ಧರ್ಮಸ್ಥಳ ಪ್ರಕರಣ: ಹಲವರಿಗೆ ನೋಟಿಸ್ ಜಾರಿ ಮಾಡಿದ ಎಸ್ಐಟಿ ತಂಡ

ಮಂಗಳೂರು: ಧರ್ಮಸ್ಥಳದ ವಿವಿಧೆಡೆ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ದೂರುದಾರ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಪ್ರಕರಣ ಸಂಬಂಧ ಅಂತಿಮ ಹಂತದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ, ಹಲವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸುತ್ತಿದೆ.

1995ರಿಂದ 2014ರವರೆಗೆ ಕರ್ತವ್ಯ ನಿರ್ವಹಿಸಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಪೊಲೀಸರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದೆ.

ಇದನ್ನೂ ಓದಿ: ಅಳಿಸಲಾದ 65 ಲಕ್ಷ ಮತದಾರರ ಪಟ್ಟಿ ಪ್ರದರ್ಶಿಸಲು ಚುನಾವಣಾ ಸಂಸ್ಥೆ ಒಪ್ಪಿಗೆ

ಯುಡಿಆರ್ ಪ್ರಕರಣದ ವೇಳೆ ಮಹಜರಿನಲ್ಲಿ ಅಧಿಕಾರಿಗಳು ಸಹಿ ಹಾಕಿದ್ದಾರೆ. ಧರ್ಮಸ್ಥಳ ಹೊರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸರ ವಿಚಾರಣೆ ನಡೆಸಲಾಗಿದೆ.

ಎಸ್ ಐಟಿ ನೋಟಿಸ್ ಹಿನ್ನೆಲೆಯಲ್ಲಿ ಎಲ್ಲರೂ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ನೋಡಿ: ಪಪ್ಪೆಟ್‌ ಜಾನು ಈಗ ಕಾಲೇಜ್‌ ಹುಡುಗಿ (ಲಿಂಗತ್ವ ಅಲ್ಪಸಂಖ್ಯಾತ) Janashakthi Media

Donate Janashakthi Media

Leave a Reply

Your email address will not be published. Required fields are marked *