ಪಿಂಚಣಿದಾರರ ಬೇಡಿಕೆಗಳನ್ನು ಈಡೇರಿಸಿ : ನಿವೃತ್ತ ವಿಮಾ ನೌಕರರಿಂದ ಪ್ರತಿಭಟನೆ

ಬೆಂಗಳೂರು: ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘದ ವತಿಯಿಂದ, ದೇಶದಾದ್ಯಂತ, ಇಂದು ( 10.1.2025), ಎಲ್ ಐ ಸಿ‌. ಮತ್ತು ಜಿ.ಐ.ಸಿ, ನಿವೃತ್ತಿ ಹೊಂದಿರುವ, ಪಿಂಚಣಿದಾರರ ಹಲವಾರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ದೇಶದಾದ್ಯಂತ ಎಲ್ಲಾ‌‌ ವಿಭಾಗೀಯ, ವಲಯ‌ ಮತ್ತು ಕೇಂದ್ರ ಕಚೇರಿಗಳ ಮುಂದೆ, ಧರಣಿ ಪ್ರತಿಭಟನಾ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು.

ಇದರ ಭಾಗವಾಗಿ, ಬೆಂಗಳೂರಿನ ಜೆ ಸಿ ರಸ್ತೆಯಲ್ಲಿ ಇರುವ, ಭಾರತೀಯ ಜೀವ‌ ವಿಮಾ ನಿಗಮದ ವಿಭಾಗೀಯ‌ ಕಚೇರಿಯ‌ ಆವರಣದಲ್ಲಿ, ಬೆಂಗಳೂರು ವಿಭಾಗದ ವಿಮಾ ನಿಗಮ ಪಿಂಚಣಿದಾರರ ಸಂಘದ ವತಿಯಿಂದ, ಧರಣಿ ಪ್ರತಿಭಟನಾ ಕಾರ್ಯಕ್ರಮವನ್ನು ನಡೆಸಲಾಯಿತು.

ವಿಮಾ ಪಿಂಚಣಿದಾರರ 6 ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಪರೀಶಿಲನೆ ಮಾಡಿ, ಆದಷ್ಡು ಬೇಗ ಅನುಷ್ಠಾನಕ್ಜೆ ತರಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ: ರಾಜ ಸರ್ಕಾರದ ವಿರುದ್ಧ  60% ಕಮಿಷನ್ ಆರೋಪ: ಎಚ್‌ಡಿಕೆ ವಿರುದ್ಧ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ವಾಗ್ದಾಳಿ

1. ಆಗಸ್ಟ್ 1997 ಕ್ಕಿಂತ ಮುಂಚೆ ನಿವೃತ್ತಿ ಗೊಂಡ, ಪಿಂಚಣಿದಾರರಿಗೆ, ಶೇ.100 ರಷ್ಟು, ತುಟಿಭತ್ಯೆಯನ್ನು ವಿಲೀನಗೊಳಿಸಬೇಕು.

2. 1986 ಕ್ಕಿಂತ ಮುಂಚಿನ ಪಿಂಚಣಿದಾರರಿಗೆ, ಎಕ್ಸ್- ಗ್ರೇಷಿಯಾ ಪಿಂಚಣಿ ನೀಡಬೇಕು.

3. ಸಾಮಾನ್ಯ ವಿಮಾ ಪಿಂಚಣಿದಾರರಿಗೆ ಶೇ.30 ರಷ್ಟು ಏಕ ರೂಪದ ಕುಟುಂಬ ಪಿಂಚಣಿ ನೀಡಬೇಕು.

4. ಎಲ್ಲಾ ಪಿಂಚಣಿದಾರರಿಗೆ, ಮೆಡಿಕ್ಲೇಮ್ ( ಆರೋಗ್ಯ ಸಂರಕ್ಷಣೆ) ಯೋಜನೆ ಉತ್ತಮಗೊಳಿಸಬೇಕು.

5. ಮಾಜಿ ಸೈನಿಕರು, ಇಂಜಿನಿಯರ್ ಗಳಿಗೂ ಪಿಂಚಣಿ ಯೋಜನೆಗೆ ಸೇರಿಕೊಳ್ಳಲು ಮತ್ತೊಂದು ಅವಕಾಶ ನೀಡಬೇಕು.

6. ವಯಸ್ಸಿನ ತಾರತಮ್ಯವಿಲ್ಲದೇ ಎಲ್ಲಾ ಪಿಂಚಣಿದಾರರಿಗೂ ಎಕ್ಸ್-ಗ್ರೇಷಿಯಾ ನೀಡಬೇಕು

ಬೆಂಗಳೂರಿನಲ್ಲಿ ನಡೆದ ಧರಣಿ ಪ್ರತಿಭಟನೆಯನ್ನು ಎಐಪಿಎನ ಮಾಜಿ ರಾಜ್ಯಾಧ್ಯಕ್ಷ  ನಟರಾಜನ್ ಉದ್ಘಾಟಿಸಿ ಮಾತನಾಡುತ್ತಾ, ನಮ್ಮ ಈ ಪ್ರತಿಭಟನಾ ಹೋರಾಟಕ್ಕೆ, ಅನಿವಾರ್ಯವಾಗಿ, ಪಿಂಚಣಿದಾರರರು ಬೀದಿಗಿಳಿದು ಹೋರಾಟ ನಡೆಸಬೇಕಾದ ಪರಿಸ್ಥಿತಿಯನ್ನು ವಿವರಿಸಿದರು. ಈಗಾಗಲೇ ‌ನಾವು ಎರಡು- ಮೂರು ಬಾರಿ ನಮ್ಮ ನ್ಯಾಯಯುತ ವಾದ ಬೇಡಿಕೆಗಳ ಅನುಷ್ಠಾನಕ್ಕಾಗಿ ಚರ್ಚಿಸಲಾಗಿದೆ. ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿಯೇ ನಾವು ನಮ್ನ ಅರೋಗ್ಯ‌ ಮತ್ತು ವಯಸ್ಸನ್ನು ಲೆಕ್ಕಿಸದೆ, ಈ ಧರಣಿ ಹೋರಾಟದಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ಅಭಿನಂದಿಸಿದರು.

ಧರಣಿಯನ್ನು ಉದ್ದೇಶಿಸಿ ಅಖಿಲ ಭಾರತ ಜಂಟಿ ಕಾರ್ಯದರ್ಶಿ, ಭಾಸ್ಕರ್ ಸೋಮಯಾಜಿ, ಜಿಐಸಿ ಅಧ್ಯಕ್ಷರಾದ ರಾಮಕೃಷ್ಣ, ಬಿಇಎಫ್ಐ ಯಿಂದ ನಾಗರಾಜ ಶಾನಭೋಗ , ಬೆಂಗಳೂರು ವಿಭಾಗದ, ಸಿ ಆರ್ ನಾಗರಾಜ್, ಜಿ.ಕೆ ಗಂಗಾದರ್, ದರಣಿಯನ್ನು ಉದ್ದೇಶಿಸಿ ಮಾತನಾಡಿದರು. ಸಂಘದ ಮಹಿಳಾ‌ ನಾಯಕಿಯರಾದ, ವಿ. ಲತಾ, ಕೆ ಎನ್ ಶಾರದಮ್ಮ, ಇನ್ನಿತರರು, ದರಣಿಯಲ್ಲಿ ಭಾಗವಹಿಸಿ ಮಾತನಾಡಿದರು. ಎಂ.ಚಂದನ್, ಆರಂಭದಲ್ಲಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಜನವರಿ ಚಳಿಯನ್ನು ಲೆಕ್ಕಿದೆ, 200 ಕ್ಕೂ ಹೆಚ್ಚು ಪಿಂಚಣಿದಾರರು ಸರಣಿಯಲ್ಲಿ ಭಾಗವಹಿಸಿ, ಎಲ್ ಐ ಸಿ ಆಡಳಿತ ವರ್ಗಕ್ಕೆ, ಮತ್ತು ಮೋದಿಯವರ ಕೇಂದ್ರ ಸರ್ಕಾರಕ್ಕೆ, ನಮ್ನ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲೇ ಬೇಕೆಂಬ ಒತ್ತಾಯ ಮಾಡುವಲ್ಲಿ, ಎಚ್ಚರಿಕೆಯನ್ನು‌ ನೀಡಿದರು.

ಇದನ್ನೂ ನೋಡಿ: ಬಸ್‌ ‍ಪ್ರಯಾಣ ದರ ಹೆಚ್ಚಳ ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *