ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಂಸಹಾರ ಸೇವನೇ ಮಾಡಿ ದೇವಸ್ಥಾನ ಪ್ರವೇಶಿಸಿರುವುದು ಚರ್ಚೆಯ ವಿಷಯವೇ ಅಲ್ಲ, ಆದರೆ ಬಿಜೆಪಿಯವರಿಗೆ ಚರ್ಚೆಗೆ ಬೇರೆ ವಿಷಯವೇ ಇಲ್ಲ. ಅದಕ್ಕೆ ಇಂತಹದ್ದೆಲ್ಲವನ್ನು ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶ ಮಾಡಿರುವುದು ತಪ್ಪಲ್ಲ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಮಾಂಸಾಹಾರ ಸೇವನೆ ಮಾಡುವುದು ಯಾವುದೇ ತಪ್ಪಿಲ್ಲ. ಹಿಂದೂಗಳಲ್ಲಿಯೂ ಸಾಕಷ್ಟು ಮಂದಿ ಮಾಂಸಾಹಾರಿಗಳಿದ್ದಾರೆ. ಹಿಂದೂ ದೇವರಿಗೂ ಮಾಂಸಾಹಾರ ಪ್ರಸಾದ ಮಾಡ್ತಾರೆ, ಅದರಲ್ಲೇನೂ ತಪ್ಪಿಲ್ಲ. ಬಿಜೆಪಿಯವರು ಇಂತಹ ವಿಷಯ ಬಿಟ್ಟು ಸಾವರ್ಕರ್ ವಿಷಯದ ಬಗ್ಗೆ ಚರ್ಚೆ ಮಾಡಲಿ ಎಂದು ಹೇಳಿದ್ದಾರೆ.
ಮಾಂಸ ತಿನ್ನಬೇಡಿ ಎಂದು ದೇವರು ಹೇಳಿಲ್ಲ’ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡ ಪ್ರಮೋದ್ ಮುತಾಲಿಕ್ ಮಾಂಸ ಸೇವನೆ ವಿಚಾರದಲ್ಲಿ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡರು. ಬಿಜೆಪಿಯವರು ಸುಮ್ಮನೆ ಸಿದ್ದರಾಮಯ್ಯ ಅವರನ್ನು ಎಳೆದು ತರುತ್ತಿದ್ದಾರೆ. ಈ ವಿಷಯದಲ್ಲಿ ಬಿಜೆಪಿಯ ವರ್ತನೆಯ ಅಸಹ್ಯ ತರಿಸುವಂತಿದೆ ಎಂದಿದ್ದಾರೆ.
ಈದ್ಗಾ ಮೈದಾನ ಸಾರ್ವಜನಿಕ ಸ್ವತ್ತು. ಅನುಮತಿ ಕೊಟ್ಟರೂ ಸರಿ ಕೊಡದಿದ್ದರೂ ಸರಿ ಗಣೆಶೋತ್ಸವ ಆಚರಣೆ ಮಾಡೇ ಮಾಡುತ್ತೇವೆ. ಪಾಲಿಕೆಗೆ ಇದು ಕೊನೆಯ ಗಡವು. ಈ ಗಡುವು ಮೀರಿದ್ರೆ ನಾವು ಗಣೇಶ ಆಚರಣೆ ಮಾಡೇ ಮಾಡುತ್ತೇವೆ. ಪ್ರತಿ ಗಣೇಶ ಪೆಂಡಾಲ್ನಲ್ಲೂ ಸಾವರ್ಕರ್ ಫೋಟೊ ಇಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನೀಡಲಾದ ಗಡುವು ಅಂತ್ಯ ಹಿನ್ನೆಲೆ ಸಹಿ ಸಂಗ್ರಹ ಅಭಿಯಾನ ಕೈಗೊಂಡು ಬಳಿಕ ಪಾಲಿಕೆ ಮುತ್ತಿಗೆ ಹಾಕಲು ಸಂಘಟನೆಗಳು ಸಿದ್ಧತೆ ಮಾಡಿಕೊಂಡಿವೆ.