ಟೆಸ್ಟ್‌ ಕ್ರಿಕೆಟ್‌ನಲ್ಲಿ 700 ವಿಕೆಟ್‌ ಒಡೆಯ ಆಸ್ಟ್ರೇಲಿಯಾದ ಲೆಗ್‌ ಸ್ಪಿನ್ನರ್‌ ಶೇನ್‌ ವಾರ್ನ್‌

ಬಾಲ್‌ ಆಫ್‌ ದಿ ಸೆಂಚುರಿ ಖ್ಯಾತಿಯ ವಿಶ್ವ ಶ್ರೇಷ್ಠ ಲೆಗ್‌ ಸ್ಪಿನ್ನರ್‌ ಶೇನ್‌ ವಾರ್ನ್‌ ಶುಕ್ರವಾರ ನಿಧನರಾಗಿದ್ದಾರೆ. 52 ವರ್ಷದ ಮಾಜಿ ಕ್ರಿಕೆಟಿಗ ಥಾಯ್ಲೆಂಡ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಾಂತ್ರಿಕ ಲೆಗ್‌ ಸ್ಪಿನ್ನರ್‌

ಲೆಗ್‌ ಸ್ಪಿನ್‌ ಬೌಲಿಂಗ್‌ನಲ್ಲಿ ಚಾಂಪಿಯನ್‌ ಆಗಿದ್ದ ಶೇನ್‌ ವಾರ್ನ್‌, ಆಸ್ಟ್ರೇಲಿಯಾ ತಂಡದ ಪರ ಆಡಿದ 145 ಟೆಸ್ಟ್‌ ಪಂದ್ಯಗಳಿಂದ 708 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು. ಈ ಮೂಲಕ ಅವರು ಟೆಸ್ಟ್‌ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಣಾದಲ್ಲಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ (800 ವಿಕೆಟ್‌) ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 37 ಬಾರಿ ಇನಿಂಗ್ಸ್‌ ಒಂದರಲ್ಲಿ 5 ವಿಕೆಟ್‌ಗಳನ್ನು ಪಡೆದು ದಾಖಲೆ ಸಾಧನೆ ಮಾಡಿದ್ದಾರೆ. 10 ಬಾರಿ ಪಂದ್ಯ ಒಂದರಲ್ಲಿ 10ಕ್ಕೂ ಹೆಚ್ಚು ವಿಕೆಟ್‌ಗಳನ್ನು ಉರುಳಿಸಿದ ಹೆಗ್ಗಳಿಕೆ ಅವರದ್ದು. ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಗಾಗ ನೆರವಾಗಿದ್ದ ಶೇನ್‌ ವಾರ್ನ್‌, 12 ಅರ್ಧ ಶತಕಗಳನ್ನು ಒಳಗೊಂಡ 3154 ರನ್‌ಗಳನ್ನು ಬಾರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲೂ 194 ಪಂದ್ಯಗಳಿಂದ 293 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

1992ರಲ್ಲಿ ಭಾರತ ಎದುರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶೇನ್ ವಾರ್ನ್‌, 1993ರಲ್ಲಿ ಒಡಿಐ ಕ್ರಿಕೆಟ್‌ಗೆ ನ್ಯೂಜಿಲೆಂಡ್‌ ಎದುರು‌ ಆಟವಾಡಿದರು. 1993ರಲ್ಲಿ ಇಂಗ್ಲೆಂಡ್‌ನ ಮೈಕ್‌ ಗೇಟಿಂಗ್‌ ಅವರನ್ನು ಅದ್ಭುತ ಲೆಗ್‌ ಸ್ಪಿನ್‌ ಮೂಲಕ ಕ್ಲೀನ್‌ ಬೌಲ್ಡ್‌ ಮಾಡಿದ್ದು, ‘ಬಾಲ್‌ ಆಫ್‌ ದಿ ಸೆಂಚುರಿ’ ಹೆಗ್ಗಳಿಕೆ ಪಡೆದುಕೊಂಡಿದೆ. 90ರ ದಶಕದಲ್ಲಿ ಸಚಿನ್‌ ತೆಂಡೂಲ್ಕರ್‌ ಮತ್ತು ಶೇನ್‌ ವಾರ್ನ್‌ ನಡುವಣ ಜಟಾಪಟಿ ಕ್ರಿಕೆಟ್‌ ಪಂದ್ಯಾವಳಿ ಸಾಕಷ್ಟು ರೋಮಾಂಚನವನ್ನು ಮೂಡಿಸುತ್ತಿದ್ದವರು.

1999ರ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ ತಂಡದ ಸದಸ್ಯ ಕೂಡ ಆಗಿರುವ ಶೇನ್ ವಾರ್ನ್‌, 2003ರಲ್ಲಿ ಅನಗತ್ಯ ಕಾರಣಗಳಿಂದಾಗಿ ಕ್ರಿಕೆಟ್‌ ಆಡದಂತೆ ನಿಷೇಧಕ್ಕೊಳಗಾಗಿದ್ದರು. 2008ರಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕನಾಗಿ ಚೊಚ್ಚಲ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟ್ರೋಫಿ ಎತ್ತಿ ಹಿಡಿದಿದ್ದರು. ನಿವೃತ್ತಿ ಬಳಿಕ ಕ್ರಿಕೆಟ್‌ ಕಾಮೆಂಟೇಟರ್‌ ವೃತ್ತಿಬದುಕಿನಲ್ಲಿ ನಿರತರಾಗಿದ್ದರು.‌

ವಾರ್ನ್‌ ಕೊನೇ ಟ್ವೀಟ್‌

“ರಾಡ್‌ ಮಾರ್ಷ್‌ ನಿಧನದ ಸುದ್ದಿ ತಿಳಿದು ಬಹಳ ನೋವಾಗಿದೆ. ನಮ್ಮ ಆಟದ ದಿಗ್ಗಜರಲ್ಲಿ ಅವರೂ ಒಬ್ಬರಾಗಿದ್ದರು. ಅದೆಷ್ಟೋ ಯುವ ಪೀಳಿಗೆಯವರಿಗೆ ಸ್ಪೂರ್ತಿಯಾದವರು. ಕ್ರಿಕೆಟ್‌ ಮೇಲೆ ಅಪಾರ ಕಾಳಜಿ ಹೊಂದಿದ್ದ ವ್ಯಕ್ತಿ ಅವರು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಕ್ರಿಕೆಟ್‌ಗೆ ಅವರ ಕೊಡುಗೆ ಅಪಾರ. ರಾಸ್‌ ಮತ್ತು ಅವರ ಕುಟುಂಬಕ್ಕೆ ನನ್ನ ಪ್ರೀತಿ ಕಳುಹಿಸುತ್ತಿದ್ದೇನೆ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ,” ಎಂದು ಶುಕ್ರವಾರ ಶೇನ್‌ ವಾರ್ನ್‌ ತಮ್ಮ ಟ್ವಿಟ್‌ ಸಹ ಮಾಡಿದ್ದರು.

ಶುಕ್ರವಾರ ಬೆಳಗ್ಗೆಯಷ್ಟೇ ಆಸ್ಟ್ರೇಲಿಯಾದ ಮಾಜಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಾಡ್‌ ಮಾರ್ಷ್‌ (74) ನಿಧನರಾಗಿದ್ದರು. ಅವರಿಗಾಗಿ ಶೇನ್‌ ವಾರ್ನ್‌ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕಂಬನಿ ಮಿಡಿದಿದ್ದರು. ಈಗ ಒಂದೇ ದಿನ ಆಸ್ಟ್ರೇಲಿಯಾ ತನ್ನ ಇಬ್ಬರು ಕ್ರಿಕೆಟ್ ದಿಗ್ಗಜರನ್ನು ಕಳೆದುಕೊಂಡಿದೆ.

ಥಾಯ್ಲೆಂಡ್‌ ಪೊಲೀಸರ ಸ್ಪಷ್ಟನೆ

‘ಥಾಯ್ ಹಾಲಿಡೇ ಐಲ್ಯಾಂಡ್ ಬಂಗಲೆಯಲ್ಲಿ ನಿಧನರಾದ ಶೇನ್ ವಾರ್ನ್ ಅವರ ಸಾವಿನಲ್ಲಿ ಯಾವುದೇ ಶಂಕೆಗಳಿಲ್ಲ. ಹಿಂಸಾಕೃತ್ಯದಿಂದ ಸಾವು ಸಂಭವಿಸಿಲ್ಲ, ಘಟನಾ ಸ್ಥಳದಲ್ಲಿ ಯಾವುದೇ ಹಿಂಸಾಕೃತ್ಯ ಸಂಭವಿಸಿಲ್ಲ ಎಂಬುದು ನಮ್ಮ ತನಿಖೆಯಿಂದ ಗೊತ್ತಾಗಿದೆ’ ಎಂದು ಥಾಯ್ಲೆಂಡ್‌ ಪೊಲೀಸ್ ಅಧಿಕಾರಿಗಳು ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ.

‘ಆಸ್ಟ್ರೇಲಿಯಾದ ನಿವೃತ್ತ ಲೆಗ್‌ಸ್ಪಿನ್ನರ್ ಶೇನ್ ಕೀತ್ ವಾರ್ನ್ ಥಾಯ್ಲೆಂಡ್‌ನ ಕೋ ಸೆಮೈನಲ್ಲಿ ನಿಧನರಾದರು. ಅವರಿಗೆ ಹೃದಯಾಘಾತವಾಗಿದೆಯೆನ್ನಲಾಗಿದೆ. ತಮ್ಮ ವಿಲ್ಲಾ (ಬಂಗಲೆ)ದಲ್ಲಿ ಅವರಿದ್ದರು. ಶುಕ್ರವಾರ ಸಂಜೆ ಅವರು ನಿಸ್ತೇಜರಾದಾಗ, ವೈದ್ಯಕೀಯ ತಂಡವು ನೀಡಿದ ಚಿಕಿತ್ಸೆಗಳು ಫಲಕಾರಿಯಾಗಲಿಲ್ಲ‘ ಎಂದು ವಾರ್ನ್‌ ಅವರ ಮ್ಯಾನೇಜ್‌ಮೆಂಟ್ ತಂಡವು ತಿಳಿಸಿತ್ತು.

ಕಂಬನಿ ಮಿಡಿದ ಕ್ರಿಕೆಟ್‌ ದಿಗ್ಗಜರು

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ಲೆಗ್‌ ಸ್ಪಿನ್ನರ್‌ ಶೇನ್‌ ವಾರ್ನ್‌ ನಿಧನಕ್ಕೆ ಕಂಬನಿ ಮಿಡಿದಿರುವ ವೀರೇಂದ್ರ ಸೆಹ್ವಾಗ್  “ಕ್ರಿಕೆಟ್‌ ಲೋಕದ ದಿಗ್ಗಜ ಸ್ಪಿನ್ನರ್‌ಗಳಲ್ಲಿ ಒಬ್ಬರು. ಸ್ಪಿನ್‌ ಬೌಲಿಂಗ್‌ ಅಮೋಘವಾಗಿ ಕಾಣುವಂತೆ ಮಾಡಿದ ಆಟಗಾರ. ಸೂಪರ್‌ ಸ್ಟಾರ್‌ ಶೇನ್‌ ವಾರ್ನ್‌ ಇನ್ನಿಲ್ಲ. ಜೀವನ ನೀರ ಮೇಲಿನ ಗುಳ್ಳೆಯಂತೆ. ಆದರೆ, ಈ ಸುದ್ದಿಯನ್ನು ಅರಗಿಸಿಕೊಳ್ಳುವುದು ಬಹಳಾ ಕಷ್ಟವಾಗುತ್ತದೆ. ಅವರ ಕುಟುಂಬ, ಬಂಧು ಮಿತ್ರರು ಮತ್ತು ವಿಶ್ವದಾದ್ಯಂತ ಇರುವ ಅಭಿಮಾನಿಗಳಿಗೆ ನನ್ನ ಹೃದಯ ಪೂರ್ವಕ ಸಾಂತ್ವಾನಗಳು,” ಎಂದು ಟ್ವೀಟ್‌ ಮಾಡಿದ್ದಾರೆ.‌

ಸಚಿನ್ ತೆಂಡೂಲ್ಕರ್ ಶೇನ್‌ ವಾರ್ನ್‌ ನಿಧನಕ್ಕೆ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಸಚಿನ್ ಮತ್ತು ಶೇನ್ ವಾರ್ನ್ ಅವರ ವೃತ್ತಿಜೀವನವು ಮೂರು ವರ್ಷಗಳ ಅಂತರದಲ್ಲಿ ಪ್ರಾರಂಭವಾಯಿತು. ಆದರೆ ಇಬ್ಬರ ನಡುವೆ ಉತ್ತಮ ಬಾಂದವ್ಯವೂ ಇತ್ತು. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಭಾರತೀಯರಿಗೆ ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಹಾಗೆಯೇ ಭಾರತೀಯರ ಹೃದಯದಲ್ಲೂ ನೀವು ವಿಶೇಷ ಸ್ಥಾನ ಗಳಿಸಿದ್ದೀರಿ. ನೀವಿದ್ದ ಜಾಗದಲ್ಲಿ ಹರುಷಕ್ಕೆ ಕೊರತೆ ಇರುತ್ತಿರಲಿಲ್ಲ. ನಿಮ್ಮ ಸಾವು ತುಂಬಾ ದುಃಖ ತಂದಿದೆ. ವಿಲ್ ಮಿಸ್ ಯು ವಾರ್ನಿ ಎಂದು ಸಚಿನ್‌ ಟೆಂಡೂಲ್ಕರ್‌ ಬರೆದುಕೊಂಡಿದ್ದಾರೆ.

ವಾರ್ನ್ ವೃತ್ತಿಜೀವನ

2007 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಶೇನ್ ವಾರ್ನ್ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ. 145 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಶೇನ್ ವಾರ್ನ್ ವೃತ್ತಿ ಬದುಕು 1992 ರಲ್ಲಿ ಭಾರತದ ವಿರುದ್ಧ ಚೊಚ್ಚಲ ಪಂದ್ಯದಿಂದ ಆರಂಭವಾಗಿತ್ತು.

ಶೇನ್ ವಾರ್ನ್ ಅವರ 5 ಪ್ರಮುಖ ವಿವಾದಗಳು

ಲಂಡನ್ ಘಟನೆ: ಸೆಪ್ಟೆಂಬರ್ 2017 ರಲ್ಲಿ, ಲಂಡನ್‌ನ ಮೇಫೇರ್‌ನಲ್ಲಿರುವ ನೈಟ್‌ಕ್ಲಬ್‌ನಲ್ಲಿ ಪೋರ್ನ್ ಸ್ಟಾರ್ ವ್ಯಾಲೆರಿ ಫಾಕ್ಸ್ ಮೇಲೆ ದಾಳಿ ಮಾಡಿದ ಆರೋಪವನ್ನು ಶೇನ್ ವಾರ್ನ್ ಎದುರಿಸಿದ್ದರು.

ವಾರ್ನ್ ಮತ್ತು ಸ್ಟೀವ್ ವಾ ಸ್ನೇಹ: ಸ್ಟೀವ್ ವಾ ಅವರ ನಾಯಕತ್ವದಲ್ಲಿ, 1999 ರ ವೆಸ್ಟ್ ಇಂಡೀಸ್ ಪ್ರವಾಸದ ಮೂರನೇ ಟೆಸ್ಟ್‌ನಲ್ಲಿ ಶೇನ್‌ ವಾರ್ನ್ ಅವರನ್ನು ಕೈಬಿಡಲಾಯಿತು. ಅಂದಿನಿಂದ, ಅವರ ಸಂಬಂಧವು ಬೇರ್ಪಟ್ಟಿತು. 2016ರಲ್ಲಿ, ವಾರ್ನ್ ಸ್ಟೀವ್‌ ವಾ ಅವರನ್ನು “ಅತ್ಯಂತ ಸ್ವಾರ್ಥಿ ಕ್ರಿಕೆಟಿಗ” ಎಂದು “ನಾನು ಸ್ಟೀವ್ ವಾ ಅವರನ್ನು ಇಷ್ಟಪಡದಿರಲು ಬಹಳಷ್ಟು ಕಾರಣಗಳಿವೆ, ಏಕೆಂದರೆ ನಾನು ನೋಡಿದ ಅತ್ಯಂತ ಸ್ವಾರ್ಥಿ ಕ್ರಿಕೆಟಿಗನಾಗಿರುವುದರಿಂದ ಬಹಳಷ್ಟು ಕಾರಣಗಳಿವೆ” ಎಂದು ಅವರು ಹೇಳಿದ್ದರು.

ಹಲವು ಮಹಿಳೆಯರೊಂದಿಗೆ ಸಂಬಂಧ: ಇಬ್ಬರು ಮಕ್ಕಳ ಎಡಿಎ ಮೇಲೆ ವಿವಾಹವಾದ ನಂತರವೂ, ಶೇನ್ ವಾರ್ನ್ ಕೆಲವು ಮಹಿಳೆಯರೊಂದಿಗೆ ಸಂಬಂಧ ಇಟ್ಟುಕೊಂಡಿದ್ದರು. ಅವರ ಪತ್ನಿ ಸಿಮೋನ್ ಕ್ಯಾಲಹನ್ ತಾಳ್ಮೆ ಕಳೆದುಕೊಂಡರು. 2005ರಲ್ಲಿ ವಿಚ್ಛೇದನ ಪಡೆದುಕೊಂಡರು. ಶೇನ್ ಬ್ರಿಟಿಷ್ ನಟಿ ಲಿಜ್ ಹರ್ಲಿಯೊಂದಿಗೆ ಸಂಬಂಧ ಹೊಂದಿದ್ದರು. ಆದರೆ ವಾರ್ನ್‌ಗೆ ಪೋರ್ನ್ ಸ್ಟಾರ್ ಜೊತೆಗಿನ ಸಂಬಂಧ ಗೊತ್ತಾದ ನಂತರ ಹರ್ಲಿ ನಿಶ್ಚಿತಾರ್ಥವನ್ನು ಮುರಿದುಕೊಂಡರು.

ಮಾದಕವಸ್ತು ಪತ್ತೆ: 2003 ಐಸಿಸಿ ವಿಶ್ವಕಪ್‌ಗೆ ಮೊದಲು, ನಿಷೇಧಿತ ಮಾದಕವಸ್ತು ಸೇವನೆಗಾಗಿ ಧನಾತ್ಮಕ ಪರೀಕ್ಷೆಗೆ ಒಳಗಾದ ನಂತರ ಶೇನ್ ವಾರ್ನ್ ಅವರ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಮತ್ತೆ ಬರಲು ‘ದ್ರವ’ ಮಾತ್ರೆ ತೆಗೆದುಕೊಂಡಿರುವುದಾಗಿ ವಾರ್ನ್‌ ಒಪ್ಪಿಕೊಂಡಿದ್ದಾರೆ. ಇದು ಸ್ಪಿನ್ನರ್ ವೃತ್ತಿಜೀವನದ ಪ್ರಮುಖ ವಿವಾದವಾಗಿತ್ತು. ಅವರ ನಿಷೇಧವನ್ನು ಒಂದು ವರ್ಷ ವಿಸ್ತರಿಸಲಾಯಿತು.

ಬುಕ್ಕಿ ವ್ಯವಹಾರ: 1994ರ ಶ್ರೀಲಂಕಾ ಪ್ರವಾಸದಲ್ಲಿ, ಮಾರ್ಕ್ ವಾ ಜೊತೆಗೆ ಶೇನ್ ಅವರು ಭಾರತೀಯ ಬುಕ್ಕಿಯೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದ್ದರು ಮತ್ತು ಪಿಚ್ ವಿವರಗಳು ಮತ್ತು ಹವಾಮಾನ ಪರಿಸ್ಥಿತಿಗಳನ್ನು ಬಹಿರಂಗಪಡಿಸಿದರು ಎಂದು ಆರೋಪಗಳಿಗೆ ಒಳಗಾದರು.

Donate Janashakthi Media

Leave a Reply

Your email address will not be published. Required fields are marked *