ಮಧ್ಯಪ್ರದೇಶ : ಆಶ್ರಮದಲ್ಲಿ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ಆಶ್ರಮದ ಇಬ್ಬರನ್ನು ಪೊಲೀಸರು ಪೋಕ್ಸೋ ಕಾಯಿದೆಯಡಿ ಬಂಧಿಸಿದ್ದಾರೆ. ಪೋಕ್ಸೋ
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಆಶ್ರಮದ ಶಿಕ್ಷಕ 21 ವರ್ಷದ ರಾಹುಲ್ ಶರ್ಮಾ ಆಶ್ರಮದಲ್ಲಿ ಮೂವರು ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಆರೋಪವಿದಾಗಿದ್ದು, 21 ವರ್ಷದ ಶಿಕ್ಷಕ ರಾಹುಲ್ ಶರ್ಮಾ ಮತ್ತು ಆಶ್ರಮದ ಉಸ್ತುವಾರಿ ಅಜಯ್ ಠಾಕೂರ್ ವಿರುದ್ಧ ಐಪಿಸಿ ಸೆಕ್ಷನ್ಗಳು ಮತ್ತು ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಇಬ್ಬರನ್ನೂ ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಜ್ಜಯಿನಿ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ ಮಾತನಾಡಿ, “ಇಲ್ಲಿಯವರೆಗೆ ಮೂವರು ಮಕ್ಕಳು ತಮ್ಮ ಮೇಲಾದ ದೌರ್ಜನ್ಯಗಳ ಬಗ್ಗೆ ಆರೋಪ ಮಾಡಿದ್ದಾರೆ. ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿರುವುದಾಗಿ ಹೇಳಿದ್ದಾರೆ.
ಇದನ್ನು ಓದಿ : ಮಹಿಳೆಯರ ಬಗ್ಗೆ ಗೌರವವಿದ್ದರೆ ಲೈಂಗಿಕ ದೌರ್ಜನ್ಯ ಸಂತ್ರಸ್ತರ ಭೇಟಿ ಮಾಡಿ; ಡಿಕೆ ಶಿವಕುಮಾರ್
2023ರ ಸೆಪ್ಟೆಂಬರ್ನಲ್ಲಿ, ಅಪ್ರಾಪ್ತ ಬಾಲಕಿಯ ಮೇಲೆ ಆಟೋರಿಕ್ಷಾ ಚಾಲಕ ಅತ್ಯಾಚಾರ ಎಸಗಿದ್ದ. ಯಾರು ಕೂಡ ಆಕೆಗೆ ಸಹಾಯ ಮಾಡದಿದ್ದಾಗ ಆಕೆ ತನ್ನ ಹರಿದ ಬಟ್ಟೆಯಲ್ಲಿಯೇ ಆಶ್ರಮದ ಬಳಿ ಹೋಗಿದ್ದಳು. ಆಗ ಆಶ್ರಮದ ಹೊರಗಡೆ ಇದ್ದ ಆಕೆಗೆ ಶಿಕ್ಷಕ ರಾಹುಲ್ ಶರ್ಮಾ ಆಕೆಗೆ ಸಹಾಯ ಮಾಡಿದ್ದರು.ಆಗ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಶರ್ಮಾ, “ಇದು ಪವಿತ್ರ ಪಟ್ಟಣ. ಇಲ್ಲಿ ಜನರು ಸಹಾಯಕರಾಗಿರಬೇಕು. ಆದರೆ ಯಾರೂ ಆಕೆಗೆ ಸಹಾಯ ಮಾಡಲಿಲ್ಲ. ಮಾನವೀಯತೆ ತೋರಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದರು.
ಇದೀಗ, ಅದೇ ಶಿಕ್ಷಕ ರಾಹುಲ್ ಶರ್ಮಾ ವಿರುದ್ಧ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಸುಮಾರು 10 ದಿನಗಳ ಹಿಂದೆ, ಆಶ್ರಮದ ಉಸ್ತುವಾರಿ ಠಾಕೂರ್ ನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತ ಬಾಲಕ ಪ್ರಕರಣದ ಬಗ್ಗೆ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದ. ಬಳಿಕ, ಬಾಲಕನ ಪೋಷಕರು ಆಶ್ರಮಕ್ಕೆ ಬಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆಗ ಠಾಕೂರ್ನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನಂತರದಲ್ಲಿ, ಹಲವಾರು ಪೋಷಕರು ಆಶ್ರಮಕ್ಕೆ ಬಂದು ಶಿಕ್ಷಕ ಶರ್ಮಾ ವಿರುದ್ಧ ಆರೋಪ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಆರೋಪಗಳನ್ನು ಆಶ್ರಮದ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಆರೋಪಿಗಳು ಸುಳ್ಳು ಎಂದು ಹೇಳಿದ್ದಾರೆ.ಇನ್ನು ಆಶ್ರಮದಲ್ಲಿ ಪೊಲೀಸರು ಪರಿಶೀಲಿಸಿದಾಗ ದೌರ್ಜನ್ಯ ಪ್ರಕರಣ ನಡೆದಿದೆ ಎಂಬುದು ಕಂಡುಬಂದಿದೆ. ಪ್ರಕರಣದಲ್ಲಿ ಇನ್ನೂ ಅನೇಕ ಸಂತ್ರಸ್ತರಿದ್ದು, ಪ್ರಕರಣ ದಾಖಲಿಸುವಂತೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದೇವೆ” ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ನೋಡಿ : ರಾಯಚೂರು ಲೋಕಸಭೆ : ಬಿಜೆಪಿಯೊಳಗೆ ಬಂಡಾಯ, ಕಾಂಗ್ರೆಸ್ನೊಳಗೆ ಬೇಗುದಿ Janashakthi Media