ಯಾದಗಿರಿ: ಮುಂಬರುವ ಬಜೆಟ್ ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದು, ಅವರೇ ಮಂಡಿಸುತ್ತಾರೆ ಎಂಬ ಭರವಸೆ ಇದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿದರು.
ಇದನ್ನೂ ಓದಿ : ಬೇರುಬಿಟ್ಟ ಚಿಂತನೆಗಳೂ ಸುಡುವ ಹಾಳೆಗಳೂ
ನಾವು ಯಾರೂ ದೆಹಲಿಗೆ ಹೋಗುವುದಿಲ್ಲ. ಸಿಎಂ ಬಗ್ಗೆ ಹಾದಿಯಲ್ಲಿ ಹೇಳುವುದಲ್ಲ, ಅದು ಹಾದಿಯಲ್ಲಿ ಸಿಗುವುದಿಲ್ಲ. ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಕ್ರಾಂತಿ ಮುಗಿದ ಮೇಲೆ ಈ ಬಗ್ಗೆ ಹೇಳೋಣ. ಅದಕ್ಕೆ ಪಕ್ಷ, ಹೈಕಮಾಂಡ್ ಇದೆ. ಅದಕ್ಕೆ ತನ್ನದೆ ಆದ ದಾರಿ, ದಾಟಿ ಇದೆ’ ಎಂದರು. ಇದೇ ವೇಳೆ ಅವರ ಹಿಂದೆ ನಿಂತಿದ್ದ ಬೆಂಬಲಿಗರು, ‘ಮುಂದಿನ ಸಿಎಂ ಸತೀಶ ಜಾರಕಿಹೊಳಿ’ ಎಂದು ಘೋಷಣೆ ಕೂಗಿದರು.
‘ಬೆಂಗಳೂರಿನಲ್ಲಿ ಅಕ್ರಮ ಒತ್ತವರಿ ಪ್ರದೇಶ ನೆಲಸಮ ಮಾಡಿರುವ ಪ್ರಕರಣದಲ್ಲಿ ಭೂಮಿಯ ಮಾಲೀಕರು ಯಾರು? ಏಕೆ ತೆರವು ಮಾಡಿದರು ಎಂಬುದನ್ನು ಚರ್ಚಿಸಿ, ಮಾನವೀಯತೆ ದೃಷ್ಟಿಯಿಂದ ವಸತಿ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ’ ಎಂದರು.
ಡ್ರಗ್ಸ್ ಮತ್ತು ಹೊಸ ವರ್ಷ ಆಚರಣೆಗೂ ಸಂಬಂಧ ಇರಬಹುದು. ಕರ್ನಾಟಕ ಮತ್ತು ಮಹಾರಾಷ್ಟ್ರ ಪೊಲೀಸರು ಜಂಟಿಯಾಗಿ ತನಿಖೆ ಮಾಡಲಿ. ‘ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದಾಗ ಡ್ರಗ್ಸ್ ದಂಧೆಯೇ ಮೊದಲ ಶತ್ರು. ಎಲ್ಲ ಸರ್ಕಾರಗಳು ಅದನ್ನು ನಿಗ್ರಹ ಮಾಡಬೇಕಾಗುತ್ತದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಪೊಲೀಸರು ಜಂಟಿಯಾಗಿ ತನಿಖೆ ಮಾಡಲಿ. ಬಿಜೆಪಿಯವರು ಹೇಳಿದ ಮಾತ್ರಕ್ಕೆ ಗೃಹ ಸಚಿವರು ರಾಜೀನಾಮೆ ಕೊಡಬೇಕಾಗಿಲ್ಲ. ಅವರ ಸರ್ಕಾರದಲ್ಲಿಯೂ ಸಾಕಷ್ಟು ವೈಫಲ್ಯಗಳು ಆಗಿದ್ದವು’ ಎಂದು ಹೇಳಿದರು.
ಇದನ್ನೂ ನೋಡಿ : ಕುವೆಂಪು ಜನ್ಮ ದಿನ | ಮಾನವನ ಮನಸ್ಸು ಶ್ರೀಮಂತವಾಗಬೇಕಾದರೆ ಕುವೆಂಪುರನ್ನು ಓದಬೇಕು – ಡಾ. ಬಿ.ಆರ್. ಮಂಜುನಾಥ್
