ನವಂಬರ್ 2020 ರೂ. 597.69 – ಮಾರ್ಚ್ 2021 ರೂ. 822.69
1 ಡಿಸೆಂಬರ್ +50ರೂ.; 16 ಡಿಸೆಂಬರ್ +50ರೂ; 4 ಫೆಬ್ರುವರಿ +25ರೂ.; 15 ಫೆಬ್ರುವರಿ +50ರೂ.; 25 ಫೆಬ್ರುವರಿ +25ರೂ; 1 ಮಾರ್ಚ್ +25ರೂ.
ಇದು ಬೆಂಗಳೂರಿನಲ್ಲಿ 14.2 ಕೆ.ಜಿ. ಅಡುಗೆ ಅನಿಲದ ಬೆಲೆಯಲ್ಲಿ ಏರಿಕೆ.
ಅಂದರೆ ಎರಡೇ ತಿಂಗಳಲ್ಲಿ 225ರೂ.(38%) ಏರಿಕೆ!
***
ಮುಂದೆ 875, 975, 995, 996, 997, 998, 999..1000?
ಖಂಡಿತಾ ಎತ್ತಬಹುದು
ಅಭಿಜಿತ್ ಬಿ.ಎಲ್ ಗೌಡ (ಫೇಸ್‍ಬುಕ್)
***
ಜನಗಳಿಗೆ ಹೇಗೋ, ಪ್ರಧಾನ ಮಂತ್ರಿಗಳಿಗಂತೂ ನೋಡಿ ಎಷ್ಟು ಸುಲಭ !
ಸುರೇಂದ್ರನ್ (ದಿ ಹಿಂದು)
***
ಅತ್ತ ಹೊಸದಾಗಿ ಮರುನಾಮಕರಂಗೊಂಡ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಂಬಾನಿ ಎಂಡ್‍ನಿಂದಅದಾನಿ ಎಂಡ್ ವರೆಗೆ ಬ್ಯಾಲೆಂಸಿಗ್ ಪ್ರದರ್ಶನ!
ಭಾರತ್ ಮಾತಾಕೀ .. ಜೈ!
ಸತೀಶ್ ಆಚಾರ್ಯ (ಸಿಫಿ. ಕಾಂ)
***
ಜೀವನರಂಗದಲ್ಲಿ ಮತ್ತೊಂದು ಪ್ರದರ್ಶನದ ಬಲವಂತ!
ಪಿ.ಮಹಮ್ಮದ್ (ವಾರ್ತಾಭಾರತಿ)
***
ಅವರು ಯೋಗಿಗಳು ..ತಿನ್ನುವುದಿಲ್ಲ…..ಇವರು ತಿನ್ನುವಂತಿಲ್ಲ! ಆರೂವರೆ ವರ್ಷಗಳ ನಂತರ ಹೊಸ ಆವೃತ್ತಿ!
‘ನ ಖಾವೂಂಗಾ ನ ಖಾನೇ ದೂಂಗಾ’
ಪಂಜು ಗಂಗೊಳ್ಳಿ (ಫೇಸ್‍ಬುಕ್)
***
ಈ ನಡುವೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿ ಪ್ರಕಟವಾಗಿದೆ. ಪೆಟ್ರೋಲ್ ಬಂಕ್ ಗಳಲ್ಲಿ ನಗುಮುಖದ ಪ್ರಧಾನ ಮಂತ್ರಿಗಳ ಹೋರ್ಡಿಂಗ್ ಗಳು ಪೆಟ್ರೋಲ್ ನೂರರತ್ತ, ಅಡುಗೆ ಅನಿಲ ಸಾವಿರದತ್ತ ಸಾಗಿರುವಾಗ ಏನು ಸಂದೇಶ ನೀಡುತ್ತವೆ ಎಂದು ಯೋಚಿಸುವಷ್ಟರಲ್ಲಿ ಚುನಾವಣಾ ಆಯೋಗ ಅವನ್ನು ತೆಗೆಯುವಂತೆ ಆದೇಶ ನೀಡಿದೆಯಂತೆ.
‘ಭಾರತ್ ಮಾತಾಕೀ ಜೈ’ ಈ ಫೋಟೋನಾದರೂ ಈಗ ಇಡಬಹುದಲ್ಲವೇ?
ಸತೀಶ ಆಚಾರ್ಯ (ನ್ಯೂಸ್ ಸ್ಟ್ರಿಂಗ್)
***
ಚುನಾವಣಾ ಆಯೋಗ ಪೆಟ್ರೋಲ್ ಬಂಕ್ ಗಳಲ್ಲಿ ಮಾತ್ರವಲ್ಲ ಕೋವಿಡ್ ಎದುರಿಸಲು ಲಸಿಕೆ ಹಾಕಿಸಿಕೊಂಡವರಿಗೆ ಕೊಡುವ ಪ್ರಮಾಣ ಪತ್ರದಲ್ಲಿ ಪ್ರಧಾನಿಗಳ ಫೋಟೋದ ಬಗ್ಗೆ ಆಕ್ಷೇಪ ಬಂದ ನಂತರ ಅದನ್ನೂ ತೆಗೆಸಿದ್ದಾರೆ ಎಂಬ ಸಂಗತಿಯತ್ತ ಗಮನ ಸೆಳೆದಿದ್ದಾರೆ ಸಮದರ್ಶಿಗಳು.
ಅದೇನೇ ಇರಲಿ, ಮುಂದಿನ ಎರಡು ತಿಂಗಳು ಎಲ್.ಪಿ.ಜಿ. ಪೆಟ್ರೋಲ್-ಡೀಸೆಲ್ ಬೆಲೆಗಳು ಏರುವುದಿಲ್ಲ ಎಂದು ಕಳೆದ ಆರು ವರ್ಷಗಳ ಅನುಭದಿಂದ ನಿರೀಕ್ಷಿಸಬಹುದೇ? ಕಾದು ನೋಡಬೇಕು. ಆದರೆ ಆಳುವ ಪಕ್ಷದವರ ಭಾಷಣಗಳ ಗ್ಯಾಸ್ ನಿಂದ ಖಾಲಿಯಾದ ಅನಿಲ ಸಿಲಿಂಡರ್ ಗಳನ್ನು ಪುಕ್ಕಟೆಯಾಗಿ ತುಂಬಿಸಿಕೊಳ್ಳಬೇಕು ಎಂದಂತೂ ನಿರೀಕ್ಷಿಸಬಹುದು?
ಉದಯ್ ದೇಬ್ (ಟ್ವಿಟರ್)