ಬೆಂಗಳೂರು : ಕಾಂಗ್ರೆಸ್ನಲ್ಲಿ ಸಿಎಂ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಹಾಗಾಗಿ ಕಾರ್ಯಕ್ರಮವನ್ನು ಸ್ಥಗಿತಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿದ್ದರಾಮಯ್ಯ ನಾಳೆ ಪ್ರಮಾಣವಚನ ಸ್ವಿಕರಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತಯಾರಿ ನಡೆಸಿದ್ದರು.
ಸಿದ್ದರಾಮಯ್ಯ ಆಯ್ಕೆ ವಿಚಾರಕ್ಕೆ ಡಿಕೆಶಿ ವಿರೋಧ ಮಾಡಿದ್ದು, ಹೈಕಮಾಂಡ್ ಬಳಿ ಆಕ್ರೋಶ ತೋಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ದೆಹಲಿಯಲ್ಲಿ ರಣದೀಪ್ ಸುರ್ಜೇವಾಲ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸಿಎಂ ಆಯ್ಕೆ ಅಂತಿಮಗೊಂಡಿಲ್ಲ. 48 ರಿಂದ 72 ಗಂಟೆಯಲ್ಲಿ ನೂತನ ಸಚಿವ ಸಂಪುಟ ರಚನೆಯಾಗಲಿದೆ ಎಂದು ತಿಳಿಸಿದ್ದಾರೆ.
‘ಹೈ’ ಸುಸ್ತು : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದ ಮುಂದಿನ ಸಿಎಂ ಆಯ್ಕೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಅವರನ್ನು ಮನವೊಲಿಕೆಯಲ್ಲೂ ತೊಡಗಿದ್ದಾರೆ. ಆದ್ರೇ ಮುಖ್ಯಮಂತ್ರಿ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಗಿ ಪಟ್ಟು ಹಿಡಿದಿದ್ದು, ಯಾವುದೇ ಷರತ್ತಿಗೂ ಮಣಿದಿಲ್ಲ ಎಂಬುದಾಗಿ ತಿಳಿದು ಬಂದಿದೆ.
ಡಿ.ಕೆ ಶಿವಕುಮಾರ್, ಖರ್ಗೆ ಬಳಿ ಮನವಿ ಮಾಡಿದ್ದು, ಯಾವುದೇ ಕಾರಣಕ್ಕೂ ಬೇರೆ ಹುದ್ದೆ ನನಗೆ ಬೇಡವೇ ಬೇಡ. ಸಿಎಂ ಸ್ಥಾನ ಕೊಡಿ ಇಲ್ಲವೇ ಬೇರೆ ಸ್ಥಾನ ಬೇಡವೇ ಬೇಡ. ಸರ್ಕಾರದಿಂದ ಹೊರಗಿರುವುದಾಗಿ ಬಿಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಸಿದ್ಧರಾಮಯ್ಯ ಸಿಎಂ ಆಯ್ಕೆಯಾಗಿದ್ದಾರೆ. ಪ್ರಮಾಣವಚನ ಮಾತ್ರವೇ ಬಾಕಿ ಎನ್ನುವ ಸಿದ್ದು ಆಪ್ತರು ಮಾಧ್ಯಮಗಳಿಗೆ ನೀಡಿದಂತ ಹೇಳಿಕೆಗಳ ಬಗ್ಗೆ ಡಿಕೆ ಶಿವಕುಮಾರ್, ಖರ್ಗೆ ಮುಂದೆಯೇ ಗರಂ ಆಗಿ, ಅಸಮಾಧಾನವನ್ನು ಹೊರ ಹಾಕಿದ್ದಾರೆ ಎನ್ನಲಾಗುತ್ತಿದೆ.
ಯಾವ ಆಧಾರದಲ್ಲಿ ನಾಳೆ ಪ್ರಮಾಣವಚನ ಎಂದು ಹೇಳುತ್ತಾರೆ? ರಾಜ್ಯಪಾಲರ ಲಭ್ಯತೆ ಇದೆಯೋ ಇಲ್ಲವೋ ಎಂಬ ಖಚಿತತೆಯೇ ಇಲ್ಲ. ಹೀಗಿದ್ದಾಗ ಅವರೆಲ್ಲರೂ ಹೇಗೆ ಮಾಧ್ಯಮಗಳಿಗೆ ಹೇಳಬಲ್ಲರು. ಇದು ಒಪ್ಪುವ ಮಾತೆ ಅಲ್ಲ ಎಂಬುದಾಗಿ ಆಕ್ರೋಶವನ್ನು ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ, ಕಂಠೀರ ಸ್ಟೇಡಿಯಂನಲ್ಲಿ ನಡೆಯುತ್ತಿದ್ದಂತ ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮದ ಸಿದ್ಧತೆ ಈಗ ಸ್ಥಗಿತಗೊಂಡಿರೋದಾಗಿ ತಿಳಿದು ಬಂದಿದೆ.