ನಿಯಮ ಮೀರಿ ಹಣ ಪಡೆದ ಖಾಸಗಿ ಕಾಲೇಜು ವಿರುದ್ಧ ಪ್ರತಿಭಟಿಸಿದರೆ ಏಟು ಬೀಳುವುದು ಗ್ಯಾರಟಿ!?

ಹರಪನಹಳ್ಳಿ : ನಿಯಮ ಮೀರಿ ಹಣ ಪಡೆದ ಖಾಸಗಿ ಕಾಲೇಜು ವಿರುದ್ಧ ಪ್ರತಿಭಟಿಸಿದರೆ ಏಟು ಬೀಳುವುದು ಗ್ಯಾರಟಿ!? ಅದು ಪೊಲೀಸರಿಂದ!! ಹೌದು, ಹರಪನಹಳ್ಳಿಯಲ್ಲಿರುವ ಎಸ್‌ಎಸ್‌ಎಚ್ ಜೈನ್ ಪಿಯು ಕಾಲೇಜು ನಿಯಮವನ್ನು ಉಲ್ಲಂಘಿಸಿ, ಪೋಷಕರಿಂದ ಮನಸೋ ಇಚ್ಛೆ ಹಣವನ್ನು ವಸೂಲಿ ಮಾಡುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿ ಸಂಘಟನೆಗಳು ನಡೆಸಿದ ಪ್ರತಿಭಟನೆಯ ಮೇಲೆ ಪೊಲೀಸರು ಕ್ರೌರ್ಯ ಮೆರೆದಿದ್ದಾರೆ.

ಎಸ್‌ಎಫ್‌ಐ ಮತ್ತು ಎಐಎಸ್‌ಎಫ್‌ ಜಂಟಿಯಾಗಿ ಪ್ರತಿಭಟನೆಯನ್ನು ಆಯೋಜಿಸಿದ್ದವು. ಕಾಲೇಜ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು, ಅ ಸಂದರ್ಭದಲ್ಲಿ ಪ್ರಾಂಶುಪಾಲರು ಕಾಲೇಜಿನಲ್ಲಿ ಇಲ್ಲ ಎಂದು ಅಲ್ಲಿನ ಸಿಬ್ಬಂದಿಯವರು ತಿಳಿಸಿದಾಗ ಆಕ್ರೋಶಭರಿತರಾದ ಕಾರ್ಯಕರ್ತರು ಹರಿಹರ-ಹೊಸಪೇಟೆ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟಸಲು ಮುಂದಾದರು ಅ ವೇಳೆ ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಪ್ರಕಾಶ್ ಏಕಾಏಕಿ ರಸ್ತೆ ಬಂದ್ ಮಾಡಿ ಪ್ರತಿಭಟಿಸುವುದಕ್ಕೆ ಆವಕಾಶ ನೀಡುವುದಿಲ್ಲ ಎಂದು ಹೇಳಿದರು. ಈ ವೇಳೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆಗೆ ಮುಂದಾದ ವೆಂಕಟೇಶ್ ಮತ್ತು ರಮೇಶ್ ಅವರ ಮೇಲೆ ಪೊಲೀಸರು ಕೊರಳ ಪಟ್ಟಿಯನ್ನು ಹಿಡಿದು ಎಳೆದಾಡಿದ್ದಲ್ಲದೆ ಬಲವಂತವಾಗಿ ಪೊಲೀಸ್‌ ವಾಹನದೊಳಗೆ ತಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ‌

ಅವರಿಬ್ಬರನ್ನು ಪೊಲೀಸರು ಬಲವಂತವಾಗಿ ಬಂಧಿಸಿ ಠಾಣೆಗೆ ಕರೆದ್ಯೊಯ್ದು ವಿಚಾರಿಸಿ ನಂತರ ಬಿಡುಗಡೆಗೊಳಿಸಿದ್ದಾರೆ. ಈ ಘಟನೆಯನ್ನು ಜನಪರ ಸಂಘಟನೆಗಳು ಖಂಡಿಸಿವೆ.  ಹೋರಾಟಕ್ಕೆ ರಕ್ಷಣೆ ನೀಡಲು ಪೊಲೀಸರಿಗೆ ಅವಕಾಶವಿದೆಯೇ ಹೊರತು, ಅನುಮತಿಯನ್ನು ಪಡೆದು ಇದೇ ಜಾಗದಲ್ಲಿ ಹೋರಾಟ ಮಾಡಿ ಎಂದು ಹೇಳಲು ಹಕ್ಕಿಲ್ಲ. ಇದು ಸ್ವಾತಂತ್ರ್ಯದ ಹರಣವಾಗಿದೆ. ಪೊಲೀಸರು ಅನಾಗರಿಕವಾಗಿ ನಡೆದುಕೊಂಡಿದ್ದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇವರ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿವೆ.

ಡೇರಾ ಸಮಿತಿ ಏನು ಮಾಡುತ್ತಿದೆ : ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಶಿಕ್ಷಣ ರೆಗ್ಯೂಲೆಟಿಂಗ ಕಾಯ್ದೆ (ಡೇರಾ) ಇದೆ. ಇದು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಡೊನೇಷನ್‌ ಹಾವಳಿಯನ್ನು ನಿಯಂತ್ರಿಸುವ ಸಮಿತಿಯಾಗಿದೆ. ಆದರೆ ಇದು ನಿಷ್ಕ್ರೀಯವಾಗಿದೆ ಎಂದು ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ್‌ ಮ್ಯಾಗಳಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜಿನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿಯನ್ನು ನಡೆಸಿ ಅವರ ಆರ್ಥಿಕ ವ್ಯವಹಾರಗಳನ್ನು ತಪಾಸಣೆ ಮಾಡಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ನಮ್ಮ ವಾಟ್ಸಪ್ ಗ್ರುಪ್ ಗೆ ಸೇರಲು ಲಿಂಕ್ ಬಳಸಿ

ಒಂದು ಖಾಸಗಿ ಶಿಕ್ಷಣ ಸಂಸ್ಥೆ ಎಷ್ಟು ಹಣವನ್ನು ಪಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಆ ಶಿಕ್ಷಣ ಸಂಸ್ಥೆಯ ವಾರ್ಷಿಕ ಖರ್ಚು ವೆಚ್ಚಗಳನ್ನು ಲೆಕ್ಕ ಹಾಕಿ ನಿಗದಿ ಪಡಿಸುತ್ತಾರೆ. ಅದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ತನ್ನ ನೋಟಿಸ್‌ ಬೋರ್ಡ್‌ ಮತ್ತು 6*8 ಸೈಜ್‌ ನಲ್ಲಿ ಫ್ಲೆಕ್ಷ್‌ನಲ್ಲಿ ಹಾಕಿ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿ ನಿಗದಿ ಪಡಿಸಿದ ಶುಲ್ಕವನ್ನು ಮಾತ್ರ ಪಡೆಯಬೇಕು ಆದರೆ ಇದು ಜಾರಿಯಾಗುತ್ತಿಲ್ಲ ಎಂದು ಪೋಷಕರ ಸಂಘಟನೆಯ ಶ್ರೀಪಾದ ಭಟ್‌ ಆರೋಪಿಸಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಯನ್ನು ನಿಯಂತ್ರಿಸುವ ಡೇರಾ ಸಮಿತಿಗೆ ಬಲವನ್ನು ತುಂಬಲು ರಾಜ್ಯ ಸರಕಾರ ಮತ್ತು ಶಿಕ್ಷಣ ಇಲಾಖೆ ಮುಂದಾಗಬೇಕಿದೆ. ಮಾರಾಟದ ಸರಕಾಗುತ್ತಿರುವ ಶಿಕ್ಷಣವನ್ನು ಸಾರ್ವಜನಿಕ ಶಿಕ್ಷಣವನ್ನಾಗಿ ರೂಪಿಸುವ ದೊಡ್ಡ ಜವಾಬ್ದಾರಿ ಸರಕಾರದ ಮೇಲಿದೆ.

Donate Janashakthi Media

Leave a Reply

Your email address will not be published. Required fields are marked *