ನವದೆಹಲಿ: ಯುವಕನೊಬ್ಬ ನಡು ರಸ್ತೆಯಲ್ಲಿ ಯುವತಿಯನ್ನು ಥಳಿಸಿ ಬಲವಂತವಾಗಿ ಕಾರಿನೊಳಗೆ ಕೂರಿಸಿ ಕರೆದೊಯ್ದ ಘಟನೆ ನವದೆಹಲಿಯಲ್ಲಿ ನಡೆದಿದೆ.
ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.
“ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಲಾಗಿದೆ. ಇಬ್ಬರು ಹುಡುಗರು ಮತ್ತು ಓರ್ವ ಹುಡುಗಿ ರೋಹಿಣಿಯಿಂದ ವಿಕಾಸಪುರಿಗೆ ಉಬರ್ ಮೂಲಕ ವಾಹನವನ್ನು ಬುಕ್ ಮಾಡಿದ್ದರು. ದಾರಿಯಲ್ಲಿ, ಅವರ ನಡುವೆ ವಾಗ್ವಾದ ಮತ್ತು ಜಗಳ ನಡೆಯಿತು. ಜಗಳದ ನಂತರ ಹುಡುಗಿ ಕಾರ್ ನಿಂದ ಇಳಿದು ಹೊರಡಲು ಬಯಸಿದ್ದಳು. ಆಗ ಆಕೆಯೆನ್ನು ಬಲವಂತವಾಗಿ ಕಾರಿನೊಳಗೆ ತಳ್ಳಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
महिला को ज़बरन गाड़ी में डालने और पीटने की इस वायरल वीडियो पर संज्ञान लेते हुए मैं दिल्ली पुलिस को नोटिस जारी कर रही हूँ। इन लोगों के ख़िलाफ़ आयोग सख़्त एक्शन सुनिश्चित करेगा। pic.twitter.com/szAww5ykxD
— Swati Maliwal (@SwatiJaiHind) March 19, 2023
ಅಧಿಕಾರಿಗಳ ಪ್ರಕಾರ, ಚಾಲಕ ಮತ್ತು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಹೆಚ್ಚುವರಿ ತನಿಖೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಯುವತಿನ್ನು ಬಲವಂತವಾಗಿ ವಾಹನಕ್ಕೆ ಹತ್ತಿಸಿ ಥಳಿಸಿದ ಈ ವೈರಲ್ ವೀಡಿಯೊವನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ದೆಹಲಿ ಪೊಲೀಸರಿಗೆ ನೋಟಿಸ್ ನೀಡುತ್ತಿರುವುದಾಗಿ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದೆ.