ಹೆಳವರ ಮಕ್ಕಳಿಗೆ ಉಚಿತ ವಸತಿ ಶಿಕ್ಷಣ ಒದಗಿಸುವಂತೆ ಒತ್ತಾಯಿಸಿ ಎಸ್ಎಫ್ಐ ಮನವಿ

ಹಾವೇರಿ: ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಳವರ ಮಕ್ಕಳಿಗೆ ಉಚಿತ ವಸತಿ ಶಿಕ್ಷಣ ಒದಗಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಖಾಲಿ ನಿವೇಶನ ಒಂದರಲ್ಲಿ ಸುಮಾರು 57 ಕುಟುಂಬಗಳ 250 ಕಿಂತ ಅಧಿಕ ಹೆಳವ ಸಮುದಾಯದ ಜನರ ಸುಮಾರು ತಿಂಗಳಿಂದ ಬೀಡುಬಿಟ್ಟಿದ್ದು. 15 ಕಿಂತ ಹೆಚ್ಚು ಮಕ್ಕಳು ಶಿಕ್ಷಣ ದಿಂದ ವಂಚಿತರಾಗಿದ್ದು ಈವರೆಗೂ ಶಾಲೆ ಮುಖವನ್ನೆ ನೋಡಿಲ್ಲ. ಊರ ಊರು ತಿರುಗಿ ವಂಶವೃಕ್ಷವನ್ನು ಹಾಡುಗಳು ಮೂಲಕ ಹೇಳುವ ಹೆಳವ ಸಮುದಾಯದ ಜನರಿಗೆ ಅವರ ಮಕ್ಕಳ ಶಿಕ್ಷಣ ಭವಿಷ್ಯ ರೂಪಿಸಿಕೊಳ್ಳವುದು ಕನಸಿನ ಮಾತಾಗಿದೆ. ನಮ್ಮ ಮಕ್ಕಳು ಶಿಕ್ಷಣವಂತರಾಗ ಬೇಕು ಎಂಬ ಅವರ ಕನಸಿಗೆ ಶ್ರೀ ಶಕ್ತಿ ಮಕ್ಕಳ ತೆರೆದ ತಂಗುದಾಣ ಹಾಗೂ ಸಾಮಾಜಿಕ ಪರಿವರ್ತನಾ ಜನಾಂದೋಲನ ವಸತಿ ಶಾಲೆಗೆ ಸೇರಿಸಲು ಶ್ರಮಪಡುತ್ತಿದ್ದು ಎಸ್ಎಫ್ಐ ಸಂಘಟನೆ ಬೆಂಬಲವಾಗಿದೆ.

ವಲಸೆ ಹೋಗುವ ಈ ಸಮುದಾಯದ ಜನರಿಗೆ ಒಂದೆಡೆ ನೆಲೆಸಲು ಮೂಲ ಸೌಕರ್ಯಗಳು ಇಲ್ಲದೆ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದವರಾಗಿರುವದರಿಂದ ಹಾಗೂ ಸರಿಯಾದ ಯಾವುದೇ ದಾಖಲೆಗಳು ಇಲ್ಲದೆ ಇವರ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರು ಅಸಹಾಯಕರಾಗಿದ್ದಾರೆ. ಶ್ರೀ ಶಕ್ತಿ ತೆರೆದತಂಗುದಾಣ, ಸಮಾಜಿಕ ಪರಿವರ್ತನಾ ಜನಾಂದೋಲನ ಹಾಗೂ ಎಸ್ಎಫ್ಐ ಜೊತೆಗೆ ಹೆಳವ ಸಮುದಾಯದ ಪೋಷಕರು ಸಭೆ ನಡೆಸಿ ನಮ್ಮ ಮಕ್ಕಳು ಶಾಲೆಗೆ ಸೇರಿಸಿ ನಾವು ಬೇರೆ ಎಲ್ಲಿಯಾದರೂ ಹೋಗಲಿ ನಮ್ಮ ಮಕ್ಕಳು ಹಾವೇರಿ ಜಿಲ್ಲೆಯಲ್ಲಿಯೇ ಶಿಕ್ಷಣ ಪಡೆದಕೊಳ್ಳಿ ಎಂದರು‌. ಆದರಿಂದ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಗೆ ಮನವಿ ಮಾಡಿಕೊಂಡು ಒಂದು ವಾರ ಎಲ್ಲಾ ವಸತಿ ಶಾಲೆಗಳಿಗೆ ತಿರುಗಿದರು ಯಾವ ಶಾಲೆಗಳಲ್ಲಿ ಮೂಲ ದಾಖಲೆಗಳು ಇಲ್ಲವೆಂದು ಪ್ರವೇಶ ನೀಡುತ್ತಿಲ್ಲ ಎಂಬುದು ಬೇಸರದ ಸಂಗತಿ ಆಗಿದೆ. ಸರ್ಕಾರದ RTE ನಿಯಮ 2009 ರ ಪ್ರಕಾರ 6 ವರ್ಷದ ನಂತರದ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣವನ್ನು ನೀಡಬೇಕು ಎಂಬುದನ್ನು ಶಿಕ್ಷಣ ಇಲಾಖೆ ಉಲ್ಲಂಘನೆ ಮಾಡುತ್ತಿರುವುದು ಸರಿಯಲ್ಲ ಈ ಕೂಡಲೇ ಜಿಲ್ಲಾ ಆಡಳಿತ ಹಾಗೂ ಶಿಕ್ಷಣ ಇಲಾಖೆ ಹೆಳವ ಸಮುದಾಯದ ಮಕ್ಕಳಿಗೆ ಉಚಿತ ವಸತಿ ಶಿಕ್ಷಣ ಒದಗಿಸಬೇಕು ಎಂದು ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಆಕ್ರೋಶ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿ ಅಪಾರ ಜಿಲ್ಲಾಧಿಕಾರಿಗಳು ಮಾತನಾಡಿ ದಾಖಲೆಗಳು ಇಲ್ಲದೆ ಹೇಗೆ ಶಾಲೆ ಸೇರಿಕೊಳ್ಳಬೇಕು?ಮುಂದಿನ ಶೈಕ್ಷಣಿಕ ವರ್ಷದಿಂದ ಸರಿಯಾದ ದಾಖಲೆ ಸರಿಮಾಡಿಕೊಂಡು ಶಾಲೆಗೆ ಸೇರಿಸಿ ಎಂದು ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಈ ಸಂದರ್ಭದಲ್ಲಿ ಎಸ್ಎಫ್ಐ ತಾಲೂಕು ಸಹ ಕಾರ್ಯದರ್ಶಿ ಅರುಣ್ ಕಡಕೋಳ, ಜಿಲ್ಲಾ ಮುಖಂಡರಾದ ಗುಡ್ಡಪ್ಪ ಮಡಿವಾಳರ, ವಿವೇಕ್ ಫನಸೆ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *