ಮಂಡ್ಯ: ಬೆಂಗಳೂರು : ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆಯಲ್ಲಿ ಕಾಂಗ್ರೆಸ್ ಸರ್ಕಾರ ಹಣದ ಸುರಿಮಳೆಯೇ ಹರಿಸಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಶಿವರಾಮೇಗೌಡ
ನಾಗಮಂಗಲದಲ್ಲಿ ಮಾತನಾಡಿದ ಅವರು, ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಶಿವರಾಮೇಗೌಡ ಒಬ್ಬ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ. ಕಾಂಗ್ರೆಸ್ ನ ಪ್ರಭಾವಿ ನಾಯಕರಿಂದ ಆತನಿಗೆ 5 ಕೋಟಿ ಕೊಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ : ಜೀವರಕ್ಷಣೆಯ ಹೊರತು ಅನ್ಯಕಾರಣಕ್ಕೆ “ಪೆಪ್ಪರ್ ಸ್ಪ್ರೇ” ಬಳಸುವಂತಿಲ್ಲ: ಹೈಕೋರ್ಟ್ ಸೂಚನೆ
ಹೆಚ್ ಡಿ ಕುಮಾರಸ್ವಾಮಿ ಅವರು ಲೋಕ ಸಭಾ ಚುನಾವಣೆಗೆ ಮಂಡ್ಯದಿಂದ ನಾಮಪತ್ರ ಸಲ್ಲಿಕೆಗೆ 15 ದಿನ ಮುಂಚೆ ಹಣ ವರ್ಗಾವಣೆ ಆಗಿದೆ. ಅದರಲ್ಲಿಅವರಿಗೆ ಐದು ಕೋಟಿ ನೀಡಲಾಗಿದೆ ಎಂದು ಏಕವಚನದಲ್ಲಿ ಸುರೇಶ್ ಗೌಡ ಆರೋಪಿಸಿದ್ದಾರೆ.
ಈ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರ ದಿಕ್ಕು ತಪ್ಪಿಸಲು ನೋಡುತ್ತಿದೆ.ಹಾಗಾಗಿ ಆದಷ್ಟು ಬೇಗ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಸಚಿವ ಸುರೇಶ್ ಆಗ್ರಹಿಸಿದ್ದಾರೆ.
ಇದನ್ನು ನೋಡಿ : ಪೆನ್‌ಡ್ರೈವ್ ಪ್ರಕರಣ – ಮಹಿಳೆಯರ ಘನತೆಗೆ ಕುಂದುಂಟು ಮಾಡುತ್ತಿರುವವರ ಮೇಲೆ ಕ್ರಮಕ್ಕೆ ಆಗ್ರಹ Janashakthi Media