ಮೈಸೂರು : ಮುಡಾ ಕೇಸ್ ನಲ್ಲಿ ಸಿದ್ದರಾಮಯ್ಯ ನವರ ಪಾತ್ರ ಇಲ್ಲದ ಸಂದರ್ಭದಲ್ಲಿಯೂ ಈ ಮಟ್ಟಕ್ಕೆ ಪರಿಸ್ಥಿತಿ ಬಂದಿದೆ. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಇಂದು ಕರಾಳ ದಿನ. ಈ ವಿಚಾರವನ್ನ ಸುಮ್ಮನೆ ಬಿಡೋದಿಲ್ಲ ಎಂದು ಕೈ ವಕ್ತಾರ ಲಕ್ಷ್ಮಣ್ ಹೇಳಿದ್ದಾರೆ.
ಈ ಕರಿತು ಮಾತನಾಡಿದ ಕೈ ವಕ್ತಾರ ಲಕ್ಷ್ಮಣ್, ʼಮುಡಾ ಹಗರಣದಲ್ಲಿ ಸಿಎಂ ಪಾತ್ರವಿಲ್ಲದಿದ್ದರು ಅವರ ವಿರುದ್ದ ವಿಚಾರಣೆಗೆ ಆದೇಶಿಸಲಾಗಿದೆ. ಈ ವಿಚಾರವನ್ನ ಸುಮ್ಮನೆ ಬಿಡೋದಿಲ್ಲ. ಮುಂದಿನ ದಿನಗಳಲ್ಲಿ ನ್ಯಾಯಾಂಗ ಹೋರಾಟ ಮಾಡುತ್ತೇವೆʼ ಎಂದರು.
ಇದನ್ನು ಓದಿ : ಮುಡಾ ಹಗರಣ: ಕೋರ್ಟ್ ತೀರ್ಪಿನ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
ರಾಜ್ಯಪಾಲರು ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಕರ್ನಾಟಕದ ಮಾನ ಹರಾಜು ಹಾಕುತ್ತಿದ್ದಾರೆ. ಸುಭದ್ರ ಕಾಂಗ್ರೆಸ್ ಸರ್ಕಾರವನ್ನು ಬಿಳಿಸುವುದೇ ಬಿಜೆಪಿ ಯವರ ಚಾಳಿಯಾಗಿದೆ ಅಧಿಕಾರದ ದಾಹ, ಮದ ಬಿಜೆಪಿಗೆ ಹತ್ತಿದೆ ಹಾಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ ಕಿಡಿಕಾರಿದರು.
ಒಬ್ಬ ಹಿಂದುಳಿದ ನಾಯಕನ್ನು ಕೆಳಗೆ ಇಳಿಸಬೇಕು ಎನ್ನುವುದೇ ಬಿಜೆಪಿ ಹುನ್ನಾರ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ರಾಜ್ಯಪಾಲರು ತಮ್ಮ ಕಚೇರಿಯನ್ನು ಮಲ್ಲೇಶ್ವರಂಗೆ ಸ್ಥಳಾಂತರ ಮಾಡಿ ಕಾರ್ಯಕರ್ತರು ಯಾರು ದೃತಿಗೇಡಬೇಡಿ. ಸತ್ಯ ಮೇವ ಜಯತೇ ಇಡೀ ಕಾಂಗ್ರೆಸ್ ಸಿದ್ದರಾಮಯ್ಯ ನವರ ಜೊತೆ ಇರುತ್ತೆ ಅಂತ ಲಕ್ಷ್ಮಣ್ ತಿಳಿಸಿದರು.
ಇದನ್ನು ನೋಡಿ : ಮುಡಾ ಹಗರಣ: ಬಿಜೆಪಿ, ಜೆಡಿಎಸ್ ನಾಟಕ – ಕಾಂಗ್ರೆಸ್ ಶಾಸಕರ ಆರೋಪJanashakthi Media