ಸಾಹಿತಿ-ಕಲಾವಿದರಿಂದ ಪುನೀತ್‌ಗೆ ರಂಗನಮನ

Please follow and like us:

ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ನಟ ಪುನೀತ್‌ ರಾಜಕುಮಾರ್‌ ಅವರಿಗೆ ʻನಿನ್ನಂಥೋರ್‌ ಯಾರೂ ಇಲ್ವಲ್ಲೋ ಈ ಲೋಕದಾ ಮ್ಯಾಲೇ…ʼ ಎಂಬ ನುಡಿಯೊಂದಿಗೆ ಸಾಹಿತಿ-ಕಲಾವಿದರ ರಂಗನಮನ ಕಾರ್ಯಕ್ರಮವು ನವೆಂಬರ್‌ 21, 2021ರ ಸಂಜೆ 4.30ಕ್ಕೆ, ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದೆ.

ಅಗಲಿದ ʻಅಪ್ಪುʼ ಅಂತಃಕರಣಕ್ಕೆ ನಮಿಸಲು ಜಸ್ಟೀಸ್‌ ಎ.ಜೆ. ಸದಾಶಿವ, ಬರಗೂರು ರಾಮಚಂದ್ರಪ್ಪ, ಹೆಚ್‌.ಎಸ್.‌ ಶಿವಪ್ರಕಾಶ್‌, ಬಿ. ಜಯಶ್ರೀ, ನಾಗತಿಹಳ್ಳಿ ಚಂದ್ರಶೇಖರ್‌, ಗಿರಿಜಾ ಲೋಕೇಶ್‌, ಪ್ರಕಾಶ್‌ ರಾಜ್‌, ಆರುಂಧತಿ ನಾಗ್‌, ಪ್ರಕಾಶ್‌ ಬೆಳವಾಡಿ, ದತ್ತಣ್ಣ, ಉಮಾಶ್ರೀ, ಬಿ. ಸುರೇಶ, ಜಯರಾಮ್‌ ರಾಯಪುರ, ಸುಧಾ ಬೆಳವಾಡಿ, ಎಂ. ಎಸ್.‌ ಮೂರ್ತಿ, ಟಿ. ಎಸ್.‌ ನಾಗಾಭರಣ, ಟಿ. ಎನ್‌. ಸೀತಾರಾಮ್‌ ಅವರುಗಳು ರಂಗನಮನವನ್ನು ಸಲ್ಲಿಸಲಿದ್ದಾರೆ.

ರಾಘವೇಂದ್ರ ರಾಜಕುಮಾರ್‌ ಗೌರವ ಉಪಸ್ಥಿತರಿರಲಿದ್ದಾರೆ. ಇಂಪು ಸಂಗೀತ ಸಂಸ್ಥೆಯು ನೆನಪಿನ ನುಡಿ, ರಂಗ ಗೀತೆ, ನೆನಪಿನ ಹಾಡುಗಳು ಪ್ರಸ್ತುತಪಡಿಸಲಿದ್ದಾರೆ.

ಶ್ರೀನಿವಾಸ್‌ ಜಿ. ಕಪ್ಪಣ್ಣ, ಶಶಿಧರ್‌ ಭಾರಿಘಾಟ್‌, ಸಿ. ಕೆ. ಗುಂಡಣ್ಣ, ಮಾಲೂರು ವಿಜಿ ಸಂಚಾಲಕತ್ವದಲ್ಲಿ ಪುನೀತ್‌ ರಾಜಕುಮಾರ್‌ ಅವರಿಗೆ ರಂಗನಮನ ಕಾರ್ಯಕ್ರಮ ನಡೆಯಲಿದೆ.

Please follow and like us:
Donate Janashakthi Media

Leave a Reply

Your email address will not be published. Required fields are marked *