ರಂಗಪಯಣ ಆಯೋಜಿಸುತ್ತಿರುವ ಪ್ರತಿವರ್ಷದ ಪರಮಗುರಿಯಾದ ಶಂಕರ್‌ನಾಗ್ ನಾಟಕೋತ್ಸವ- 2021ರ ಈ ವರ್ಷದ ʻʻರಂಗ ಧಾರಿಣಿʼʼ ಎಂಬ ಮಹಿಳಾ ರಂಗೋತ್ಸವವನ್ನು ಹಮ್ಮಿಕೊಂಡಿದೆ. ಸತತ ಐದು ದಿನಗಳು ನಡೆಯುವ ಕಾರ್ಯಕ್ರಮದಲ್ಲಿ ಕೇವಲ ನಾಟಕ ಪ್ರದರ್ಶನ ಮಾತ್ರವಲ್ಲದೆ, ಮತ್ತಷ್ಟು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ನಾಟಕ ಪ್ರದರ್ಶನದೊಂದಿಗೆ ಸಂವಾದ, ನಾಗರ ಕಟ್ಟೆ, ರಂಗಗೀತೆ, ಶಂಕರ್‌ನಾಗ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ.
ಬೆಂಗಳೂರು ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ನವೆಂಬರ್ 28 ರಿಂದ ಡಿಸೆಂಬರ್ 2ರವರೆಗೆ ಪ್ರತಿ ದಿನ ಸಂಜೆ 4.30ರಿಂದ ಆರಂಭವಾಗಲಿರುವ ಕಾರ್ಯಕ್ರಮ ಹಲವು ವಿಶೇಷತೆಗಳನ್ನು ಒಳಗೊಂಡಿದೆ.
ನವೆಂಬರ್ 28 ರಿಂದ ಡಿಸೆಂಬರ್ 2 ರವರೆಗೆ ನಡೆಯಲಿರುವ ಕಾರ್ಯಕ್ರಮದ ವಿವರ ಈ ಕೆಳಗಿನಂತಿವೆ;
ನವೆಂಬರ್ 28, 2021 ಸಂಜೆ 6ಕ್ಕೆ ಉದ್ಘಾಟನಾ ಸಮಾರಂಭ
ಉದ್ಘಾಟನೆ
ʻʻದೇಹವ ಹದಗೊಳಿಸಿ ಚಂದದ ಬದುಕ ಕಟ್ಟಿಕೊಳ್ಳುವುದರ ಪರಿಯ ಸಾಕ್ಷಿ ಕೊಡುವʼʼ ಕುಂಬಾರವ್ವ-ರಾಜಲಕ್ಷ್ಮಿ. ಆರ್.
ಅತಿಥಿಗಳು :
ರಂಗಪ್ಪ, ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಶ್ರೀಮತಿ ಲಕ್ಷ್ಮೀ ಚಂದ್ರಶೇಖರ್, ರಂಗಕರ್ಮಿ
ಕುಮಾರಿ ಎಸ್. ವರಲಕ್ಷ್ಮೀ, ಅಧ್ಯಕ್ಷರು, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತರ ಸಂಘ
ಶ್ರೀಮತಿ ದು. ಸರಸ್ವತಿ, ಸಾಮಾಜಿಕ ಹೋರಾಟಗಾರ್ತಿ, ಬರಹಗಾರ್ತಿ
ಶ್ರೀಮತಿ ಅಭಿನಯ, ನಟಿ, ರಂಗಭೂಮಿ ಮತ್ತು ಕಿರುತೆರೆ
ಶ್ರೀಮತಿ ಸ್ವಾತಿ, ನಟಿ, ಕಿರರುತೆರೆ ಮತ್ತು ಹಿರಿತೆರೆ
ಶಂಕರ್‌ನಾಗ್ ಪ್ರಶಸ್ತಿ ಪ್ರಧಾನ: ಶ್ರೀಮತಿ ಹನುಮಕ್ಕ, ರಂಗಕರ್ಮಿ
ನಿರೂಪಣೆ : ಶ್ರೀಮತಿ ಸುಷ್ಮಾ ಎಸ್.ವಿ. – ಪ್ರಾರ್ಥನೆ : ಉಮಾ ವೈ.ಜಿ.
ನಾಟಕ 7.10ಕ್ಕೆ ಸಂಪತ್ ಪಾಲ್ ದೇವಿಯವರ ಜೀವನಾಧಾರಿತ ನಾಟಕ ಗುಲಾಬಿ ಗ್ಯಾಂಗು – ಭಾಗ 1
ಬೆಳಕು – ಎಂ.ಜಿ. ನವೀನ್, ರಂಗರೂಪ – ಪ್ರವೀಣ ಸೂಡ, ಪ್ರಸಾದನ – ಜಯರಾಜ್ ಹುಸ್ಕೂರು, ನಿರ್ದೇಶನ – ರಾಜ್‌ಗುರು, ಪ್ರಸ್ತುತಿ – ರಂಗಪಯಣ
ನವೆಂಬರ್ 29, 2021, ಸಂಜೆ 4.30ಕ್ಕೆ ಸಂವಾದ
ನಾಟಕವನ್ನು ವೃತ್ತಿಯಾಗಿ ಸ್ವೀಕರಿಸಿದ ಮಹಿಳೆಯರು
ಅತಿಥಿಗಳು
ಶ್ರೀಮತಿ ಮಾಲತಿ ಸುಧೀರ್, ನಟಿ, ರಂಗಭೂಮಿ, ಕಿರುತೆರೆ, ಹಿರಿತೆರೆ
ಕುಮಾರಿ ಹನುಮಕ್ಕ, ರಂಗಕರ್ಮಿ
ನಿರೂಪಣೆ : ಶ್ರೀಮತಿ ನಯನ ಜೆ. ಸೂಡ
ನಾಟಕ ಸಂಜೆ 5.45ಕ್ಕೆ
ʻʻಉಧೋ ಉಧೋ ಎಲ್ಲವ್ವʼʼ (ಸವಿತಕ್ಕ ಅಭಿನಯಿಸುವ ಏಕವ್ಯಕ್ತಿ ರಂಗಪ್ರಯೋಗ)
ಪ್ರಸ್ತುತಿ: ಸವಿರಂಗ, ರಚನೆ: ಡಾ|| ಬೇಲೂರು ರಘುನಂದನ್, ಸಂಗೀತ, ವಿನ್ಯಾಸ ಮತ್ತು ನಿರ್ದೇಶನ: ಕೃಷ್ಣಮೂರ್ತಿ ಕವತ್ತಾರ್, ಹಿಮ್ಮೇಳ: ಬಸಂತ್ ಜಿ. ಪ್ರಸಾದ್, ತಾಳ: ಸತೀಶ್ ಶೆಟ್ಟಿ, ಬೆಳಕು: ನವೀನ್ (ಅಕ್ಕ ಸೌಂಡ್ಸ್)
ನಾಟಕ ಸಂಜೆ 7.00ಕ್ಕೆ
ʻʻಉಡಿಯೊಳಗಣ ಕಿಚ್ಚುʼʼ
ಪ್ರಸ್ತುತಿ: ಅರೆಹೊಳೆ ಪ್ರತಿಷ್ಠಾನ ಮಂಗಳೂರು, ರಂಗಪಠ್ಯ ನಿರ್ದೇಶನ : ಪ್ರಶಾಂತ್ ಉದ್ಯಾವರ, ಸಂಗೀತ ಸಂಯೋಜನೆ: ಮಾಧವ ಜೋಗಿ, ರಂಗ ಸಜ್ಜಿಕೆ: ಗೋಪಿನಾಥ ಸಾಗರ, ಬೆಳಕು: ರಾಜು ಮಣಿಪಾಲ, ವಸ್ತ್ರ ವಿನ್ಯಾಸ: ಗೀತಾ ಅರೆಹೊಳೆ
ನವೆಂಬರ್ 30, 2021, ಸಂಜೆ 4.30ಕ್ಕೆ ಸಂವಾದ
ಅರ್ಕೇಷ್ಟ್ರ ಮತ್ತು ಮಹಿಳೆಯರು
ಅತಿಥಿಗಳು : ಶ್ರೀಮತಿ ಗಾಯತ್ರಿ ಮೋಹನ್, ಹಿನ್ನೆಲೆ ಗಾಯಕಿ
ಶ್ರೀಮತಿ ಸವಿತಕ್ಕ, ರಂಗನಟಿ, ಜನಪದ ಗಾಯಕಿ
ಸಂಜೆ 5.30ಕ್ಕೆ ನಾಗರಕಟ್ಟೆ
ಅತಿಥಿಗಳು : ಶ್ರೀಮತಿ ಸುನೇತ್ರ ಪಂಡಿತ್, ನಟಿ ಮತ್ತು ಕಂಠದಾನ ಕಲಾವಿದೆ,
ಶ್ರೀಮತಿ ಗಾಯತ್ರಿ ಶಿವರಾಜು, ರಂಗಕರ್ಮಿ,
ಶ್ರೀಮತಿ ಜಯಶ್ರೀ, ನಟಿ, ನಿರ್ಮಾಪಕಿ
ಸಂಜೆ 6.45ಕ್ಕೆ ಸಾರಾ ಅಬೂಬ್‌ಕ್ಕರ್ ರವರ ಕುರಿತು ಮಾತು
ಅತಿಥಿಗಳು : ಶ್ರೀಮತಿ ಲಲಿತಾ ಸಿದ್ಧಬಸವಯ್ಯ
ನಿರೂಪಣೆ : ಕುಮಾರಿ ಮೇಘಾ ಯಲಿಗಾರ್
ನಾಟಕ ಸಂಜೆ 7.10ಕ್ಕೆ
ಸಾರಾ ಅಬೂಬ್‌ಕ್ಕರ್ ರವರ ಕಾದಂಬರಿ ಆಧಾರಿತ ಚಂದ್ರಗಿರಿ ತೀರದಲ್ಲಿ
ರಂಗರೂಪ – ಶ್ರೀಮತಿ ರೂಪ ಕೋಟೇಶ್ವರ, ನಿರ್ದೇಶನ – ನಯನ ಜೆ. ಸೂಡ, ಪ್ರಸ್ತುತಿ – ರಂಗಪಯಣ
ಡಿಸೆಂಬರ್ 1, 2021, ಸಂಜೆ 4.30ಕ್ಕೆ ಅನು ಸಂಧಾನ
ರೋಹಿಣಿ (ನಟನೆ), ನಭಾ ವಕ್ಕುಂದ (ಚಿತ್ರಕಲೆ), ನಯನ ಯು.ಬಿ.ಡಿ. (ಯಕ್ಷಗಾನ), ಅನುಪಮ ಮರಾಠೆ (ಯಕ್ಷಗಾನ), ಮೇಘನ ಚಂದ್ರಮೌಳಿ (ನೃತ್ಯ), ಪೂಜಾ ರಾವ್ (ಒಂದು ಹಾಡು), ಸಂಯುಕ್ತಾ ಪುಲಿಗಲ್ (ಒಂದು ಓದು),
ನಿರೂಪಣೆ : ಶ್ರೀಮತಿ ನಯನ ಜೆ. ಸೂಡ
ನಾಟಕ – ಸಂಜೆ 6.00ಕ್ಕೆ,
ಚಿಟ್ಟೆ – 25ನೇ ಪ್ರದರ್ಶನ
ಪ್ರಸ್ತುತಿ – ಕಾಜಾಣ, ರಚನೆ – ಡಾ||ಬೇಲೂರು ರಘುನಂದನ್, ಸಂಗೀತ, ವಿನ್ಯಾಸ ಮತ್ತು ನಿರ್ದೇಶನ – ಕೃಷ್ಣಮೂರ್ತಿ ಕವತ್ತಾರ್, ಅತಿಥಿಗಳು: ಶ್ರೀಮತಿ ಶ್ರೀದೇವಿ ಕಳಸದ (ಪತ್ರಕರ್ತೆ)
ನಾಟಕ – ಸಂಜೆ 7.30ಕ್ಕೆ
ಗೆಲ್ಲಿಸಬೇಕು ಅವಳ
ಪ್ರಸ್ತುತಿ – ನಂದಗೋಕುಲ, ರಚನೆ – ಶ್ರೀಮತಿ ಸುಧಾ ಅಡುಕಳ, ನಿರ್ದೇಶನ – ರೋಹಿತ್ ಎಸ್. ಬೈಕಾಡಿ, ಅತಿಥಿಗಳು – ಶ್ರೀಮತಿ ಸಂಧ್ಯಾರಾಣಿ (ಬರಹಗಾರ್ತಿ)
ಡಿಸೆಂಬರ್ 2, 2021, ಸಂಜೆ 6ಕ್ಕೆ ಸಮಾರೋಪ ಸಮಾರಂಭ
ಸ್ತ್ರೀ ಎಂದರೇ ಅಭಿವ್ಯಕ್ತಿ ಮತ್ತು ಅನುಭವ
ಅತಿಥಿಗಳು
ಶ್ರೀಮತಿ ಸುಂದರ ಶ್ರೀ (ನಟಿ, ರಂಗಭೂಮಿ, ಕಿರುತೆರೆ)
ಶ್ರೀಮತಿ ಸುಮನ್ ನಗರ್‌ಕರ್
ಶ್ರೀಮತಿ ಅಕೈ ಪದ್ಮಶಾಲಿ
ಕುಮಾರಿ ಚಾಂದಿನಿ
ಶ್ರೀಮತಿ ಪ್ರಿಯಾಂಕ
ಕುಮಾರಿ ಶಿಲೋಖ್ ಮುಕ್ಕಾಟಿ
ಕುಮಾರಿ ಅಕ್ಷತಾ
ಪುಸ್ತಕ ಬಿಡುಗಡೆ: ಕುಮಾರಿ ಜನನಿ ವತ್ಸಲ ರವರ ಪುಸ್ತಕ ʻʻಹೈ ಹೀಲ್ಸ್ʼʼ ಬಿಡುಗಡೆ
ಪುಸ್ತಕ ಕುರಿತು : ಡಾ|| ಕೆ. ಷರೀಫಾ(ಸಾಹಿತಿಗಳು,
ಶಂಕರ್‌ನಾಗ್ ಪ್ರಶಸ್ತಿ : ಶ್ರೀಮತಿ ಅಕೈ ಪದ್ಮಶಾಲಿ
ನಿರೂಪಣೆ : ಶ್ರೀಮತಿ ಹೆಚ್.ಎಲ್. ಪುಷ್ಪ
ನಾಟಕ ಸಂಜೆ 7.30ಕ್ಕೆ ಗಾರ್ಗಿ, ರಚನೆ – ಡಾ|| ಬೇಲೂರು ರಘುನಂದನ್, ನಿರ್ದೇಶನ – ರಾಜ್‌ಗುರು, ಪ್ರಸ್ತುತಿ – ಸಾತ್ವಿಕ
ನಾವು ಯಾರನ್ನು ಗೌರವಿಸುತ್ತೇವೆಯೋ
ಅವರ ಗುಣಗಳೇ ನಮ್ಮಲ್ಲಿ ಮೂಡುತ್ತವೆʼ
ನಾವು ಯಾರನ್ನು ಆರಾಧಿಸುತ್ತೇವೆಯೋ
ಅವರಂತೆಯೇ ನಾವೂ ಆಗಿಬಿಡುತ್ತೇವೆʼ
ಎಂಬ ರಾಷ್ಟ್ರ ಕವಿ ಕುವೆಂಪು ಸಾಲುಗಳನ್ನು ಹೊತ್ತಿರುವ ರಂಗಪಯಣ ತಂಡವು ಈ ಬಾರಿ ಶಂಕರ್‌ನಾಗ್ ನಾಟಕೋತ್ಸವದಲ್ಲಿ ಹಲವು ಪ್ರಮುಖರ ನಾಟಕೋತ್ಸವ ಸಲಹಾ ಸಮಿತಿಯನ್ನು ರಚಿಸಿದೆ. ಅದರಲ್ಲಿ ಶಶಿಧರ್ ಅಡಪ, ಬೇಲೂರು ರಘುನಂದನ್, ಜಿಪಿಓ ಚಂದ್ರು, ಸಿ.ಕೆ.ಗುಂಡಣ್ಣ, ಹೆಚ್.ಎಲ್.ಪುಷ್ಪ, ರಷ್ಮಿ ಗಂಡಸಿ, ಗಿರೀಶ್ ಮಾಗಡಿ, ಸುನೇತ್ರ ಪಂಡಿತ್, ಬಾಬು, ಶಿವಪ್ರಕಾಶ್, ವೀರಕಪುತ್ರ ಶ್ರೀನಿವಾಸ್, ಪ್ರಸನ್ನ ಅವರುಗಳು ಹಾಗೂ ಶಂಕರ್‌ನಾಗ್ ಕನ್ನಡ ಜ್ಯೋತಿ ಗೆಳೆಯರ ಬಳಗ ಇದೆ.
Super, whish you all the best.