ಒಡಿಶಾ| ಏಪ್ರಿಲ್‌ 1 ರಿಂದ ಎಸ್‌ಐಆರ್‌ ಪ್ರಕ್ರಿಯೆ ಆರಂಭ: ಚುನಾವಣಾ ಆಯೋಗ

ಭುವನೇಶ್ವರ: ಏಪ್ರಿಲ್‌ 1 ರಿಂದ ಒಡಿಶಾದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಾರಂಭವಾಗಲಿದ್ದು, ರಾಜ್ಯದಲ್ಲಿ ಶೇ 90ರಷ್ಟು ಮತದಾರರ ಹೆಸರು 2002ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ ಆಗುತ್ತಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಒಡಿಶಾದ ಮುಖ್ಯ ಚುನಾವಣಾ ಅಧಿಕಾರಿ ಸಿಇಒ ಆರ್.ಎಸ್. ಗೋಪಾಲನ್ ಮಾತನಾಡಿ, ಮ್ಯಾಪಿಂಗ್ ಪ್ರಕ್ರಿಯೆಯು ಮುಂದಿನ 15 ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದ್ವೇಷ ರಾಜಕೀಯದ ವಿರುದ್ಧ ಮಹಿಳಾ ಚಳುವಳಿಗಳು ಬಲಗೊಳ್ಳಬೇಕು: ತೀಸ್ತಾ ಸೆಟಲ್ವಾಡ್

ರಾಜ್ಯದಲ್ಲಿ ಕೊನೆಯ ಬಾರಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು ಎರಡು ದಶಕಗಳ ಹಿಂದೆ ನಡೆದಿತ್ತು ಎಂದು ಗೋಪಾಲನ್ ತಿಳಿಸಿದ್ದಾರೆ.

ಚುನಾವಣಾ ಆಯೋಗದ ಸೂಚನೆಗಳ ಪ್ರಕಾರ, 2002ರ ಮತದಾರರ ಪಟ್ಟಿಯ ಆಧಾರದಡಿ 2025ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ: ಮುಟ್ಟಿನ ರಜೆ ದಯೆಯಲ್ಲ, ಅದು ಹಕ್ಕು — ವಿಶೇಷ ಸೌಲಭ್ಯವಲ್ಲ, ನ್ಯಾಯಯುತ ಸೌಕರ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *