ಬೆಂಗಳೂರು: ಒಂದು ವರ್ಷಕ್ಕೆ ಕರ್ನಾಟಕದಿಂದ ಮೂರು ಲಕ್ಷ ಕೋಟಿ ತೆರಿಗೆ ಸಂಗ್ರಹವಾಗುತ್ತದೆ. ಕೇಂದ್ರಕ್ಕೆ. ಇದರಿಂದ ರಾಜ್ಯಕ್ಕೆ 47 ಸಾವಿರ ಕೋಟಿ ಮಾತ್ರ ವಾಪಸ್ ಬರುತ್ತದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಗೆ 28 ಸಾವಿರ ಕೋಟಿ ಕಡಿಮೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಸಂಯುಕ್ತ ಹೋರಾಟ-ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ಜನ ಪರ್ಯಾಯ ಬಜೆಟ್ ಅಧಿವೇಶನದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರದ ಹಣ ಅಂದರೆ ಬೆವರು ಸುರಿಸಿ ದುಡಿಯುವವರ ಹಣ, ಬೆಲೆ ಏರಿಕೆ ನಿರಂತರವಾಗಿ ನಡೆಯುತ್ತಿದೆ. ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ, ಚರ್ಮ ದಪ್ಪಾಗಿದೆ, ಸ್ವಲ್ಪವೂ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಇದನ್ನು ಓದಿ: ಜನ ಪರ್ಯಾಯ ಬಜೆಟ್ ಅಧಿವೇಶನ: ಜನಪರವಾದ ಹಲವು ನಿರ್ಣಯಗಳು ಅಂಗೀಕಾರ
ಪ್ರಜಾಪ್ರಭುತ್ವದಲ್ಲಿ ಹೋರಾಟ ಬಹಳ ಮುಖ್ಯ, ನಾವು ನಿಮ್ಮ ಹೋರಾಟದ ಜೊತೆಗೆ ಇರುತ್ತೇವೆ. ನಾವು ಅಧಿಕಾರಕ್ಕೆ ಬಂದರೆ ಈಗಿನ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮತ್ತು ಜಾನುವಾರು ಹತ್ಯೆ ಮತ್ತು ಸಂರಕ್ಷಣಾ ಕಾಯ್ದೆ ತಿದ್ದುಪಡಿಗಳನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿದರು.
ರಾಜ್ಯಗಳಿಂದ ಸಂಗ್ರಹವಾದ ತೆರಿಗೆ ಹಣವನ್ನ ಕೇಂದ್ರ ಲೂಟಿ ಮಾಡಲಿ ಈ ಗುಲಾಮರಿಗೆ ಅದನ್ನ ಪ್ರಶ್ನೆ ಮಾಡಿ ನಮ್ಮ ಪಾಲನ್ನ ಪಡೆಯೋ ತಾಕತ್ತು ಇಲ್ಲಾ ಅಂದರೆ ಇವರೆಲ್ಲಾ ಯಾಕೆ ಅಧಿಕಾರದಲ್ಲಿರಬೇಕು?