ಪಾಕಿಸ್ತಾನ್‌ ಜಿಂದಾಬಾದ್‌ ಪ್ರಕರಣ : ಪತ್ರಕರ್ತ ಹರೀಶ್‌ ಸೇರಿ ಮೂವರ ಬಂಧನ

ಮಡಿಕೇರಿ : ಶನಿವಾರ ಸಂತೆಯಲ್ಲಿ ಮುಸ್ಲಿಂ ಮಹಿಳೆಯರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅಂಬೇಡ್ಕರ್ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದ ವಿಡಿಯೋ ತಿರುಚಿ ಪಾಕಿಸ್ತಾನ್ ಝಿಂದಾಬಾದ್ ಹೇಳಿದ್ದಾರೆಂದು ವದಂತಿ ಹಬ್ಬಿಸಿದ ಆರೋಪದಲ್ಲಿ ಮೂವರ ಮೇಲೆ ಎಫ್ ಐ ಆರ್ ದಾಖಲಾಗಿದೆ.

ರಘು ಎಸ್ ಎನ್ , ಹರೀಶ್ ಹಾಗು ಗಿರೀಶ್ ಆರೋಪಿಗಳು. ಈ ಪೈಕಿ ಹರೀಶ್ ಕನ್ನಡ ಪ್ರಭ ಪತ್ರಿಕೆಯ ಸ್ಥಳೀಯ ವರದಿಗಾರನಾಗಿದ್ದು, ಸೋಮವಾರಪೇಟೆ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದಾರೆ. ಈಗ ಮೂವರು ಆರೋಪಿಗಳ ವಿರುದ್ಧ ವಿರುದ್ಧ ಐಪಿಸಿ 34, 153 ಅಡಿಯಲ್ಲಿ ಶನಿವಾರ ಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರ ಸಂತೆ ಗ್ರಾಮ ಪಂಚಾಯತ್ ಸದಸ್ಯ ರಘು, ಮಾಜಿ ಸದಸ್ಯ ಹಾಗು ಪತ್ರಕರ್ತ ಹರೀಶ್ ಹಾಗು ಕುಶಾಲ್ ನಗರದ ಗಿರೀಶ್ ಕೋಮು ಸೌಹಾರ್ದ ಕದಡುವ ದುರುದ್ದೇಶದಿಂದ ತಿರುಚಿದ ವಿಡಿಯೋ ವಾಟ್ಸ್ ಆಪ್ ನಲ್ಲಿ ಹರಡಿ ಪ್ರತಿಭಟನೆಯ ಸಂದರ್ಭ ಮುಸ್ಲಿಂ ಮಹಿಳೆಯರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ, ಹಿಂದೂ ಸಂಘಟನೆ ಮೇಲೆ ದಬ್ಬಾಳಿಕೆ ನಡೆಸುತ್ತಲೇ ಬಂದಿದ್ದಾರೆ ಎಂದು ಅಪಪ್ರಚಾರ ಮಾಡಲಾಗಿದೆ. ಇವರ ಮೇಲೆ ಸಾರ್ವಜನಿಕ ವಲಯದಲ್ಲಿ ಇನ್ನಷ್ಟು ಕೆಟ್ಟ ಅಭಿಪ್ರಾಯ ಬರಬೇಕು ಎಂಬ ಕಾರಣದಿಂದ  ನ.15ರಂದು ಶನಿವಾರ ಸಂತೆ ಬಂದ್ ಮಾಡುವಂತೆ ಕರೆ ನೀಡಿದ್ದರು ಎಂದು ಎಫ್ ಐ ಆರ್ ನಲ್ಲಿ ಹೇಳಲಾಗಿದೆ. ಪ್ರತಿಭಟನೆಯ ವೇಳೆ ಮುಸ್ಲಿಂ ಮಹಿಳೆಯರು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದೂ ಎಫ್ ಐ ಆರ್ ನಲ್ಲಿ ದಾಖಲಾಗಿದೆ.

ಕೋಮು ಸೌಹಾರ್ದ ಕದಡುವ ಉದ್ದೇಶದಿಂದ ಈ ರೀತಿ ಮುಸ್ಲಿಂ ರನ್ನು ಅವಮಾನಿಸುವ ಕೆಲಸ ಬಹಳಷ್ಟು ಕಡೆಗಳಲ್ಲಿ ನಡೆಯುತ್ತಿದೆ. ಸಂಘಪರಿವಾರದ ಕಾರ್ಯಕರ್ತರೆ ಇಂತಹ ಉದ್ಧಟತನೆಗಳನ್ನು ಮೆರೆದು ಪ್ರಕರಣವನ್ನು ಬೇರೆಯವರ ಮೇಲೆ ಹಾಕುತ್ತಾರೆ. ಸಿಂದಗಿಯಲ್ಲಿ ಪಾಕ್‌ಧ್ವಜ ಹಾರಿಸಿದ್ದು ಶ್ರೀರಾಮ್‌ ಸೇನೆಯರು ಎಂಬ ಘಟನೆ ಇನ್ನೂ ಜನರ ನೆನಪಿನಲ್ಲಿದೆ. ಸಂಘ ಪರಿವಾರದವರೆ ದೇಶದ್ರೋಹದ ಕೆಲಸಗಳನ್ನು ಮಾಡಿ ಅದನ್ನು ಇನ್ನೊಬ್ಬರ ತಲೆಗೆ ಕಟ್ಟುತ್ತಾರೆ ಎಂಬುದಕ್ಕೆ ಶನಿವಾರ ಸಂತೆಯ ಘಟನೆಯೇ ಸಾಕ್ಷಿಯಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವ ಮಾತಾಗಿದೆ.

 

Donate Janashakthi Media

Leave a Reply

Your email address will not be published. Required fields are marked *