ಬೆಂಗಳೂರು: ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಪ್ರದೇಶಗಳಲ್ಲಿ ಹಾನಿ ಸಂಭವಿಸಿದೆ. ಅಲ್ಲದೆ, ಶುಕ್ರವಾರ(ಜೂನ್ 17)ದಂದು ಸುರಿದ ಭಾರೀ ಮಳೆಯಿಂದಾಗಿ ಕೃಷ್ಣರಾಜಪುರ ಮತ್ತು ಮಹದೇವಪುರ ಸುತ್ತಮುತ್ತಲಿನ ಅನೇಕ ಪ್ರದೇಶಗಳು ಜಲಾವೃತ್ತಗೊಂಡಿತು.
ಮಳೆ ಅನಾಹುತದಿಂದಾಗಿ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ಕೂಡಲೇ ತುರ್ತು ಕ್ರಮಕೈಗೊಂಡು ಮುಂಬರುವ ದಿನಗಳಲ್ಲಿ ಮಳೆಯಿಂದಾಗಿ ಹಾನಿಯುಂಟಾಗದಂತೆ ಕಾರ್ಯನಿರ್ವಹಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷ ನಾಳೆ (ಜೂನ್ 20) ಬೆಳಿಗ್ಗೆ 11 ಗಂಟೆಗೆ ಮಹದೇವಪುರ ಬಿಬಿಎಂಪಿ, ಜಂಟಿ ಆಯುಕ್ತರ ಕಚೇರಿ ಮುಂಭಾಗ ಪ್ರತಿಭಟನೆಗೆ ಕರೆ ನೀಡಿದೆ.
ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಸಾವು ಸಹ ಸಂಭವಿಸಿದೆ. ಅಲ್ಲದೆ, ಅನೇಕ ಜನರು ಗಾಯಗೊಂಡು ತೊಂದರೆಗೆ ಸಿಲುಕಿದ್ದಾರೆ. ನೂರಾರು ವಾಹನಗಳು ಜಕ್ಕಂಗೊಂಡಿವೆ. ಮರಗಳು ಉರುಳಿಬಿದ್ದ ಪರಿಣಾಮ ವಾಹನ ಸಂಚಾರಕ್ಕೂ ತೊಂದರೆ ಉಂಟಾಗಿದೆ.
ಈ ಎರಡು ಪ್ರದೇಶಗಳಲ್ಲಿ ರಾಜಕಾಲುವೆಗಳು ಮತ್ತು ರಸ್ತೆಗಳು ಮತ್ತು ಕೋಡಿ ಬಿದ್ದ ಕೆರೆಗಳು, ತಗ್ಗು ಪ್ರದೇಶಗಳು ನೀರಿನಿಂದ ತುಂಬಿ ಸುಮಾರು 1000ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಇದರಿಂದ, ನಿವಾಸಿಗಳು ವಿಪರೀತವಾಗಿ ಹೈರಾಣಗಿ ತೊಂದರೆಗೆ ಸಿಲುಕಿದ್ದಾರೆ. ಸಂಬಂಧ ಪಟ್ಟ ಬಿಬಿಎಂಪಿ ಆಡಳಿತ ತಕ್ಷಣ ಜನರ ಕಷ್ಟಗಳಿಗೆ ಕೂಡಲೇ ಸ್ಪಂದಿಸುವ ಮೂಲಕ, ಸೂಕ್ತ ಕ್ರಮಕೈಗೊಂಡು ಪರಿಹಾರ ಒದಗಿಸಬೇಕೆಂದು ಸಿಪಿಐ(ಎಂ) ಪಕ್ಷದ ಬೆಂಗಳೂರು ಪೂರ್ವ ವಲಯ ಸಮಿತಿ ಆಗ್ರಹಿಸಿದೆ.