ಮಹಾಧರಣಿ| ಶತ್ರುಗಳ ಎದೆಯಲ್ಲಿ ಭಯ ಬಿತ್ತುವ ಹೋರಾಟ ಕಟ್ಟಬೇಕಾಗಿದೆ-ವಿಜೂ ಕೃಷ್ಣನ್‌

ಬೆಂಗಳೂರು:  ನಮ್ಮ ಶತ್ರುಗಳ ಹೃದಯಗಳಲ್ಲಿ ಭಯ ಬಿತ್ತುವ ಹೋರಾಟ ನಾವು ಕಟ್ಟಬೇಕಾಗಿದೆ ಎಂದು ಎಐಕೆಎಸ್ ಪ್ರಧಾನ ಕಾರ್ಯದರ್ಶಿ ವಿಜೂ ಕೃಷ್ಣನ್‌ ಅವರು ಹೇಳಿದರು. ಭಯ 

ಮೂರು ದಿನಗಳ ಕಾಲ ನಡೆಯುತ್ತಿರುವ  ‘ದುಡಿಯುವ ಜನತೆಯ ಮಹಾಧರಣಿʼ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮಹಾಧರಣಿಯ ಎರಡನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಖಿಲ ಭಾರತ ರಾಷ್ಟ್ರೀಯ ಕಿಸಾನ್ ಸಭಾದ (ಎಐಕೆಎಸ್) ಜಂಟಿ ಕಾರ್ಯದರ್ಶಿ ವಿಜೂ ಕೃಷ್ಣನ್‌ ಅವರು ಮಾತನಾಡಿ 2014ರಲ್ಲಿ ಚುನಾವಣೆ ಬಂದಾಗ ಬೇಕಾದಷ್ಟು ಆಕರ್ಷಕ ಭರವಸೆಗಳನ್ನು ನೀಡಿ ಬಿಜೆಪಿ ಅಧಿಕಾರಕ್ಕೆ ಬಂತು. ರೈತ ಮತ್ತು ದುಡಿವ ಜನರಿಗೆ ಒಳ್ಳೆಯ ದಿನ ಬರುತ್ತದೆ ಎಂದು ಹೇಳಿತ್ತು. ಅದೇ ರೀತಿಯಲ್ಲಿ ರೈತರ ಆದಾಯ ಡಬಲ್ ಮಾಡುತ್ತೇವೆ. ನರೇಗಾದಲ್ಲಿ 200 ದಿನ ಕೆಲಸ ಕೊಡುತ್ತೇವೆ. ರೈತರಿಗೆ ಬೀಜ, ರಸಗೊಬ್ಬರ ಕಡಿಮೆ ಬೆಲೆಗೆ ಕೊಡುತ್ತೇವೆ ಎಂಬುವುದು ಸೇರಿ ಹಲವಾರು ಭರವಸೆಗಳನ್ನು ನೀಡಿತ್ತು ಎಂದರು.

ಇದನ್ನೂ ಓದಿ:ಮಹಾಧರಣಿ| ಸರ್ವಾಧಿಕಾರಿ ಮನೋಭಾವದ ಸರಕಾರಗಳಿಗೆ ದೇಶದ ಜನ ಪಾಠ ಕಲಿಸಿದ್ದಾರೆ – ಪ್ರೊ. ರವಿವರ್ಮಕುಮಾರ್‌

ಬೆಲೆ ಏರಿಕೆಯ ಹೆಸರಿನಲ್ಲಿ ಈ ಬಿಜೆಪಿ ಅಧಿಕಾರಕ್ಕೆ ಬಂತು. ಆದರೆ ಈ 9 ವರ್ಷಗಳಲ್ಲಿ ರೈತ ಮತ್ತು ಕಾರ್ಮಿಕರ ಪರಿಸ್ಥಿತಿ ಏನಿದೆ? 4 ಲಕ್ಷಕ್ಕೂ ಹೆಚ್ಚು ರೈತ, ಕಾರ್ಮಿಕ ಮತ್ತು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಿಕ್ಕಟ್ಟಿನಲ್ಲಿ ಸಿಲುಕಿ ರೈತ, ಕಾರ್ಮಿಕ ಮತ್ತು ಯುವಕರು ಸಾಯುವ ಪರಿಸ್ಥಿತಿ ಬಂದಿದೆ ಹಾಗೂ ನಿರಂತರವಾಗಿ “ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ” ಎಂದು ಕಿಡಿಕಾರಿದರು.

ಹಲವಾರು ವಿಷಯಗಳ ಆಧಾರದಲ್ಲಿ ಕಟ್ಟಿರುವ ರೈತ ದಲಿತ ಕಾರ್ಮಿಕರು ಒಗ್ಗಟ್ಟಾಗಿದ್ದು. ಈ ಐಕ್ಯತೆ ಮತ್ತಷ್ಟು ಬಲವಾಗಿದ್ದು, ಕೊರೊನಾ ಕಾಲದಲ್ಲಿ ರೈತ ಮತ್ತು ಕಾರ್ಮಿಕರಿಗೆ ತಿಳಿಯದೆ ತಂದ ರೈತ ವಿರೋಧಿ ಕಾನೂನಾಗಿದೆ. ಈ ಕಾರ್ಮಿಕ ಮತ್ತು ರೈತರು ಒಗ್ಗಟ್ಟಿನಿಂದ ಕಟ್ಟಿದ ಸಂಯುಕ್ತ ಹೋರಾಟ ಕರ್ನಾಟಕ ಐಕ್ಯತೆ ಇನ್ನೂ ಮುಂದಕ್ಕೆ ಕೊಂಡೊಯ್ಯುತ್ತದೆ. ದೇಶದ ಎಲ್ಲಾ ಹೋರಾಟಕ್ಕಿಂತ ಕರ್ನಾಟಕದ ಈ ಹೋರಾಟ ಎರಡು ಹೆಜ್ಜೆ ಮುಂದಿದೆ ಎಂದರು.

“ಪ್ರಸ್ತುತ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಲ್ಲಿ, ಮೋದಿ ಅವರ ಹೆಸರಿನಲ್ಲಿ ಭರವಸೆ ನೀಡಲಾಗುತ್ತಿದೆ. ರೈತರನ್ನು ಮತ್ತು ಕಾರ್ಮಿಕರನ್ನು ಮೋಸ ಮಾಡುವ ಭರವಸೆಗಳನ್ನು ನೀಡುತ್ತಾ ಚುನಾವಣೆಗೆ ತಯಾರಾಗಿದ್ದಾರೆ. ರಾಜಸ್ಥಾನದಲ್ಲಿ 450ಕ್ಕೆ ಸಿಲಿಂಡರ್ ನೀಡುತ್ತೇವೆ ಎಂದು ಬಿಜೆಪಿ ಭರವಸೆ ನೀಡುತ್ತಿದೆ. ಆದರೆ  ಆದರೆ, ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ 380 ರೂ. ಇದ್ದ ಸಿಲಿಂಡರ್ ಬೆಲೆ, ಈಗ 1250 ರೂ. ದಾಟಿದೆ. ಈಗ ಅವರು ಸುಳ್ಳು ಭರವಸೆಗಳನ್ನ ನೀಡುತ್ತಿದ್ದಾರೆ” ಎಂದು ಆರೋಪಿಸಿದರು.

“ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಕಾರ್ಮಿಕರು 72 ಗಂಟೆ ಕೆಲಸ ಮಾಡಬೇಕು ಅಂತ ಹೇಳುತ್ತಿದ್ದಾರೆ. ಆ ನೀತಿಯನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಆದರೆ, ಈಗ ಅಧಿಕಾರದಲ್ಲಿರುವ ಕಾಂಗ್ರೆಸ್‌ ಕೂಡ ಆ ನೀತಿಯನ್ನು ಹಿಂಪಡೆದುಕೊಂಡಿಲ್ಲ. ತಮಿಳುನಾಡಿನಲ್ಲಿ ಈ ನೀತಿಯ ವಿರುದ್ಧ ಹೋರಾಟಗಳು ನಡೆದವು. ಅಲ್ಲಿನ ಸರ್ಕಾರ ಕಾರ್ಮಿಕ ವಿರೋಧಿ ನೀತಿಯನ್ನು ಹಿಂಪಡೆದುಕೊಂಡಿತು. ಆದರೆ, ರಾಜ್ಯದಲ್ಲಿ ಇನ್ನೂ ಆ ನೀತಿ ಹಾಗೆಯೇ ಉಳಿದಿದೆ” ಎಂದರು.

ಇದನ್ನೂ ಓದಿ : ದುಡಿಯುವವರ ಮಹಾಧರಣಿ| ಸಂಘ ಪರಿವಾರದ ಬಿಜೆಪಿ ಆಳ್ವಿಕೆಯನ್ನು ಕೊನೆಗಾಣಿಸಬೇಕಿದೆ – ದೇವನೂರ ಮಹಾದೇವ

“ಉತ್ಪಾದನೆ ಖರ್ಚಿಗಿಂತ 50% ಹೆಚ್ಚು ಅದಾಯ ಬರುವಂತೆ ಬೆಂಬಲ ಬೆಲೆ ನೀಡುತ್ತೇವೆ ಎಂದಿದ್ದರು. ಆದರೆ, ಈಗ ಕೃಷಿ ಮಂತ್ರಿಯನ್ನ ಕೇಳಿದರೆ, ‘ಚುನಾವಣಾ ಸಮಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಭರವಸೆ ನೀಡುತ್ತವೆ. ಅದೆಲ್ಲವನ್ನೂ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ’ ಎಂದು ಈಗ ಅವರು ಹೇಳುತ್ತಿದ್ದಾರೆ. ರೈತರ ಭೂಮಿಯನ್ನು ಕಸಿದುಕೊಳ್ಳುವ ನೀತಿಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದರು. ಅದರ ವಿರುದ್ಧ ದಲಿತ, ಕಾರ್ಮಿಕರ, ರೈತರು ಐಕ್ಯ ಹೋರಾಟ ನಡೆಸಿದರು. ಹೀಗಾಗಿ, ಸಂಸತ್ತಿನಲ್ಲಿ ಆ ಮಸೂದೆಯನ್ನು ಹಿಂಪಡೆದುಕೊಂಡರು” ಎಂದು ತಿಳಿಸಿದರು.ಭಯ 

“ಕೊರೊನಾ ಸಮಯದಲ್ಲಿ ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದರು. ಅವುಗಳ ವಿರುದ್ಧ ಸಾಂಕ್ರಾಮಿಕ ರೋಗಕ್ಕೂ ಹೆದರದೆ, ರೈತರು ಹೋರಾಟ ನಡೆಸಿದರು. ಸಂಯುಕ್ತ ಕಿಸಾನ್ ಮೂರ್ಚಾ, ‘ಗ್ರಾಮೀಣ್ ಭಾರತ್ ಬಂದ್’ಗೆ ಕರೆಕೊಟ್ಟು, ದೆಹಲಿ ಗಡಿಯಲ್ಲಿ ಒಂದು ವರ್ಷದ ಕಾಲ ಹೋರಾಟ ನಡೆಸಿದರು. ಆ ಹೋರಾಟ ಗೆದ್ದಿತು. ಅದಕ್ಕೆ ಕಾರಣ, ಎಲ್ಲರ ಐಕ್ಯತೆ. ಈ ಐಕ್ಯತೆಯನ್ನ ಎಲ್ಲರೂ ಮುಂದೆ ಕೊಂಡೊಯ್ಯಬೇಕು” ಎಂದರು.

“ನರಗುಂದ, ನವಲಗುಂದ ರೈತ ಹುತಾತ್ಮರ ಭೂಮಿ. ರಾಜ್ಯದ ರೈತರು, ದಲಿತರು, ಆದಿವಾಸಿಗಳು ಹೋರಾಟದ ಐಕ್ಯತೆಯಲ್ಲಿ ಇಡೀ ದೇಶದಲ್ಲೇ ಎರಡು ಹೆಜ್ಜೆ ಮುಂದಿದ್ದಾರೆ. ಎಲ್ಲೆಡೆ, ಇನ್ನೂ ಎಲ್ಲರನ್ನೂ ಒಗ್ಗೂಡಿಸಲು ಪ್ರಯತ್ನಿಸಲಾಗುತ್ತಿದೆ. ಇಲ್ಲಿ, ಎಲ್ಲರೂ ಒಗ್ಗೂಡಿ ಹೋರಾಟ ನಡೆಸುತ್ತಿದ್ದಾರೆ” ಎಂದರು.

ಬುಲ್ಡೋಜರ್ ಸರ್ಕಾರದ ವಿರುದ್ದ ನಮ್ಮ ರೈತ, ಕಾರ್ಮಿಕ ವಿದ್ಯಾರ್ಥಿ ಹೋರಾಟವನ್ನು ಕಟ್ಟಬೇಕಾಗಿದೆ. ನಮ್ಮ ಶತ್ರುಗಳ ಹೃದಯಗಳಲ್ಲಿ ಭಯ ಬಿತ್ತುವ ಹೋರಾಟ ನಾವು ಕಟ್ಟಬೇಕಾಗಿದೆ ಎಂದು ಕರೆ ನೀಡಿದರು.ಭಯ 

ಧರಣಿಯಲ್ಲಿ ಬಡಗಲಪುರ ನಾಗೇಂದ್ರ ಅವರು ಮಾತನಾಡಿ, ಸ್ವತಂತ್ರ ಬಂದ ನಂತರ ರೈತ ಸಮುದಾಯ ಯಾವ ಸಮಸ್ಯೆಗೆ ಎದುರಾಗಿತ್ತಿದೆಯೊ ಅದರ ವಿರುದ್ಧ ನಿರಂತರ ಹೋರಾಟಗಳು ನಡೆದಿದೆ. ಆದರೆ ದೆಹಲಿ ಹೋರಾಟ ರೈತರ ಆಕ್ರೋಶ ಕಟ್ಟೆ ಒಡೆದ ಹೋರಾಟವಾಗಿದೆ ಎಂದರು.

780 ರೈತರು ತಮ್ಮ ಪ್ರಾಣವನ್ನು ಇದಕ್ಕೆ ಅರ್ಪಿಸಿದ್ದಾರೆ. ರೈತರ ಈ ತೀವ್ರ ಹೋರಾಟವು ಕಾಯ್ದೆ ವಾಪಾಸ್ ಪಡೆಯಲೇ ಬೇಕಾದ ಸ್ಥಿತಿ  ತಂದಿಟ್ಟಿತ್ತು. 2020 ರಲ್ಲಿ ಹೋರಾಟಗಾರ ಮಾರುತಿ ಮಾನ್ಪಡೆ ತೀರಿಕೊಂಡರು. ಈ ವೇಳೆ ಬಿಜೆಪಿಯ ಯಡಿಯೂರಪ್ಪ ಅವರ ಸರ್ಕಾರ ರೈತ ವಿರೋಧಿ ಕಾಯ್ದೆಯನ್ನು ಜಾರಿ ತಂದಾಗ ರೈತ, ದಲಿತ, ಕಾರ್ಮಿಕರು ಐಕ್ಯವಾಗಿ ಹೋರಾಟ ನಡೆಸಿದೆವು ಎಂದು ಹೇಳಿದರು.

ಸ್ವತಂತ್ಯ್ರ ಪಡೆಯಲು ನಾವು 2 ಶತಮಾನಗಳ ಕಾಲ ಹೋರಾಟ ಮಾಡಿದ್ದೇವೆ. ಈ ದೇಶಕ್ಕಾಗಿ ಜನರು ತಮ್ಮ ಆಯುಷ್ಯವನ್ನೆ ಮುಡಿಪಿಟ್ಟಿದ್ದಾರೆ. ನಾವು ಈಗ ಸಂವಿಧಾನ ಉಳಿಸಿಕೊಳ್ಳಬೇಕಾದ ಪರಿಸ್ಥಿತಿಯಿದೆ. 2024ರ ಚುನಾವಣೆಯಲ್ಲಿ ಭಾರತದ ದೇಶದ ಜನರಿಗೆ ದೊಡ್ಡ ಮಹತ್ವವಾದ ಚುನಾವಣೆ. ಈ ಚುನಾವಣೆಯಲ್ಲಿ ಕೋಮುವಾದಿ, ಬಂಡವಾಳಶಾಹಿಯನ್ನು ಪ್ರತಿನಿಧಿಸುವ ಮೋದಿ ಸರ್ಕಾರ ಮತ್ತೆ ಚುನಾಯಿತರಾದರೆ ಮತ್ತೆ ಎಂದೂ ಚುನಾವಣೆ ನಡೆಯುವುದಿಲ್ಲ. 2024ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಸಂಘಪರಿವಾರವನ್ನು ಪ್ರತಿನಿಧಿಸುವ ಜನರು ಅಧಿಕಾರಕ್ಕೆ ಬಂದರೆ ಭಾರತ ಸೋಲುತ್ತದೆ. ಜನಚಳುವಳಿಗಳಲ್ಲೇ ನಾವು ಬದಲವಾಣೆ ತರಬೇಕು, ರಾಜಕೀಯ ಪಕ್ಷಗಳಿಂದ ಬದಲಾವಣೆ ಸಾಧ್ಯವಿಲ್ಲ. 2024ರ ಚುನಾವಣೆಯಲ್ಲಿ ಜನಚಳುವಳಿಗಳು ನಿರ್ಣಾಯಕವಾದ ಪಾತ್ರ ವಹಿಸಬೇಕು ಎಂದರು.ಭಯ 

ವಿಡಿಯೋ ನೋಡಿ:ಮಹಾಧರಣಿ : ರಾಷ್ಟ್ರದ್ವಜಾರೋಹಣದ ಮೂಲಕ ಮೂರು ದಿನಗಳ ಧರಣಿಗೆ ಚಾಲನೆ

Donate Janashakthi Media

Leave a Reply

Your email address will not be published. Required fields are marked *