ಪ್ರತ್ಯೇಕ ಹಿಂದೂ ಸಂವಿಧಾನ ತಲೆಕೆಟ್ಟವರ ಕೆಲಸ: ಡಾ ಪಂಡಿತಾರಾಧ್ಯ ಶ್ರೀಗಳು ಆಕ್ರೋಶ

ದಾವಣಗೆರೆ:  ಪ್ರತ್ಯೇಕ ಹಿಂದೂ ಸಂವಿಧಾನ ತಲೆಕೆಟ್ಟವರ ಕೆಲಸ ಎಂದು ಸಾಣೇಹಳ್ಳಿ ಮಠದ ಡಾ ಪಂಡಿತಾರಾಧ್ಯ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬನ್ನೂರಿನಲ್ಲಿ ಮಾತನಾಡಿದ ಅವರು, ನಮ್ಮ‌ ಸಂವಿಧಾನನವನ್ನು 75 ವರ್ಷಗಳಿಂದ ನಂಬಿಕೊಂಡು ಬಂದಿದ್ದೇವೆ. ಆದರೆ ಗಣರಾಜ್ಯೋತ್ಸವದ ದಿನದಂದು ಅಪರೂಪದ ವರದಿ ಬಿಡುಗಡೆಯಾಗಿದೆ. ಅಪರೂಪದ ವರದಿ ಎಂದರೆ ತಲೆಕೆಟ್ಟವರು ಬರೆದ ವರದಿ ಎಂದು ನಾವು ಹೇಳುತ್ತೇವೆ. ಹೊಸ ಸಂವಿಧಾನವನ್ನು ಅವರು ಬರೆದಿದ್ದಾರಂತೆ, ಫೆಬ್ರವರಿ 3 ರಂದು ಸರ್ಕಾರಕ್ಕೆ ಕಳಿಸುತ್ತಾರಂತೆ. ಇದರಿಂದ ಇದುವರೆಗೂ ಇರುವ ಸಂವಿಧಾನ ಸರಿ ಇಲ್ಲ ಎಂದು ಹೇಳಿದ ಹಾಗೇ ಆಗುತ್ತಲ್ಲವೇ? ಪ್ರಶ್ನಿಸಿದರು.

ಇದನ್ನೂ ಓದಿ: ಬೆಂಗಳೂರು| ಮದುವೆಯಾಗುವುದಾಗಿ ನಂಬಿಸಿ 18 ಲಕ್ಷ ರೂ ವಂಚನೆ

ವೇದ ಅಧ್ಯಯನ ಯಾರು ಮಾಡುತ್ತಾರೋ ಅಂಥವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದಿದೆ. ಇನ್ನೂ ಅನೇಕ ಅಂಶಗಳು ಆ ವರದಿಯಲ್ಲಿ ತಿಳಿಸಲಾಗಿದೆ. ಇದನ್ನು ನೋಡಿದರೆ ಅ ಸಂವಿಧಾನ ಒಂದು ವರ್ಗಕ್ಕೆ ಮಾತ್ರ ಸಿಮೀತವಾಗುತ್ತದೆ ಎಂದುಕೊಳ್ಳುವಂತಾಗಿದೆ. ಅಲ್ಲಿ ಜೈನ, ಬೌದ್ಧ, ಹಿಂದೂ ಎಂದು ಹೇಳುತ್ತಿದ್ದಾರೆ. ಆದರೆ ಹಿಂದೂ ಧರ್ಮ ಎಂದು ಬಳಸುತ್ತಿದ್ದಾರೆ.

ಅಲ್ಲಿ ಲಿಂಗಾಯತರ ಸುದ್ದಿಯೇ ಇಲ್ಲ. ನಾವು ಹಿಂದೂ ಧರ್ಮವನ್ನು ಒಪ್ಪುವುದಿಲ್ಲ. ನಮಗೆ ಲಿಂಗಾಯತ ಧರ್ಮವೇ ಮುಖ್ಯ ಇದರಿಂದ ಹೊಸ ಸಂವಿಧಾನ ರಚನೆ ಮಾಡಿಕೊಡುತ್ತೇವೆ ಎನ್ನುವುದೇ ಉಂಬರ ಕೆಲಸ. ಇದು ಉಂಬರ ಕೆಲಸ ಎಂದು ಹೇಳಿ ಸುಮ್ಮನೆ ಬಿಟ್ಟರೆ ಆಗೋದಿಲ್ಲ. ಇದರ ವಿರುದ್ಧ ನಾವು ಪ್ರತಿಭಟಿಸಬೇಕು ಎಂದು ಕರೆ ನೀಡಿದರು.

ಈ ರೀತಿಯ ಸಂವಿಧಾನವನ್ನ ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಗಾಂಧಿ ಸ್ವಾತಂತ್ರ್ಯ ಸಿಗುತ್ತೆ ಅಂತ ಅಂದುಕೊಂಡಿದ್ರಾ? ಅವಿರತವಾಗಿ ಹೋರಾಟ ಮಾಡಿದ್ರು. ಮುನ್ನೂರು ವರ್ಷ ಆಳಿದ ಬ್ರಿಟಿಷರನ್ನ ದೇಶದಿಂದ ಹೊರದಬ್ಬಲು ಹೋರಾಟ ನಡೆಸಿದರು. ಬ್ರಿಟಿಷರಿಗೆ ಹೆದರಲಿಲ್ಲ, ಅಳುಕಲಿಲ್ಲ. ಅದೇ ರೀತಿ ನಾವು ಕೂಡ ಹೋರಾಟದ ಆಶಾಭಾವನೆ ಇಟ್ಟುಕೊಂಡು ಉಂಬರ ವಿರುದ್ಧ ಹೋರಾಟ ಮಾಡಲು ಸಜ್ಜಾಗಬೇಕು ಎಂದರು.

ಇದನ್ನೂ ನೋಡಿ: “ಸೌಹಾರ್ದತೆ – ಸಮಾನತೆ” ದೇಶದ ಎರಡು ಕಣ್ಣುಗಳು – ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *