ಹಾವೇರಿ: ವಿದ್ಯಾರ್ಥಿ ಸಮುದಾಯದ ವಿವಿಧ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ರಾಜ್ಯ ಸಮಿತಿ ಸಭೆಯು ಹಾವೇರಿಯ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಿಜಯ ಮೈಸೂರು, ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವ ಮೂಲಕ ತಿಳಿಸಿದ್ದಾರೆ. ಕಳೆದ 4 ವರ್ಷದಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಲವರಿಗೆ ಬಂದಿಲ್ಲ. 2024-25 ನೇ ಶೈಕ್ಷಣಿಕ ವರ್ಷ ಮುಗಿದಿದ್ದರು ಈ ವರ್ಷದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಂದಿಲ್ಲ ಇದರ ವಿರುದ್ಧ ರಾಜ್ಯವ್ಯಾಪ್ತಿ ಹೋರಾಟ ರೂಪಿಸಿವುದು. ರಾಜ್ಯದಲ್ಲಿ 9 ವಿ ವಿ ಗಳನ್ನು ಮುಚ್ಚುವ ನಿರ್ಧಾರ ಅಥವಾ ವಿಲೀನವನ್ನು ಎಸ್.ಎಫ್.ಐ ವಿರೋಧಿಸಿ ರಾಜ್ಯವ್ಯಾಪ್ತಿ ಹೋರಾಟಕ್ಕೆ ಕರೆ ನೀಡಿದೆ.
ಇದನ್ನೂ ಓದಿ: ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ: ಶೀಘ್ರವೇ 19,000 ಶಿಕ್ಷಕರ ನೇಮಕಾತಿ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 2022 ರಿಂದ ಇಲ್ಲಿಯ ತನಕ ಮುದ್ರಿತ ಅಂಕಪಟ್ಟಿ ನೀಡಿಲ್ಲ ಈ ಹಿಂದೆ ರಾಜ್ಯ ವ್ಯಾಪ್ತಿ ಹೋರಾಟ ಮಾಡಲಾಗಿದೆ. ಅಂಕಪಟ್ಟಿ ವಿತರಿಸುವ ತನಕ ಹೋರಾಟ ಮಾಡುವಂತೆ ಕರೆ ನೀಡಲಾಯಿತು. NCERT 7 ನೇ ತರಗತಿಯಲ್ಲಿದ್ದ ಮೊಗಲರು ಮತ್ತು ದೆಹಲಿ ಸುಲ್ತಾನರ ಪಾಠ ಕೈಬಿಟ್ಟು ಮಹಾಕುಂಭ ಮೇಳದ ಕುರಿತು ಸೇರಿಸುವುದನ್ನು ವಿರೋಧಿಸಿದ್ದೇವೆ. ಮತ್ತು NCERT ಪಠ್ಯ ಪುಸ್ತಕ ಬದಲಾವಣೆ ಕುರಿತು ರಾಜ್ಯ ವ್ಯಾಪ್ತಿ ಹೋರಾಟಕ್ಕೆ ಕರೆ ನೀಡಿದೆ.
ರಾಜ್ಯದಲ್ಲಿ ಡೋನೆಷನ್ ಹಾವಳಿ ಹೆಚ್ಚಾಗಿದ್ದು ರಾಜ್ಯ ಸರ್ಕಾರ ತಡೆಯುವಲ್ಲಿ ವಿಫಲವಾಗಿದೆ. ಡೋನೆಷನ್ ಹಾವಳಿ ವಿರುದ್ಧ ಹೋರಾಟ ಮಾಡಲು ಹಾಗೂ ಡೋನೆಷನ್ ಹಾವಳಿ ನಿಯಂತ್ರಣ ಕಾಯ್ದೆ ಸಮರ್ಪಕವಾಗಿ ಜಾರಿಗಾಗಿ ತೀರ್ಮಾನಿಸಲಾಯಿತು.
ವಿದ್ಯಾರ್ಥಿ ಸಂಘಟನೆ ಬಲವರ್ಧನೆಗಾಗಿ ವಿದ್ಯಾರ್ಥಿ ಮುಖಂಡರಿಗೆ ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು ರಾಮನಗರದಲ್ಲಿ ನಡೆಸುವಂತೆ ತೀರ್ಮಾನ ತೆಗೆದುಕೊಳ್ಳಲಾಯಿತ್ತು ಎಂದು ತಿಳಿಸಿದರು.
ಹಾಸ್ಟೆಲ್ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯಗಳ, ಸಮಸ್ಯೆಗಳ ಪರಿಹಾರಕ್ಕಾಗಿ ಹಾಗೂ ಶೈಕ್ಷಣಿಕ ವರ್ಷದ ಶಾಲಾ-ಕಾಲೇಜ್ ಪ್ರವೇಶದ ಜೊತೆಗೆ ಏಕಕಾಲಕ್ಕೆ ವಸತಿ ನಿಲಯಗಳನ್ನು ಪ್ರಾರಂಭಿಸಲು ಸೇರಿದಂತೆ ವಿದ್ಯಾರ್ಥಿ ಸಮುದಾಯದ ವಿವಿಧ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಕರ್ನಾಟಕ ರಾಜ್ಯ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ ವಿವಿಧ ಜಿಲ್ಲೆಯ ಮುಖಂಡರು ಸುದೀರ್ಘ ಚರ್ಚೆ ನಡೆಸಿ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಎಸ್ಎಫ್ಐ ರಾಷ್ಟ್ರೀಯ ಉಪಾಧ್ಯಕ್ಷ ನಿತೀಶ್ ನಾರಾಯಣ್ ಮಾರ್ಗದರ್ಶನ ಮಾಡಿದರು. ರಾಜ್ಯಾಧ್ಯಕ್ಷ ಶಿವಪ್ಪ ಕೋಲಾರ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಗಣೇಶ ರಾಠೋಡ್, ಡಾ.ದೊಡ್ಡಬಸವರಾಜ ಗುಳೆದಾಳು, ಗ್ಯಾನೇಶ್ ಕಡಗದ, ಪದಾಧಿಕಾರಿ ಸುಜಾತ ಕಲಬುರಗಿ, ಸುರೇಶ್ ಬಾಬು, ಅನಂತರಾಜ್ ಜಗಳೂರ, ಚಂದ್ರು ರಾಠೋಡ್, ಸದಸ್ಯರಾದ ಇಮಾಮ್ ಸಾಬ್ ನಾದಫ್,ಶಶಿಕುಮಾರ್, ಶಿವ ರೆಡ್ಡಿ, ಅರ್ಪಿತಾ ಬೆಂಗಳೂರು, ರಜಿಯಾ ಸೇರಿದಂತೆ ಇತರರು ಹಾಜರಿದ್ದರು.
ಇದನ್ನೂ ನೋಡಿ: ಮೇ ದಿನದ ವಿಶೇಷ | ಕನಿಷ್ಠ ವೇತನಕ್ಕೆ ಯಾಕಿಷ್ಟು ವಿಳಂಬ – ಮೀನಾಕ್ಷಿ ಸುಂದರಂ Janashakthi Media