11 ಸಾವಿರ ಕನ್ನಡ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ: ಶಿಕ್ಷಣ ಸಚಿವರಿಗೆ ಎಸ್‌ಎಫ್‌ಐ ಎಚ್ಚರಿಕೆ

ಬೆಂಗಳೂರು: ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ ತೀವೃ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್‌ (SFI) ಕರ್ನಾಟಕ ರಾಜ್ಯ ಸಮಿತಿ ಎಚ್ಚರಿಸಿದೆ.

ಇಂದು (ಆ 18) ಎಸ್.ಎಫ್.ಐ ರಾಜ್ಯ ನಿಯೋಗವು ಪ್ರಾಥಮಿಕ ಮತ್ತು ಫ್ರೌಡ ಶಾಲಾ ಶಿಕ್ಷಣ ಇಲಾಖೆ ಮತ್ತು ಸಕಲ ಸಚಿವರಾದ ಮಧು ಬಂಗಾರಪ್ಪ ಅವರನ್ನು ವಿಧಾನಸೌಧದ ಅವರ ಕಛೇರಿಯಲ್ಲಿ ಭೇಟಿಮಾಡಿ ಮನವಿ ಸಲ್ಲಿಸಿ ಎಚ್ಚರಿಸಿದೆ. ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಶೈಕ್ಷಣಿಕ ಸಮಸ್ಯೆಗಳ ಪಟ್ಟಿಯನ್ನು ನಿಯೋಗವು ನೀಡಿತು.

ರಾಜ್ಯದಲ್ಲಿ 11,000 ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚಲು ಮುಂದಾಗಿದೆ. ಹಾಗೂ 36,000 ಶಾಲೆಗಳಲ್ಲಿ ಶೌಚಾಲಯಗಳಿದ್ದು ಆದರೆ ಬಳಕೆಗೆ ಯೋಗ್ಯವಲ್ಲದ ರೀತಿಯಲ್ಲಿರುವ ಕಾರಣ ಶೌಚಾಲಯಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ 60,000 ವಿಷಯವಾರು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇನ್ನೊಂದು ಕಡೆ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಕಡಿಮೆ ಇರುವ ಕಾರಣ ಶಾಲೆಗಳನ್ನು ವಿಲೀನಗೊಳಿಸಲಾಗುತ್ತಿದೆ ಎಂದು ಸರ್ಕಾರವೇ ಘೋಷಣೆ ಮಾಡಿರುವುದರ ವಿರುದ್ಧ SFI ತೀವ್ರ ವಿರೋಧ ವ್ಯಕ್ತಪಡಿಸಿದೆ.

ಇದನ್ನೂ ಓದಿ : ಧರ್ಮಸ್ಥಳ | ಆನೆ ಮಾವುತ ಮತ್ತು ಸಹೋದರಿಯ ಕೊಲೆ ಪ್ರಕರಣದ ತನಿಖೆಗೆ ಒತ್ತಾಯಿಸಿ ಎಸ್ಐಟಿಗೆ ದೂರು

ಶಾಲಾಗಳಲ್ಲಿ ಸಮಯಕ್ಕೆ ಸರಿಯಾಗಿ ಸಮವಸ್ತ್ರ ಬಿಸಿ ಊಟ, ಮೊಟ್ಟೆ, ಬಾಳೆಹಣ್ಣು, ಸೇರಿದಂತೆ ಸೈಕಲನ್ನು ವಿತರಣೆ ಮಾಡಲು ಎಸ್.ಎಫ್.ಐ ಒತ್ತಾಯಿಸಿದೆ. ಕಲ್ಯಾಣ(ಹೈದರಾಬಾದ್) ಕರ್ನಾಟಕದ ಪ್ರದೇಶದಲ್ಲಿ ಈಗಾಗಲೇ ಐದು ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿಯನ್ನು ಕರೆಯಲಾಗಿತ್ತು. ಆದರೆ ಆ ಹುದ್ದೆಗಳನ್ನು ಇದುವರೆಗೂ ಭರ್ತಿ ಮಾಡಿಕೊಂಡಿಲ್ಲ. ಎನ್.ಸಿ.ಆರ್.ಟಿ ಮತ್ತು ಐ.ಸಿ.ಎಸ್.ಆರ್ ಅಂಕಗಳ ಗೊಂದಲವನ್ನು ಸೃಷ್ಟಿಸಿದೆ. ಹಾಗೂ ಪಠ್ಯಕ್ರಮದ ಮಾದರಿಯನ್ನು ಸಿದ್ಧಗೊಳಿಸಲು ಸಾಧ್ಯವಾಗಿಲ್ಲ. ಎನ್ನುವುದು ಸರ್ಕಾರವೇ ತನ್ನ ಲೋಪವನ್ನು ಘೋಷಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲದೆ ಶಿಕ್ಷಕರ ಮೇಲೆ ಹೆಚ್ಚಿನ ಹೊರೆಯನ್ನು ಸರ್ಕಾರ ನೀಡುವುದು ನಿಲ್ಲಿಸಬೇಕು. ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಪ್ರವಚನ ಮಾಡುಲು ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಶೈಕ್ಷಣಿಕ ಪರಿಸ್ಥಿತಿಯ ಕುರಿತಾಗಿ ಸಚಿವರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಮನವಿಯನ್ನು ಕೂಡ ಮಾಡಿದೆ.

ಮನವಿ ಸ್ವೀಕರಿಸಿ ಸಚಿವರು ಈಗಾಗಲೆ ನಾವು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 5000 ಶಿಕ್ಷಕರ ಹುದ್ದೆ ಕರೆಯಲು ಸಿದ್ದಮಾಡಿಕೊಂಡಿದ್ದೇವೆ. ಒಳ ಮೀಸಲಾತಿ ಘೋಷಣೆ ನಂತರ ಕರೆಯುತ್ತೇವೆ ಎಂದರು ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಲು ಯಾವುದೇ ಮಾಹಿತಿಯನ್ನು ಸಚಿವರು ನೀಡಲಿಲ್ಲ ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಶಿವಪ್ಪ ಅಂಬ್ಲಿಕಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷರಾದ ಡಾ. ದೊಡ್ಡಬಸವರಾಜ್ ಹಾಗೂ ಗಣೇಶ್ ರಾಥೋಡ್ ಹಾಗೂ ಬೆಂಗಳೂರಿನ ಜಿಲ್ಲಾ ಮುಖಂಡರಾದ ವೆಂಕಟೇಶ್ ಇದ್ದರು.

ಇದನ್ನೂ ನೋಡಿ : ದೂರುದಾರ ವ್ಯಕ್ತಿ ಪ್ರಾಮಾಣಿಕ, ಆತ ಹೇಳ್ತೀರೋದು ಎಲ್ಲವೂ ಸತ್ಯ – ಬಾಲನ್​Janashakthi Media

Donate Janashakthi Media

Leave a Reply

Your email address will not be published. Required fields are marked *