ಸರ್ಕಾರಿ ಹೊರಗುತ್ತಿಗೆ ಮೀಸಲಾತಿ, ಸಾಮಾಜಿಕ ನ್ಯಾಯ, ಮೂಗಿಗೆ ತುಪ್ಪವೇ?

ಕೆ.ಮಹಾಂತೇಶ್

ರಾಜ್ಯ ಸರ್ಕಾರ, ಸರ್ಕಾರದ ವಿವಿಧ ಇಲಾಖೆ ನಿಗಮ ಮ‌ಂಡಳಿ ವಿಶ್ವವಿದ್ಯಾಲಯ ಇತ್ಯಾದಿಗಳಲ್ಲಿ ಹೊರಗುತ್ತಿಗೆ ನೇಮಕದಲ್ಲಿ ಮೀಸಲಾತಿ ಜಾರಿಗೊಳಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ.

ಆದರೆ ಈ ಅಧಿಸೂಚನೆ‌ ಮೂಲಕ ರಾಜ್ಯ ಸರ್ಕಾರ ಒಂದು ಕಡೆ ಸಾಮಾಜಿಕ ‌ನ್ಯಾಯ ನೀಡಲು ಮುಂದಾಗಿ ಮತ್ತೊಂದು ಕಡೆ ಸಾಮಾಜಿಕ ‌ನ್ಯಾಯ ಹಾಗೂ ಬದುಕುವ ಘನತೆಯ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಂಡಿದೆ ಎಂದು ಅನಿಸುತ್ತಿದೆ. ಯಾಕೆಂದರೆ ಈ ಅಧಿಸೂಚನೆ ಮೂಲಕ ಸರ್ಕಾರ ಹೊರಗುತ್ತಿಗೆ ಎನ್ನುವ ವ್ಯವಸ್ಥೆಯನ್ನು ಶಾಶ್ವತಗೊಳಿಸಲು ಹೊರಟಿದೆ.

ಸಾಮಾಜಿಕ ನ್ಯಾಯ ನಿಜವಾಗಿಯೂ ದೊರೆಯಬೇಕಾದರೆ ಸಮಾನ ಕೆಲಸಕ್ಕೆ ಸಮಾನ ವೇತನ ಖಾತ್ರಿಪಡಿಸಬೇಕಿತ್ತು ಇದನ್ನು ಸರ್ವೋಚ್ಚ ನ್ಯಾಯಾಲಯವು ಒತ್ತಿ ಹೇಳಿದೆ ಆದರೆ ಮೀಸಲಾತಿ ಆಧಾರದಲ್ಲಿ ನೇಮಕವಾಗುವ ಹೊರಗುತ್ತಿಗೆ ನೌಕರರಿಗೆ ಅದು ಅನ್ವಹಿಸುವುದಿಲ್ಲ.

ಖಾಲಿ ಇರುವ 2.73. ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿದರೆ ನಿಜವಾಗಿಯೂ ಸಾಮಾಜಿಕ ‌ನ್ಯಾಯ ಎತ್ತಿ ಹಿಡಿದಂತಾಗುತ್ತದೆ ಮತ್ತು ಮೀಸಲಾತಿ ಆಧಾರದಲ್ಲಿ ನೇಮಕವಾದ ನೌಕರರು ಸರ್ಕಾರಿ ನೌಕರರಿಗೆ ಸೇರಲು ಅರ್ಜಿ ಹಾಕಿದರೆ‌ ಕನಿಷ್ಟ ಶೇ 15 ಮೀಸಲಾತಿ ಅಥವಾ ಕೃಪಾಂಕ ನೀಡಿದರೆ ಸಾಮಾಜಿಕ ನ್ಯಾಯಕ್ಕೆ ಒಂದು ಹೆಜ್ಜೆ ಮುನ್ನಡೆ ಎಂದು ಭಾವಿಸಬಹುದು.

ಆದರೆ ಈ ಅಧಿಸೂಚನೆ ಆದೇಶವು ಹೊರಗುತ್ತಿಗೆ ನೇಮಕಾತಿ ಮೇಲೆ ನೇಮಕವಾದವರಿಗೆ ಯಾವುದೇ ಕಾರಣಕ್ಕೂ ಖಾಯಂ ಆಗುವ ಅರ್ಹತೆ ಇರುವುದಿಲ್ಲ ಎಂದು ಹೇಳುತ್ತದೆ ಹಾಗಾದರೆ ಹೊರ ನೇಮಕಾತಿಯಲ್ಲಿ ಮೀಸಲಾತಿ ನೀಡುವ ಉದ್ದೇಶವಾದರೂ ಏನು? ಅದಕ್ಕೆ ಯಾವ ಅರ್ಥವಿದೆ?

ಇದನ್ನು ಓದಿ : ಹೇಮಂತ್ ಸೊರೆನ್ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಇದುವರೆಗೂ ಗುತ್ತಿಗೆ ಹಾಗೂ ಹೊರಗುತ್ತಿಗೆಯಲ್ಲಿ ನೇಮಕಾತಿಯಲ್ಲಿ ಯಾವುದೇ ಮೀಸಲಾತಿ ‌ಮಾನದಂಡ ಗಳನ್ನು ಏಜೆನ್ಸಿಯವರು ಅನುಸರಿಸುತ್ತಿರಲಿಲ್ಲ ಆದರೆ ಈಗ ಕನಿಷ್ಟ 20 ಜನ ನೌಕರರನ್ನು ನೇಮಿಸುವಾಗ ಈಗ ಸರ್ಕಾರದ ಸೂಚನೆಯಂತೆ ಈ ಮೀಸಲಾತಿ ಜಾರಿಗೊಳಿಸಬೇಕು ಆದರೆ ಈ ರೀತಿ‌ ಮೀಸಲಾತಿ ಅಡಿಯಲ್ಲಿ ನೇಮಕವಾಗುವ ನೌಕರರ ಅವಧಿ ಬಹುತೇಕ ಕೇವಲ 11 ತಿಂಗಳಾಗಿರುತ್ತೆ ಬಳಿಕ ಏಜೆನ್ಸಿ ಯವರು ಬೇರೆಯವರನ್ನು ನೇಮಿಸಬಹುದು ಅಂದರೆ ಮೀಸಲಾತಿ ಅಡಿಯಲ್ಲಿ ನೇಮಕವಾಗುವ ಹೊರಗುತ್ತಿಗೆ ನೌಕರರಿಗೆ ಸಾಮಾಜಿಕ ‌ನ್ಯಾಯ ಒಂದು ವರ್ಷಕ್ಕೆ ಸೀಮೀತವಾಗುವುದಾದರೆ ಅಂತಹ ಸಾಮಾಜಿಕ ‌ನ್ಯಾಯಕ್ಕೆ ಯಾವ ಅರ್ಥವಿದೆ?

ಒಬ್ಬ ಮನುಷ್ಯ ಒಂದು ಘನತೆಯ ಬದುಕು ರೂಪಿಸಿಕೊಳ್ಳಬೇಕಾದರೆ ಒಂದು ನಿರಂತವಾದ ದುಡಿಮೆ ಬೇಕು ಬಳಿಕ ಅವನು/ ಅವಳ ದುಡಿಮೆಗೆ ತಕ್ಕುದಾದ ವೇತನ ಬಡ್ತಿ ಅತ್ಯಂತ ಅತ್ಯಗತ್ಯ ವೆಂದು ನಮ್ಮ ಸಂವಿಧಾನದ ಬದುಕುವ ಸ್ವಾತಂತ್ರ್ಯದ ಆಶಯವಾಗಿದೆ ಅದನ್ನು ಅನುಸರಿಸಿ ಸರ್ವೋಚ್ಚ ನ್ಯಾಯಾಲಯದ ನೀಡಿದ ರಫ್ತಕೋರ್ಸ್ ತೀರ್ಪು ನೀಡಿದೆ. ಆದರೆ ರಾಜ್ಯ ಸರ್ಕಾರ ಮನುಷ್ಯನ ಅಗತ್ಯ ಮೂಲಭೂತ ಹಕ್ಕನ್ನು ನಿರಾಕರಿಸಿ ಕೇವಲ ಕಣ್ಣೋರೆಸುವ ಸಾಮಾಜಿಕ ‌ನ್ಯಾಯ ನೀಡಲು ಮುಂದಾಗಿರುವುದು ಈ ಅಧಿಸೂಚನೆಯಡಿಯಲ್ಲಿ ನೇಮಕವಾಗುವ ದಲಿತ,ಹಿಂದುಳಿತ,ಅಲ್ಪಸಂಖ್ಯಾತ ಹಾಗೂ ಮಹಿಳೆಯರು‌ ಮತ್ತು ವಿಶೇಷ ಚೇತನರರ ಬದುಕನ್ನು ಅತಂತ್ರಗೊಳಿಸುವ ಹುನ್ನಾರವಲ್ಲದೆ ಮತ್ತೇನೋ ಅಲ್ಲ.

ಹಾಗಾಗಿ ಸರ್ಕಾರಿ ಹೊರಗುತ್ತಿಗೆ ವ್ಯವಸ್ಥೆಯ ನೇಮಕಾತಿಯಲ್ಲಿ ಜಾರಿಗೊಳಿಸುವ ಮೀಸಲಾತಿಯ ಈ ಅಧಿಸೂಚನೆಯನ್ನು ಸ್ವಾಗತಿಸುತ್ತಲೇ ಇದರ ಆಧಾರದಲ್ಲಿ ನೇಮಕ ಹೊಂದಿದವರು ಆ‌ ಹುದ್ದೆಗಳಲ್ಲಿ ನಿರಂತರವಾಗಿ ಮುಂದುವರೆಯಲು ಮತ್ತು ಕನಿಷ್ಟ 5 ವರ್ಷ ಸೇವಾವಧಿ ಪೂರೈಸಿದವರಿಗೆ ಖಾಯಂ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ(ಕೃಪಾಂಕ) ನೀಡಬೇಕು ಕನಿಷ್ಟ10 ವರ್ಷ ಸೇವೆ ಸಲ್ಲಿಸಿದವರನ್ನು ಖಾಯಂಗೊಳಿಸಬೇಕು ಅಲ್ಲಿಯವರಿಗೆ ಸುಪ್ರೀಂಕೋರ್ಟ್ ಕೋರ್ಟ್ ಆದೇಶದಂತೆ ಸಮಾನ‌ಕೆಲಸಕ್ಕೆ ಸಮಾನ ವೇತನ ಖಾತ್ರಿಪಡಿಸಬೇಕು ಎನ್ನುವ ಸಾಮಾಜಿಕ ಒತ್ತಡವನ್ನು ನಾವು ಜನ ಚಳವಳಿ ಮೂಲಕ ರೂಪಿಸಬೇಕಿದೆ.

ಇದನ್ನು ನೋಡಿ : ಗ್ರೇಸ್ ಮಾರ್ಕ್ಸ್‌ : ಶಾಲಾ ಶಿಕ್ಷಣದ ಹೀನಾಯ ಸ್ಥಿತಿ ಅನಾವರಣJanashakthi Media

 

Donate Janashakthi Media

Leave a Reply

Your email address will not be published. Required fields are marked *