ಉತ್ತರ ಪ್ರದೇಶ: ಒಂದೇ ಮಾದರಿಯಲ್ಲಿ ಹಲವು ಕೊಲೆ ಮಾಡಿದ್ದ ಬರೇಲಿಯ ನಟೋರಿಯಸ್ ಸೈಕೋ ಕಿಲ್ಲರ್ ಓರ್ವನನ್ನು ಇಲ್ಲಿನ ಪೊಲೀಸರು ಹರಸಾಹಸಪಟ್ಟು ಬಂಧಿಸಿದ್ದಾರೆ. ಈ ಮೂಲಕ ಆರು ಮಹಿಳೆಯರ ಹತ್ಯೆಗೈದ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.
ಬಕರ್ಗಂಜ್ ಗ್ರಾಮದ ನಿವಾಸಿ ಕುಲದೀಪ್ (35) ಬಂಧಿತ ಸೈಕೋ ಕಿಲ್ಲರ್. ಈತನನ್ನು ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಆಗ ತಾನು ಆರು ಮಹಿಳೆಯರನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ತಿಳಿಸಿದ್ದಾರೆ.
ಒಂದೇ ವರ್ಷದಲ್ಲಿ ಶಾಹಿ ಮತ್ತು ಶಿಶ್ಗಢ ಎಂಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ಮಹಿಳೆಯರನ್ನು ಸೀರೆಯಿಂದ ಕತ್ತು ಹಿಸುಕಿ ಒಂದೇ ಮಾದರಿಯಲ್ಲಿ ಕೊಲೆ ಮಾಡಲಾಗಿತ್ತು. ಈ ಸುದ್ದಿ ಸಂಚಲನ ಉಂಟು ಮಾಡಿತ್ತು. ಪ್ರಕರಣದ ಗಂಭೀರತೆ ಅರಿತ ಪೊಲೀಸರು, ಆರೋಪಿಗಳ ಪತ್ತೆಗೆ 22 ತಂಡಗಳನ್ನು ರಚಿಸಿ ಶೋಧ ನಡೆಸುತ್ತಿದ್ದರು. 1,500 ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದ್ದರು. ಶಂಕಿತ ಸರಣಿ ಕೊಲೆಗಾರನ ರೇಖಾಚಿತ್ರವನ್ನೂ ಬಿಡುಗಡೆ ಮಾಡಲಾಗಿತ್ತು.ಸರಣಿ
ಇದನ್ನೂ ಓದಿ: ಅನರ್ಹತೆ ವಿರುದ್ದ ವಿನೇಶ್ ಫೋಗಟ್ ಅರ್ಜಿ; ಒಲಿಂಪಿಕ್ಸ್ ಅಂತ್ಯಕ್ಕೂ ಮುನ್ನ ನಿರ್ಧಾರ ಪ್ರಕಟ – ಸಿಎಎಸ್
ಬಿಂದಿ ಮತ್ತು ಲಿಪ್ಸ್ಟಿಕ್ಗಳನ್ನು ‘ಟ್ರೋಫಿ’ ಎಂದು ಇಟ್ಟುಕೊಂಡಿದ್ದ ಎಂದು ಪೋಲಿಸರು ತಿಳಿಸಿದ್ದಾರೆ. ಹೊಲಗಳಲ್ಲಿ ಮತ್ತು ಕಾಡಿನಲ್ಲಿ ಏಕಾಂಗಿಯಾಗಿ ಕಂಡು ಬಂದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಲೈಂಗಿಕವಾಗಿ ಪ್ರಚೋದಿಸುತ್ತಿದ್ದ, ಮಹಿಳೆಯರು ಪ್ರತಿರೋಧ ತೋರಿದರೆ ಹಿಂಸಾಚಾರ ಮಾಡಿ ಕತ್ತು ಹಿಸುಕಿ ಸಾಯಿಸುತ್ತಿದ್ದ
ಆಗಸ್ಟ್ 8 ರಂದು, ಗಂಗ್ವಾರ್ ರನ್ನು ಮಥಿಯಾ ನದಿಯ ದಡದಿಂದ ಗುರುತಿಸಿ ಬಂಧಿಸಲಾಯಿತು. ಶಾಹಿ ಪೊಲೀಸ್ ಠಾಣೆಯ ತಂಡಕ್ಕೆ ಸುಳಿವು ಸಿಕ್ಕಿದ್ದು, ರೇಖಾಚಿತ್ರಗಳು ಮತ್ತು ವೀಡಿಯೊಗಳ ಆಧಾರದ ಮೇಲೆ ಶಂಕಿತನನ್ನು ಗುರುತಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.