ಅಕ್ಟೋಬರ್ 6 ರಂದು ಶೈಲಜಾ ಟೀಚರ್ ನಮ್ಮೊಡನೆ…

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕುರಿತ ವೆಬಿನಾರ್ ಮೂಲಕ ವೆಬಿನಾರ್ ಸರಣಿಯ ಉದ್ಘಾಟನೆ ಮತ್ತು ವೆಬ್ ಪತ್ರಿಕೆಯ ಲೋಕಾರ್ಪಣೆ ಮಾಡುವ ಕಾರ್ಯಕ್ರಮವನ್ನು ಅಕ್ಟೋಬರ್ 6 ರಂದು ಸಂಜೆ ಐದರಿಂದ ನಡೆಸಲು ಯೋಜಿಸಲಾಗಿದೆ. ವೆಬ್‌ಪತ್ರಿಕೆಯ ಲೋಕಾರ್ಪಣೆಯನ್ನು ಮತ್ತು ವೆಬಿನಾರುಗಳ ಸರಣಿಯ ಉದ್ಗಾಟನೆಯನ್ನೂ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕುರಿತ ವೆಬಿನಾರಿನ ಆಶಯ ಮಾತುಗಳನ್ನೂ ಕೇರಳದ ಆರೋಗ್ಯ ಸಚಿವೆ ಶ್ರೀಮತಿ ಶೈಲಜಾ ಟೀಚರ್ ರವರು ಮಾಡಲಿದ್ದಾರೆ. ವೆಬಿನಾರಿನ ಅಧ್ಯಕ್ಷತೆಯನ್ನು ಮಾನ್ಯ ಮಾಜಿ ಆರೋಗ್ಯ ಮಂತ್ರಿ ರಮೇಶ್ ಕುಮಾರ್ ವಹಿಸಿಕೊಳ್ಳುತ್ತಾರೆ. 

ಜನಶಕ್ತಿ ಮೀಡಿಯಾ ವೆಬ್ ಪತ್ರಿಕೆಯು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾಗಿದ್ದು, ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರ ವರೆಗಿನ ಅವಧಿಯಲ್ಲಿ ಬರಹ ಮತ್ತು ವೆಬಿನಾರುಗಳ ಸರಣಿಯ ಮೂಲಕ ಲೋಕಾರ್ಪಣೆಯಾಗುತ್ತಿದೆ.

“ಕರ್ನಾಟಕ 2020 : ಕೊರೊನಾ ಕಾಲದಲ್ಲಿ ಮತ್ತು ನಂತರ” ಈ ಲೋಕಾರ್ಪಣೆ ಸರಣಿ ಕಾರ್ಯಕ್ರಮಗಳ ಸಾಮಾನ್ಯ ಥೀಮ್ ಆಗಿರುತ್ತದೆ. ಈ ಸಾಮಾನ್ಯ ಥೀಮ್ ಅಡಿಯಲ್ಲಿ ಹಲವು ಉಪಥೀಮ್ ಗಳ ಕುರಿತು ಬರಹ, ಅಡಿಯೊ/ವಿಡಿಯೊ ಪ್ರತಿಕ್ರಿಯೆಗಳ ಮತ್ತು ವೆಬಿನಾರ್ ನ ಮೂಲಕ ಸಂವಾದ ನಡೆಸಲಾಗುತ್ತದೆ. ಸಾರ್ವಜನಿಕ ಆರೋಗ್ಯ, ಮಾನವ ಹಕ್ಕುಗಳು, ಸಾಮಾಜಿಕ ಭದ್ರತೆ, ವೈಜ್ಞಾನಿಕ ಮನೋವೃತ್ತಿ, ಪ್ರದರ್ಶನ ಕಲೆಗಳು, ರ‍್ಯಾಯ ಮಾಧ್ಯಮ – ಇವು ಉಪಥೀಮ್ ಗಳಾಗಿರುತ್ತವೆ. ಈ ವಿಷಯಗಳ ಕುರಿತು ಈಗಾಗಲೇ ಬರಹ, ಅಡಿಯೊ/ವಿಡಿಯೊ ಪ್ರತಿಕ್ರಿಯೆಗಳು ವೆಬ್ ಪತ್ರಿಕೆಯಲ್ಲಿ ಪ್ರಕಟವಾಗಲಾರಂಭಿಸಿವೆ.

ಹಲವು ಸಬ್ ಥೀಮ್ ಗಳ ಕುರಿತು ನಡೆಸುವ ವೆಬಿನಾರ್ ನಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಅತಿ ಮುಖ್ಯ ವಲಯವಾಗಿ ಪರಿಗಣಿಸಿ ಅದರ ಕುರಿತ ವೆಬಿನಾರ್ ಮೂಲಕ ಸರಣಿಯ ಉದ್ಘಾಟನೆ ಮತ್ತು ವೆಬ್ ಪತ್ರಿಕೆಯ ಲೋಕಾರ್ಪಣೆ ಮಾಡುವ ಕಾರ್ಯಕ್ರಮವನ್ನು ಅಕ್ಟೋಬರ್ 6 ರಂದು ಸಂಜೆ ಐದರಿಂದ ನಡೆಸಲು ಯೋಜಿಸಲಾಗಿದೆ.

ವೆಬ್‌ಪತ್ರಿಕೆಯ ಲೋಕಾರ್ಪಣೆಯನ್ನು ಮತ್ತು ವೆಬಿನಾರುಗಳ ಸರಣಿಯ ಉದ್ಗಾಟನೆಯನ್ನೂ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕುರಿತ ವೆಬಿನಾರಿನ ಆಶಯ ಮಾತುಗಳನ್ನೂ ಕೇರಳದ ಆರೋಗ್ಯ ಸಚಿವೆ ಶ್ರೀಮತಿ ಶೈಲಜಾ ಟೀಚರ್ ರವರು ಮಾಡಲಿದ್ದಾರೆ. ವೆಬಿನಾರಿನ ಅಧ್ಯಕ್ಷತೆಯನ್ನು ಮಾನ್ಯ ಮಾಜಿ ಆರೋಗ್ಯ ಮಂತ್ರಿ ರಮೇಶ್ ಕುಮಾರ್ ವಹಿಸಿಕೊಳ್ಳುತ್ತಾರೆ.

“ಕರ್ನಾಟಕ ಕೊರೊನಾ ಸಂತ್ರಸ್ತ ರಾಜ್ಯಗಳಲ್ಲಿ 10ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಯಾಕೆ ಬಂತು? ಎಂಬ ವಿಷಯವಾಗಿ ವೆಬಿನಾರ್ ಭಾಗವಾಗಿ ಒಂದು ಸಂವಾದ ಇರುತ್ತದೆ. ಸಂವಾದದಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ವೈದ್ಯರು, ಸರಕಾರ ಆರೋಗ್ಯ ಇಲಾಖೆಯ ಪ್ರತಿನಿದಿಗಳು, ಕೊವಿದ್ ಟಾಸ್ಕ್ ಫರ‍್ಸ್ ಸದಸ್ಯರು, ಜನಾರೋಗ್ಯ ಮತ್ತು ಜನ ವಿಜ್ಞಾನ ಚಳುವಳಿಗಾರರು, ಜನ ಸಂಘಟನೆಗಳ ಮತ್ತು ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

 

 

 

Donate Janashakthi Media

Leave a Reply

Your email address will not be published. Required fields are marked *