲಾಗುತ್ತಿದೆ ಎಂಬುದನ್ನು ಗೃಹ ಸಚಿವ ಅಮಿತ್ ಶಾ ವಿವರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 4 ರಾಜ್ಯಗಳ ಚುನಾವಣಾ ಫಲಿತಾಂಶ 2023 : 3 ರಾಜ್ಯದಲ್ಲಿ ಬಿಜೆಪಿ ಮುನ್ನಡೆ, ತೆಲಂಗಾಣದಲ್ಲಿ ಕಾಂಗ್ರೆಸ್‌

ದೆಹಲಿಯಲ್ಲಿ ನಡೆದ ರೈತರ ಹೋರಾಟವು ದೇಶೀಯ ಮತ್ತು ವಿದೇಶಿ ಕಾರ್ಪೊರೇಟ್ ಬಂಡವಾಳದ ಅಡಿಯಲ್ಲಿ ಕೃಷಿಯ ಕಾರ್ಪೊರೇಟೀಕರಣದ ಹೇರಿಕೆಯ ವಿರುದ್ಧ ರೈತರು ಮತ್ತು ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಬಡವರ ಹಿತಾಸಕ್ತಿಗಳನ್ನು ರಕ್ಷಿಸಲು ನಡೆಸಿದ ಸಾಮೂಹಿಕ ಬಂಡಾಯವಾಗಿತ್ತು. ಇದು ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ಸ್ವಾತಂತ್ರ್ಯ ಹೋರಾಟದಂತೆಯೇ ದೇಶಭಕ್ತಿಯ ಚಳುವಳಿಯಾಗಿತ್ತು. ರೈತರ ಹೋರಾಟವನ್ನು ದೇಶವಿರೋಧಿ ಅಥವಾ ವಿದೇಶಿ ಹಣದ ಅಥವಾ ಭಯೋತ್ಪಾದಕ ಶಕ್ತಿಗಳಿಂದ ಬೆಂಬಲಿತವಾಗಿದೆ ಎಂದು ಬಿಂಬಿಸುವ ಮೋದಿ ಸರ್ಕಾರದ ಯಾವುದೇ ಪ್ರಯತ್ನವು ಜನವಿರೋಧಿ ಮತ್ತು ರಾಷ್ಟ್ರ ವಿರೋಧಿ ಕ್ರಮವಾಗಿದೆ, ಅದು ಯಶಸ್ವಿಯಾಗುವುದಿಲ್ಲ. ಭಾರತದ ರೈತರನ್ನು ಅವಮಾನಿಸುವ ಮತ್ತು ಅವರ ಚಳವಳಿಗಳನ್ನು ಅಪರಾಧೀಕರಿಸುವ ಇಂತಹ ನೀಚ ಪ್ರಯತ್ನವನ್ನು ಇಡೀ ದೇಶ ತಿರಸ್ಕರಿಸುತ್ತದೆ ಎಂದು ಎಸ್‍ಕೆಎಎಂ ಪುನರುಚ್ಚರಿಸಿದೆ.

ಎಸ್‍ಕೆಎಂ ಮತ್ತು ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಎಲ್ಲಾ ರಾಜಭವನಗಳ ಮುಂದೆ ಇತ್ತೀಚೆಗೆ ನಡೆಸಿದ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಗಮನಾರ್ಹ ಯಶಸ್ಸಿನಿಂದ ಮೋದಿ ಸರ್ಕಾರಕ್ಕೆ ಆತಂಕ ಉಂಟಾಗಿದೆ. ಎಂದಿರುವ ಎಸ್‍ಕೆಎಂ, ಅದರಿಂದಾಗಿ, ರೈತ ಮುಖಂಡರ ವಿರುದ್ಧ ತನಿಖಾ ಸಂಸ್ಥೆಗಳು ಮತ್ತು ದೆಹಲಿ ಪೊಲೀಸರನ್ನು ಅಕ್ರಮವಾಗಿ ಬಳಸಿಕೊಳ್ಳಲಾಗುತ್ತಿದೆ. C2 + 50% ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆ, ಸಮಗ್ರ ಸಾಲ ಮನ್ನಾ, 4 ಕಾರ್ಮಿಕ ಸಂಹಿತೆ ರದ್ದತಿ, ವಿದ್ಯುತ್ ಬಿಲ್ 2022 ಹಿಂಪಡೆಯುವಿಕೆ ಮತ್ತು ಖಾಸಗೀಕರಣವನ್ನು ನಿಲ್ಲಿಸಬೇಕು ಎಂಬ ಹಕ್ಕೊತ್ತಾಯಗಳು ಸೇರಿದಂತೆ  21 ಅಂಶಗಳ ಹಕ್ಕೊತ್ತಾಯ  ಪತ್ರದ ಮೇಲೆ ನಡೆಯುತ್ತಿರುವ ಹೋರಾಟವನ್ನು ಸಂಯುಕ್ತ ಕಿಸಾನ್ ಮೋರ್ಚಾ ತೀವ್ರಗೊಳಿಸುತ್ತದೆ ಮತ್ತು ಇದಕ್ಕಾಗಿ ಸಾಧ್ಯವಾದಷ್ಟು ವ್ಯಾಪಕವಾದ ಸಿದ್ಧತೆಗಳನ್ನು ಮಾಡಲು  ರೈತರು, ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಬಡವರಿಗೆ ಕರೆ ನೀಡಿರುವುದಾಗಿ ಹೇಳಿರುವ ಸಂಯುಕ್ತ ಕಿಸಾನ್‍ ಮೋರ್ಚಾ

ರೈತರ ಆಂದೋಲನದ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಬಾರದು ಎಂದು ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ವಿಡಿಯೋ ನೋಡಿ: ‘ತಪ್ಪುಗಳನ್ನುಪ್ರಶ್ನಿಸಿದವರನ್ನು ಭಯೋತ್ಪಾದಕ’, ಎಂದು ಹೇಳುವ ಸರ್ಕಾರವನ್ನು ಕಿತ್ತೆಸೆಯಬೇಕು – ಕೆ.ಎನ್. ಉಮೇಶ್

Donate Janashakthi Media

Leave a Reply

Your email address will not be published. Required fields are marked *