ಶರ್ಜೀಲ್ ಇಮಾಮ್ ಭಾಷಣದಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುವ ಹೇಳಿಕೆಗಳಿಲ್ಲ: ಅಲಹಾಬಾದ್ ಹೈಕೋರ್ಟ್

ನವದೆಹಲಿ: ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ‘ದೇಶ ವಿರೋಧಿ ಭಾಷಣ’ ಮಾಡಿದರು ಎಂದು ದೇಶದ್ರೋಹ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಶರ್ಜೀಲ್ ಇಮಾಮ್ ಗೆ ಕಳೆದ ವಾರ ಅಲಹಾಬಾದ್‌ ಹೈಕೋರ್ಟ್ ಜಾಮೀನು‌ ನೀಡಿದೆ.

ಇಮಾಮ್ ಅವರ ಭಾಷಣವು ಯಾರಿಗೂ ಶಸ್ತ್ರಾಸ್ತ್ರಗಳನ್ನು ಹೊಂದಲು ಕರೆ ನೀಡಿಲ್ಲ ಅಥವಾ ಅವರು ಯಾವುದೇ ಹಿಂಸಾಚಾರವನ್ನು ಪ್ರಚೋದಿಸಿಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ  ಹೇಳಿದೆ.

ಇದನ್ನು ಓದಿ: ಪ್ರತಿಭಟನಾನಿರತ 100 ರೈತರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು

ನ್ಯಾಯಮೂರ್ತಿ ಸೌಮಿತ್ರಾ ದಯಾಳ್ ಸಿಂಗ್ ನೇತೃತ್ವದ ಪೀಠವು “ಅರ್ಜಿದಾರರ ವಿರುದ್ಧ ಮಾಡಿದ ನಿಖರವಾದ ಆರೋಪಗಳು ಸರಿಯಾಗಿ ಉಲ್ಲೇಖಿಸಿಲ್ಲ. ನಿರ್ವಿವಾದದ ಆಧಾರದ ಮೇಲೆ ಅರ್ಜಿದಾರರು ಶಸ್ತ್ರಾಸ್ತ್ರಗಳನ್ನು ಹೊಂದಲು ಕರೆ ನೀಡಿಲ್ಲ. ಅಥವಾ ಭಾಷಣದ ಸಂದರ್ಭದಲ್ಲಿ ಯಾವುದೇ ಹಿಂಸಾಚಾರವನ್ನು ಪ್ರಚೋದಿಸಿಲ್ಲ ಎಂಬುದನ್ನು ಗಮನಿಸಬಹುದು ಎಂದು ತಿಳಿಸಲಾಗಿದೆ.

ಕಳೆದ ವರ್ಷ ಅಲಿಘರ್ ನಲ್ಲಿ ಅವರ ವಿರುದ್ಧ ತ್ವರಿತ ಪ್ರಕರಣವನ್ನು ದಾಖಲಿಸಲಾಗಿತ್ತು. ಇಮಾಮ್ ವಿರುದ್ಧ ದಾಖಲಿಸಿದ ಆರೋಪದಲ್ಲಿ ಅವರು ಭಾರತ ಸರ್ಕಾರ ಮತ್ತು ಭಾರತೀಯ ಸಶಸ್ತ್ರ ಪಡೆಗಳ ವಿರುದ್ಧ ದ್ವೇಷವನ್ನು ಹರಡುವಲ್ಲಿ ತೊಡಗಿದ್ದರು, ಎರಡು ಸಮುದಾಯಗಳ ನಡುವೆ ದ್ವೇಷವನ್ನು ಸೃಷ್ಟಿಸುವ ಹಾಗೂ ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತೆಗೆ ಅಪಾಯವನ್ನುಂಟುಮಾಡಿದರು ಎಂಬ ಅಂಶಗಳನ್ನು ಉಲ್ಲೇಖಿಸಲಾಗಿತ್ತು.

ಇದನ್ನು ಓದಿ: ಬ್ರಿಟಿಷರ ಕಾಲದ ದೇಶದ್ರೋಹ ಕಾಯ್ದೆ ಇನ್ನೂ ಅಗತ್ಯವಿದೆಯೇ?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ಶರ್ಜೀಲ್‌ ಇಮಾಮ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ ಪ್ರಕರಣಗಳಲ್ಲಿ ಒಂದರಲ್ಲಿ ಜಾಮೀನು ನೀಡಲಾಗಿದೆ. ಆದರೂ ಸಹ ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯ ಮತ್ತೊಂದು ಪ್ರಕರಣದಲ್ಲಿ ಆರೋಪ ಇರುವುದರಿಂದ ಅವರು ಇನ್ನು ಜೈಲಿನಲ್ಲೇ ಇರಬೇಕಾಗಿದೆ.

Donate Janashakthi Media

Leave a Reply

Your email address will not be published. Required fields are marked *