ಶಿವಮೊಗ್ಗ ಜ, 22: ಶಿವಮೊಗ್ಗ, ಭದ್ರಾವತಿ ಮತ್ತು ಚಿಕ್ಕಮಗಳೂರಿನಲ್ಲಿ ಗುರುವಾರ ರಾತ್ರಿ 10:30 ರಿಂದ 10:40 ರ ನಡುವೆ ನಿಗೂಢ ಸ್ಪೋಟ ಸಂಭಿವಿಸಿದ್ದು ನಿಜವಾದ ಕಾರಣ ತಿಳಿದು ಬಂದಿಲ್ಲ. ಕೆಲವರು ಲಘು ಭೂಕಂಪ ಎಂದರೆ ಕೆಲವರು ಜಲ್ಲಿ ಕ್ರಶರ್ ಸ್ಪೋಟದಿಂದ ಹೀಗಾಗಿದೆ ಎಂದು ಹೇಳುತ್ತಿದ್ದಾರೆ.
ಭಯ ಭೀತರಾದ ಜನರು ಮನೆಗಳಿಂದ ಹೊರ ಬಂದು ಭೂಮಿ ಕಂಪನದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ದೂರದ ಸಂಬಂಂದಿಕರಿಗೆ ಫೋನ್ ಮೂಲಕ ಯೋಗಕ್ಷೇಮ ವಿಚಾರಿಸುತ್ತಿದ್ದರು.
ಆದರೆ ಹುಣಸೋಡು ರೈಲ್ವೆ ಕ್ರಶರ್ ನಲ್ಲಿ 50 ಡೈನಾಮೈಟ್ ಬ್ಲಾಸ್ಟ್ ನಡೆದಿದ್ದು 15 ಬಿಹಾರಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭಾರೀ ಶಬ್ದಕ್ಕೆ ಇದೇ ಮೂಲ ಎಂದು ಹೇಳಲಾಗುತ್ತಿದ್ದು ಕಾರ್ಮಿಕರ ದೇಹಗಳು ಛಿದ್ರ ಛಿದ್ರವಾಗಿ ಬಿದ್ದಿವೆ. ಇಲ್ಲಿ ಬಹಳಷ್ಟು ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಸ್ಪೋಟದಿಂದ ಭೂಮಿ ಕಂಪಿಸಿತಾ ಅಥವಾ ಭೂಕಂಪದಿಂದ ಜಿಲೆಟಿನ್ ಸ್ಪೋಟ್ ಗೊಂಡಿದೆಯಾ ಎಂಬ ಎಂಬ ಬಗ್ಗೆ ತಜ್ಞರು ಮಾಹಿತಿ ನೀಡಬೇಕಿದೆ.
ಶಿವಮೊಗ್ಗ ಹಾಗೂ ಚಿಕ್ಕಮಗಳೂರು, ಉತ್ತರ ಕನ್ನಡ, ದಾವಣಗೆರೆಯಲ್ಲಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಸ್ಫೋಟದ ಶಬ್ದ ಕೇಳಿ ಬಂದಿದ್ದು ಮತ್ತಷ್ಟು ಅನುಮಾನ ಹುಟ್ಟಿಸುತ್ತಿದೆ. ಕ್ರಶರ್ ಸ್ಪೋಟವಾಗಿದ್ದರೆ ಅದು ಶಿವಮೊಗ್ಗದ ಹುಣಸೋಡಿನಲ್ಲಿ ಮಾತ್ರ ಆಗಬೇಕಿತ್ತು, ಆದರೆ ಶಿವಮೊಗ್ಗ ನಗರ, ಭದ್ರಾವತಿ, ಹೊಳೆಹೊನ್ನೂರು, ಹೊಸನಗರ, ತೀರ್ಥಹಳ್ಳಿ, ಸಾಗರ, ಸೊರಬ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಎನ್.ಆರ್.ಪುರ, ಬಾಳೆಹೊನ್ನೂರು ಭಾಗದಲ್ಲೂ ಶಬ್ದ ಅನುಭವವಾಗಿದೆ. ದಾವಣಗೆರೆ, ಉತ್ತರ ಕನ್ನಡ ಕೆಲ ಭಾಗಗಳಲ್ಲೂ ಭೂಮಿ ಕಂಪಿಸಿದ ವರದಿಯಾಗಿದೆ. ಭಾರೀ ಶಬ್ದಕ್ಕೆ ಕಿಟಿಕಿ ಬಾಗಿಲುಗಳು ಅಲುಗಾಡಿದ್ದು ನಿಗೂಢ ಶಬ್ದದ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿವೆ. ವಿಧಿ ವಿಜ್ಞಾನ ದಿಂದ ಇನ್ನಷ್ಟು ಮಾಹಿತಿ ಸಿಗಬೇಕಿದೆ.
ಶಿವಮೊಗ್ಗ ಜಿಲ್ಲೆಯ ಬಹುತೇಕ ಜನರು ರಾತ್ರಿ ನಿದ್ರೆಯನ್ನು ಮಾಡದೆ ಎಚ್ಚರವಾಗಿದ್ದರೂ ಮನೆಯ ಹೊರಗಡೆಯೇ ದಿನಪೂರ್ತಿ ಕಳೆದಿದ್ದಾರೆ. ಹುಣಸೋಡು ಗ್ರಾಮದ ಜನ ಮಾತ್ರ ಇದು ಕ್ರಶರ್ ಕಾರಣವಿರಬಹುದು ಮಾಲಿಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದಿದ್ದಾರೆ.