ನವದೆಹಲಿ ಫೆ 11: ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಏರಿಕೆಯಾಗಿದ್ದು ಗ್ರಾಹಕರು ಪರಿತಪಿಸುವಂತಾಗಿದೆ. ಇಂದು (ಗುರುವಾರ) ಪೆಟ್ರೋಲ್ ದರದಲ್ಲಿ 27 ಪೈಸ್ ಹಾಗೂ ಡಿಸೇಲ್ ದರದಲ್ಲಿ 34 ಪೈಸೆ ದಾಖಲೆಯ ಏರಿಕೆ ಕಂಡಿದೆ.
ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 87.85 ರೂ, ಹಾಗೂ ಡೀಸೆಲ್ ಬೆಲೆ 78.03 ರೂ. ತಲುಪಿದೆ. ಇನ್ನೂ ಮುಂಬೈನಲ್ಲಿ ಇಂದಿನ ಏರಿಕೆಯ ನಂತರ ಪೆಟ್ರೋಲ್ ದಾಖಲೆಯ 94.39ರೂ ಗೆ ಬಂದು ತಲುಪಿದೆ. ಇನ್ನೂ ಡಿಸೇಲ್ ಬೆಲೆ ಇಂದಿನ ಹೆಚ್ಚಳದ ನಂತರ 84.97 ರೂ. ಆಗಿದೆ.
ಬೆಂಗಳೂರಿನಲ್ಲೂ ಪೆಟ್ರೋಲ್ ಲೀಟರ್ ಗೆ 90.63 ರೂ. ಆಗಿದೆ. ಡಿಸೇಲ್ ನ ಬೆಲೆಯೂ 82.58 ರೂ ಗೆ ತಲುಪಿದೆ. ತೆಲಂಗಾಣದಲ್ಲಿ 1 ಲೀಟರ್ ಪೆಟ್ರೋಲ್ ದರ 93.37 ಆಗಿದೆ.
ಇನ್ನು ತೈಲ ಬೆಲೆ ಏರಿಕೆಯನ್ನು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ ಸಮರ್ಥಿಸಿಕೊಂಡಿದ್ದು, ಅಂತರಾಷ್ಟ್ರೀಯ ವ್ಯವಸ್ಥೆ ಆಧರಿಸಿ ದರ ನಿಗದಿಯಾಗಲಿದೆ. ಸರ್ವಕಾಲಿಕ ಏರಿಕೆ ಎಂದು ಅಪಪ್ರಚಾರ ಮಾಡಬೇಡಿ ಎಂದಿದ್ದಾರೆ. ಲೀಟರ್ ಗೆ 150 ರೂ ಆದರೂ ಪರ್ವಾಗಿಲ್ಲ ಕೇಂದ್ರವನ್ನು ದೂರಬೇಡಿ ಎಂಬಂತಿದೆ ಸಚಿವರ ಮಾತು.
ನಿರಂತರವಾಗಿ ತೈಲ ದರ ಏರಿಕೆಯಾಗುತ್ತಿರುವುದರಿಂದ ಗ್ರಾಹಕರು ಕೂಡ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಕಡೆಗಳಲ್ಲಿ ಕೇಂದ್ರ ಸರಕಾರದ ವಿರುದ್ಧ ಜನಪರ ಸಂಘಟನೆ ಹಾಗೂ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.