ಮೋದಿ, ಶಾ ಜೆತೆಗಿನ ಫೋಟೊಗಳು ವೈರಲ್
ನವದೆಹಲಿ ಜ 27 : ದೆಹಲಿಯ ಕೆಂಪು ಕೋಟೆಗೆ ರೈತರು ನುಗ್ಗಿದ್ದು ಮತ್ತು ಸಿಖ್ ಧ್ವಜವನ್ನು ಹಾರಿಸಿದ್ದು ದೇಶದಲ್ಲಿ ಬಹಳಷ್ಟು ಚರ್ಚೆಯಾಗುತ್ತಿರುವ ಸಂದರ್ಭದಲ್ಲಿಯೇ ಒಂದರ ಹಿಂದೆ ಒಂದರಂತೆ ಸತ್ಯಾಂಶ ಹೊರಬೀಳುತ್ತಿದೆ. ಕೆಂಪುಕೋಟೆಯಲ್ಲಿ ಸಿಖ್ ಧ್ವಜಾರೋಹಣ ನಡೆಸಿದ್ದು BJP ಯ ಕಾರ್ಯಕರ್ತ ದೀಪ್ ಸಿಧು ಎಂಬ ಸತ್ಯಾಂಶ ಈಗ ಒಂದೊಂದಾಗಿ ತೆರೆದುಕೊಳ್ಳುತ್ತಿದೆ.
ಜನವರಿ 26 ರ ಮಂಗಳವಾರ ನಡೆದ ಟ್ರ್ಯಾಕ್ಟರ್ ರ‌್ಯಾಲಿಯಲ್ಲಿ “ತಾನು ಮತ್ತು ಇತರ ಕೆಲ ಪ್ರತಿಭಟನಾಕಾರ ರೈತರು ನಿಶಾನ್ ಸಾಹಿಬ್ ಧ್ವಜವನ್ನು ಹಾರಿಸಿದ್ದಾಗಿ ಫೇಸ್‌ಬುಕ್ ಲೈವ್ ನಲ್ಲಿ ನಟ ಮತ್ತು ಬಿಜೆಪಿ ಕಾರ್ಯಕರ್ತ ದೀಪ್ ಸಿಧು ಹೇಳಿದ್ದಾರೆ.
“ನಾವು ಪ್ರತಿಭಟಿಸುವ ನಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸುವಾಗ ನಾವು ಕೆಂಪು ಕೋಟೆಯಲ್ಲಿ ನಿಶಾನ್ ಸಾಹಿಬ್ ಧ್ವಜವನ್ನು ಮಾತ್ರ ಹಾರಿಸಿದ್ದೇವೆ” ಎಂದು ಅವರು ಫೇಸ್‌ಬುಕ್ ಲೈವ್ ವೀಡಿಯೊದಲ್ಲಿ ತಿಳಿಸಿದ್ದಾರೆ. ಕೆಂಪುಕೋಟೆಯ ಮೇಲೆ ಧ್ವಜ ಹಾರಿಸಿದ್ದು ಮತ್ತು ಒಳಗೆ ನಿಗ್ಗದ್ದು ನಮ್ಮ ಸಂಯುಕ್ತ ಕಿಸಾನ್ ಮೋರ್ಚಾದ ಪ್ರತಿಭಟನೆಕಾರರು ಅಲ್ಲ ಎಂದು AIKS ನ ಪ್ರಧಾನ ಕಾರ್ಯದರ್ಶಿ ಹನನ್ ಮುಲ್ಲಾ ಘೋಷಣೆ ಮಾಡುತ್ತಿದ್ದಂತೆ ಮತ್ತಷ್ಟು ರೋಚಕ ತಿರುವು ಪಡೆದುಕೊಂಡಿತು.
ಹೋರಾಟ ಪ್ರಮುಖ ನಾಯಕರೊಬ್ಬರು ಈ ರೀತಿ ಹೇಳಿಕೆ ನೀಡಿದ್ದಾರೆ ಎನ್ನುವುದಾದರೆ ಈ ದೀಪ್ ಸಿಧು ಯಾರು ಎಂದು ತಿಳಿಯ ಹೋರಾಟಾಗ ಕಂಡ ಅಂಶಗಳು ಹುಬ್ಬೇರಿಸುವಂತೆ ಮಾಡುತ್ತಿವೆ. ದೀಪ್ ಸಿಧು ಮೋದಿ, ಶಾ ಆಪ್ತರಲ್ಲಿ ಒಬ್ಬರಾಗಿದ್ದಾರೆ. ಬಿಜೆಪಿಯ ಗುರುತಿಸಿಕೊಂಡಿರುವ ನಟನಾಗಿದ್ದಾನೆ. ಈ ಕುರಿತು ಅನೇಕ ಫೋಟೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ದೆಹಲಿ ರೈತರ ಹೋರಾಟವನ್ನು ಧಿಕ್ಕು ತಪ್ಪಿಸುವುದಕ್ಕಾಗಿ ಈಗಾಗಲೆ ಮೂರಕ್ಕೂ ಹೆಚ್ಚುಬಾರಿ ಅಹಿತಕರ ಘಟನೆ ನಡೆಸಲು ಬಿಜೆಪಿ ಕಾರ್ಯಕರ್ತರು ಪ್ರಯತ್ನ ನಡೆಸಿ ಸ್ವತಃ ರೈತರ ಕೈಯಲ್ಲೆ ಸಿಕ್ಕಿ ಬಿದ್ದಿದ್ದರು. ಒಬ್ಬ ಪಾಕಿಸ್ತಾನ ಘೋಷಣೆ ಕೂಗಿದ್ದ, ಮತ್ತೊಬ್ಬ ರೈತರ ಮೇಲೆ ಗುಂಡುಹಾಕಲು ಪ್ರಯತ್ನಿಸಿದ್ದ, ಈಗ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಸಿಖ್ ಧ್ವಜ ಹಾರಿಸಿ ಸಿಕ್ಕಿ ಬಿದ್ದಿದ್ದಾನೆ.
ಈ ಘಟನೆಯನ್ನು ತನಿಖೆಗೆ ಒಳಪಡಿಸಬೇಕು. ಮತ್ತು ಕೇಂದ್ರದ ನಿಲುವೇ ಈ ಅಹಿತಕರ ಘಟನೆಗೆ ಕಾರಣ, ವಿಳಂಬ ನೀತಿ ಬಿಟ್ಟು ಕೃಷಿಕಾಯ್ದೆ ರದ್ದು ಮಾಡಬೇಕು ಎಂದು ಕಿಸಾನ್ ಮೋರ್ಚಾ ತಿಳಿಸಿದೆ.