ಕಲಬುರಗಿ : UGC ಬಿಡುಗಡೆ ಮಾಡಿದ ಫಲಿತಾಂಶಗಳ ಆಧಾರಿತ ಪಠ್ಯಕ್ರಮ ಚೌಕಟ್ಟು (LOCF)ಕರಡನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಕಲಬುರ್ಗಿ ಜಿಲ್ಲಾ ಸಮಿತಿ ಪ್ರತಿಭಟನೆ ನಡೆಸಿದೆ. ಕಲಬುರಗಿ
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ SFI ಜಿಲ್ಲಾ ಕಾರ್ಯದರ್ಶಿ ಸುಜಾತಾ ವೈ UGC ಬಿಡುಗಡೆ ಮಾಡಿದ ಪ್ರಾಚೀನ ಮತ್ತು ಅವೈಜ್ಞಾನಿಕ ಕಲಿಕಾ, ಫಲಿತಾಂಶಗಳ ಆಧಾರಿತ ಪಠ್ಯಕ್ರಮ ಚೌಕಟ್ಟು (LOCF) ಕರಡನ್ನು ಬಲವಾಗಿ ವಿರೋಧಿಸುತ್ತದೆ, ಮತ್ತು ಈ ಕರಡಿಗೆ ಸಾರ್ವಜನಿಕ ಪ್ರತಿಕ್ರಿಯೆ ನೀಡಲು ಬಹಳ ಕಡಿಮೆ ಸಮಯವನ್ನು ನಿಗದಿಪಡಿಸಲಾಗಿದೆ. ಇದು ರಸಾಯನಶಾಸ್ತ್ರದ LOCF ಸರಸ್ವತಿಗೆ ನಮಸ್ಕಾರದೊಂದಿಗೆ ಪ್ರಾರಂಭವಾಗುತ್ತದೆ, ಹಾಗೆಯೇ ವಾಣಿಜ್ಯ ಪಠ್ಯಕ್ರಮವು ಕಾಲೇಜುಗಳಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವನ್ನು ಕಲಿಸಲು ಸೂಚಿಸುತ್ತದೆ. ವಿ.ಡಿ. ಸಾವರ್ಕರ್ ಅವರ “ಭಾರತೀಯ ಸ್ವಾತಂತ್ರ್ಯ ಸಂಗ್ರಾಮ” ಎಂಬುದನ್ನು ‘ಭಾರತೀಯ ಸ್ವಾತಂತ್ರ್ಯ ಹೋರಾಟ’ದ ಕೋರ್ಸ್‌ನ ಓದುವ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ಶಿಕ್ಷಣದಲ್ಲಿ RSS ಕಾರ್ಯಸೂಚಿಯನ್ನು ಸೇರಿಸುವ ಪ್ರಯತ್ನ ಖಂಡನಿಯವಾಗಿದೆ ಎಂದು ಆರೋಪಿಸಿದರು.
ಸಂವಿಧಾನದ 51A(h) ವಿಧಿಯ ಪ್ರಕಾರ, ವೈಜ್ಞಾನಿಕ ಮನೋಭಾವ, ಮಾನವತಾವಾದ ಮತ್ತು ವಿಚಾರಣೆ ಮತ್ತು ಸುಧಾರಣೆಯ ಮನೋಭಾವವನ್ನು ಬೆಳೆಸುವುದು ನಾಗರಿಕರ ಮೂಲಭೂತ ಕರ್ತವ್ಯವಾಗಿದೆ. ಯುಜಿಸಿಯ ಈ ಪ್ರಯತ್ನವು ಉನ್ನತ ಶಿಕ್ಷಣದಲ್ಲಿ ಕೇಸರೀಕರಣವನ್ನು ಮಾಡುವ ಮತ್ತು ಅವೈಜ್ಞಾನಿಕ ಮನೋಭಾವವನ್ನು ಪ್ರಚಾರ ಮಾಡುವ ಉದ್ದೇಶದಿಂದ ಮಾಡಲಾಗುತ್ತಿದೆ ಎಂದು ದೂರಿದರು.
ಇದನ್ನೂ ನೋಡಿ : ಸರ್ಕಾರಿ ಪ್ರೌಢ ಶಾಲೆಯ ಶುಲ್ಕ – ಬಿಸಿ ಊಟದ ವ್ಯವಸ್ತೆಯಲ್ಲಿ ಅಕ್ರಮ; ಎಸ್ಎಫ್ಐ ಪ್ರತಿಭಟನೆ ಕಲಬುರಗಿ

ಸ್ವಾತಂತ್ರ್ಯ ಚಳವಳಿಯ ಕುರಿತಾದ ಕಲಿಕಾ ಪಟ್ಟಿಯಲ್ಲಿ ಸಾವರ್ಕರ್ ಅವರ ಪುಸ್ತಕವನ್ನು ಸೇರಿಸಿರುವುದು ಸ್ವಾತಂತ್ರ್ಯ ಹೋರಾಟದ ನೈಜ ಇತಿಹಾಸದಿಂದ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಉದ್ದೇಶವನ್ನು ಹೊಂದಿದೆ. ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದವರು ಬರೆದ ಪುಸ್ತಕಗಳಿಂದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುವ ಅಗತ್ಯವಿಲ್ಲ ಎಂದರು.
ನಮ್ಮ ದೇಶದಲ್ಲಿ ಶಿಕ್ಷಣದ ಈ ವಿನಾಶದ ವಿರುದ್ಧ ಹೋರಾಟ ಮಾಡಲು ಎಸ್‌ಎಫ್‌ಐ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡುತ್ತದೆ. ಯುಜಿಸಿ ಮಂಡಿಸಿದ ಈ ಅವೈಜ್ಞಾನಿಕ ಮನೋಭಾವದ ಪ್ರಚಾರವನ್ನು ವಿರೋಧಿಸಲು ಎಸ್‌ಎಫ್‌ಐ ವಿದ್ಯಾರ್ಥಿಗಳಿಗೆ ಕರೆ ನೀಡಿದೆ. ಯುವ ಮನಸ್ಸುಗಳನ್ನು ಕೋಮುವಾದಿಗೊಳಿಸುವ ಪ್ರಯತ್ನವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ ವಿರೋಧಿಸುತ್ತದೆ ಮತ್ತು ತಡೆಯಲು ನಿರಂತರ ಹೋರಾಟ ಮಾಡುತ್ತದೆ ಎಂದು ಎಚ್ಚರಿಕೆ ನಿಡಿದರು.
ಈ ಪ್ರತಿಭಟನೆಯಲ್ಲಿ SFI ಜಿಲ್ಲಾ ಉಪಾಧ್ಯಕ್ಷ ಪ್ರೇಮ್, ಸದಸ್ಯರಾದ ಹುಲಗಮ್ಮ, ಮಾಲಾಶ್ರೀ, ಕಿರಣ್ ನಾಟಿಕಾರ್,ಅವಿನಾಶ್, ದೇವಾನಂದ, ರಾಕೇಶ್, ಶರಣು, ಚೇತನ್, ವಿಜಯಕುಮಾರ್, ಸುಧೀರ ಇದ್ದರು.
ಇದನ್ನೂ ನೋಡಿ : FRS ಗೆ ಯಾಕೆ ವಿರೋಧ? ಐಸಿಡಿಎಸ್ ಯೋಜನೆಯ ಆಶಯಕ್ಕೆ ಕತ್ತರಿ! Janashakthi Media #anganwadiworkers
