- ಭಾರತದಲ್ಲಿ ಹೊಸದಾಗಿ ದಾಖಲಾದ ಕೋವಿಡ್ -19 ಪ್ರಕರಣಗಳಲ್ಲಿ ಆರು ರಾಜ್ಯಗಳು ಶೇಕಡಾ 78 ಕ್ಕಿಂತ ಹೆಚ್ಚಾಗಿದೆ
- ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ ಮತ್ತು ಮಧ್ಯಪ್ರದೇಶ ಸೇರಿದಂತೆ ಆರು ರಾಜ್ಯಗಳು ಹೆಚ್ಚಿದ ಕೋವಿಡ್ ಪ್ರಕರಣಗಳ ಸಂಖ್ಯೆ
- ಹಿಂದಿನ ದಿನ ದೇಶದಲ್ಲಿ ಒಟ್ಟು 56,211 ಹೊಸ ಪ್ರಕರಣವರದಿಯಾಗಿದೆ
ಬೆಂಗಳೂರು/ನವದೆಹಲಿ : ಇಂದು (30.03.2021) ಬೆಳಿಗ್ಗೆ 8ಕ್ಕೆ ಕೊನೆಗೊಂಡ 24 ಗಂಟೆಗಳ ಒಟ್ಟು ಪ್ರಕರಣಗಳಲ್ಲಿ ಭಾರತವು 56,211 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿಲಿದೆ.
ದೇಶದ ಒಟ್ಟು 1.20,95,855 ರಷ್ಟು ವರದಿಯಾಗಿದೆ. ಒಟ್ಟು ಪ್ರಕರಣಗಳಲ್ಲಿ, 5.40,720 ಪ್ರಕರಣಗಳು ಸಕ್ರಿಯವಾಗಿದ್ದರೆ, 1.13,93,021 ಜನರು ಚೇತರಿಸಿಕೊಂಡಿದ್ದಾರೆ. ಹಿಂದಿನ 37,028 ಪ್ರಕರಣಗಳು ಚೇತರಿಕೆ ಕಂಡಿವೆ. ಹೊಸದಾಗಿ 271 ಹೊಸ ಸಾವುಗಳೊಂದಿಗೆ, ಈಗ 1.62,114 ಹೆಚ್ಚಿನ ಸಾವಿನ ವರದಿಗಳು ದಾಖಲಾಗಿವೆ.
ಇದನ್ನು ಓದಿ : ಲಾಕ್ಡೌನ್ ಇಲ್ಲ, ನೈಟ್ ಕರ್ಫ್ಯೂ ಇಲ್ಲ, ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮ
ಮಹಾರಾಷ್ಟ್ರದಲ್ಲಿ ಸೋಮವಾರ 31,643 ಪ್ರಕರಣಗಳು ವರದಿಯಾಗಿದ್ದು, 3.37,928 ಸಕ್ರಿಯ ಪ್ರಕರಣಗಳು ದಾಖಲಾಗಿವೆ.
ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಲೋಕಸಭಾ ಸಂಸದ ಫಾರೂಕ್ ಅಬ್ದುಲ್ಲಾ ಅವರಿಗೆ ಕೋವಿಡ್-19 ದೃಢಪಟ್ಟಿದೆ. ಎಂದು ಅವರ ಪುತ್ರ ಒಮರ್ ಇಂದು ಪ್ರಕಟಿಸಿದ್ದಾರೆ. “ನನ್ನ ತಂದೆ ಕೋವಿಡ್ -19 ಪರೀಕ್ಷೆ ಮಾಡಿದ್ದಾರೆ ಮತ್ತು ಕೆಲವು ರೋಗಲಕ್ಷಣಗಳು ದಾಖಲಾಗಿದ್ದು, ನಮ್ಮನ್ನು ನಾವು ಪರೀಕ್ಷಿಸಿಕೊಳ್ಳುವವರೆಗೂ ನಾನು ಇತರ ಕುಟುಂಬ ಸದಸ್ಯರೊಂದಿಗೆ ಸ್ವಯಂ-ಪ್ರತ್ಯೇಕವಾಗಿರುತ್ತೇನೆ ”ಎಂದು ಒಮರ್ ಟ್ವೀಟ್ ಮಾಡಿದ್ದಾರೆ.
ಭಾರತದ ಕೊರೊನಾ ಸಾಂಕ್ರಾಮಿಕ ಹರಡುವಲ್ಲಿ ಹೆಚ್ಚಿನ ಪ್ರಕರಣ ದಾಖಲಾಗುತ್ತಿರುವ ಮಹಾರಾಷ್ಟ್ರವು ವೈರಸ್ ತಡೆಯಲು ಏಪ್ರಿಲ್ 1 ರೊಳಗೆ ನೂತನ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆಯಿದೆ. ಪೂರ್ಣ ಲಾಕ್‌ಡೌನ್ ಈಗಿನಂತೆ ಅಸಂಭವವಾಗಿದೆ. ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಎರಡನೇ ಪರಿಶೀಲನಾ ಸಭೆ ಇಂದು ನಡೆಯಲಿದೆ.
ಇದನ್ನು ಓದಿ : ಬಿಜೆಪಿಯಿಂದ ಸುದ್ದಿಯಂತೆ ಜಾಹೀರಾತು ಪ್ರಕಟ : ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ಕರ್ನಾಟಕದಲ್ಲಿ ನೆನ್ನೆಯ ದಿನದ ಅಂತ್ಯಕ್ಕೆ 2792 ಹೊಸ ಪ್ರಕರಣಗಳ ದಾಖಲಾಗದ್ದು, ರಾಜ್ಯದಲ್ಲಿ ದಾಖಲಾದ ಒಟ್ಟು ಪ್ರಕರಣಗಳು-989804, ಚೇತರಿಸಿಕೊಂಡವರ ಪ್ರಮಾಣ-953416, ದಿನದ ಅಂತ್ಯಕ್ಕೆ ಚೇತರಿಕೆ-1964, ಒಟ್ಟು ಸಕ್ರಿಯ ಪ್ರಕರಣಗಳು-23849, ಒಟ್ಟು ನಿಧನ-12520, ದಿನದ ಅಂತ್ಯಕ್ಕೆ-16 ನಿಧನದ ಪ್ರಕರಣಗಳು ವರದಿಯಾಗಿದೆ.
ಮಹಾರಾಷ್ಟ್ರ ಮತ್ತು ಕರ್ನಾಟಕವಲ್ಲದೆ ಇತರೆ ಪ್ರಮುಖ ರಾಜ್ಯಗಳಾದ ಪಂಜಾಬ್-2868, ಕರ್ನಾಟಕ- 2792, ಮಧ್ಯಪ್ರದೇಶ-2323, ತಮಿಳುನಾಡು-2279, ಗುಜರಾತ್-2252 ರಾಜ್ಯಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿದೆ.
ಹೊಸದಾಗಿ ದಾಖಲಾದ ಪ್ರಕರಣಗಳಲ್ಲಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಪಂಜಾಬ್ ಸೇರಿದಂತೆ ಎಂಟು ರಾಜ್ಯಗಳು ಶೇ .84.5 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ರಾಷ್ಟ್ರ ರಾಜಧಾನಿ ಒಂದೇ ದಿನದಲ್ಲಿ 1,900 ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿದೆ, ಇದು ಸುಮಾರು ಮೂರೂವರೆ ತಿಂಗಳಲ್ಲಿ ಅತಿ ಹೆಚ್ಚು ವರದಿಯಾದ ಪ್ರಕರಣಗಳು.