ವಿಶೇಷ ಚೇತನರೊಂದಿಗೆ ವ್ಯವಹರಿಸುವಾಗ ಸೂಕ್ಷ್ಮತೆ: ಡಾ. ವಿವೇಕ್ ಜವಳಿ

ಬೆಂಗಳೂರು: ವಿಶೇಷ ಚೇತನರಿಗೆ ಸಿಗಬೇಕಾದ ಸೌಲಭ್ಯಗಳು ನೇರವಾಗಿ ತಲುಪುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಜೊತೆಗೆ ಸಮಾಜದಲ್ಲಿ ಅಂಗವಿಕಲರೊಂದಿಗೆ ವ್ಯವಹರಿಸುವಾಗ ಸೂಕ್ಷ್ಮತೆ ವಹಿಸಬೇಕು ಎಂದು ಹೃದಯತಜ್ಞ ಡಾ. ವಿವೇಕ್ ಜವಳಿ ಏಪ್ರಿಲ್‌ 22  ಮಂಗಳವಾರದಂದು ಹೇಳಿದ್ದಾರೆ. ವ್ಯವಹರಿಸು

ಆಸ್ಥಾ ಹಾಗೂ ಅಂಗವಿಕಲರ ಉದ್ಯೋಗ ಉತ್ತೇಜನ ರಾಷ್ಟ್ರೀಯ ಕೇಂದ್ರದ (ಎನ್‌ಸಿಪಿಇಡಿಪಿ ) ಸಹಯೋಗದಲ್ಲಿ ನಡೆಸಿದ ವಿಶೇಷ ಚೇತನರ ಆರೋಗ್ಯ ಸ್ಥಿತಿ – ಗತಿಗಳ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ವ್ಯವಹರಿಸು

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಕಲಚೇತನರಿಗೆ ಸಿಗಬೇಕಾದ ಸವಲತ್ತುಗಳು ಸಿಗುತ್ತಿವೆ. ಆದರೆ ಅವರಿಗಾಗಿ ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಸರಿಯಾ ತಲುಪುತ್ತಿವೆಯೇ ಎಂಬುದರ ಬಗ್ಗೆ ಗಮನಹರಿಸಬೇಕು. ಅಂಗವಿಕಲರ ವಿಷಯದಲ್ಲಿ ಸರ್ಕಾರ, ಸಮಾಜ ಒಂದು ಸೂಕ್ಷ್ಮತೆಯನ್ನು ಅನುಸರಿಸಬೇಕು. ಆಗ ಮಾತ್ರ ಅವರ ಭಾವನೆಗಳಿಗೆ ದಕ್ಕೆಯಾಗದಂತೆ ಸಂವಹನ ನಡೆಸಲು ಸಾಧ್ಯ ಎಂದರು.

ಇದನ್ನೂ ಓದಿ: ‘ಭೂಮಿ ತಿರುಗಿಬಿದ್ದಿದೆ. ನಾವು ಆಕಳಿಸಿ ಮೈಮುರಿಯಬೇಕಿದೆ.- ಕೆ.ಎಸ್.ರವಿಕುಮಾರ್ ವಿಜ್ಞಾನ ಬರಹಗಾರ

ಅಸ್ಥಾ ಹಾಗೂ ಎನ್‌ಸಿಪಿಇಡಿಪಿ ಸಹಯೋಗದಲ್ಲಿ ವಿಕಲಚೇತನರ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಸಿರುವುದು ಶ್ಲಾಘನೀಯ. ಈ ಮೂಲಕ ಅವರ ಆರೋಗ್ಯದ ಬಗ್ಗೆ ಪ್ರತಿಯೊಬ್ಬರ ಗಮನ ಸೆಳೆಯಲು ಸಾಧ್ಯವಾಗಲಿದೆ ಎಂದು ಡಾ.ಜವಳಿ ಅಭಿಪ್ರಾಯ ಪಟ್ಟಿದ್ದಾರೆ.

ಸಮಾರಂಭದಲ್ಲಿ ಎನ್‌ಸಿಪಿಇಡಿಪಿ ಎಂಡಿ ಅರ್ಮಾನ್ ಅಲಿ, ಆಸ್ಥಾ ಛೇರ್ಮನ್ ಸುನೀಲ್ ಜೈನ್, ತುಮಕೂರು ವಿವಿಯ ಪ್ರೊ.ಪರಶುರಾಮ್ ಮತ್ತಿತರರು ಉಪಸ್ಥಿತರಿದ್ದರು.

ಸಮೀಕ್ಷಾ ವರದಿಯ ಪ್ರಮುಖಾಂಶಗಳು

ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. 2024-25ರಲ್ಲಿ ಹನ್ನೆರಡು ತಿಂಗಳ ಅವಧಿಯಲ್ಲಿ ನಡೆದ ಈ ಅಧ್ಯಯನವು, ಅಂಗವಿಕಲರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಸಮಗ್ರವಾಗಿ ಒಳಗೊಂಡಿದೆ. ಅಂಗವಿಕಲರ ಮುಖ್ಯ ಆಯುಕ್ತರ ಕಚೇರಿ, ಜಿಲ್ಲಾ ಅಂಗವಿಕಲ ಕಲ್ಯಾಣ ಸಂಸ್ಥೆಯ ಸಹಕಾರದಲ್ಲಿ ಸಮೀಕ್ಷೆ ನಡೆಸಲಾಗಿದೆ.

ಒಟ್ಟು 758 ವಿಕಲಚೇತನರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಶೇ.70 ರಿಂದ ಶೇ.96 ರಷ್ಟು ಅಂಗವಿಕಲ ವ್ಯಕ್ತಿಗಳಿಗೆ ಮೂಲಭೂತ ಆರೋಗ್ಯ ವಿಮೆ ದೊರೆತಿಲ್ಲ. ಬಹುತೇಕ ವಿಕಲಚೇತನರು ನಿರುದ್ಯೋಗಿಗಳಾಗಿದ್ದು, ಜೀವನೋಪಾಯಕ್ಕಾಗಿ ತಮ್ಮ ಕುಟುಂಬ ಸದಸ್ಯರ ಮೇಲೆ ಅವಲಂಬಿತರಾಗಿದ್ದಾರೆ. ಶೇ.95 ರಷ್ಟು ವಿಕಲಚೇತನರ ಮನೆಯ ಆದಾಯವು 1 ಲಕ್ಷಕ್ಕಿಂತ ಕಡಿಮೆ ಇದೆ. ಹಲವರು ಅಂಗವೈಕಲ್ಯ ಕಾರ್ಡ್ ಪಡೆಯದಿರುವುದು ತಿಳಿದು ಬಂದಿದೆ. ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಆಯೋಜಕರು ತಿಳಿಸಿದ್ದಾರೆ.

‘ನಮ್ಮ ದೇಶದಲ್ಲಿ ವಿಕಲಚೇತರನ್ನು ನಿರ್ಲಕ್ಷ್ಯ ಮಾಡಿದಷ್ಟು ಇನ್ನೆಲ್ಲೂ ಮಾಡುವುದಿಲ್ಲ. ವಿಕಲಚೇತನರನ್ನು ಅನಾರೋಗ್ಯಪೀಡಿತರ ರೀತಿಯಲ್ಲೇ ನಡೆಸಿಕೊಳ್ಳುತ್ತಿದ್ದಾರೆ. ಆಯುಷ್ಮಾನ್ ಭಾರತ್ ವಿಮಾ ಯೋಜನೆಯಲ್ಲಿ ಅಂಗವಿಕಲರಿಗೆ ವಿಶೇಷ ಸವಲತ್ತು ನೀಡಬೇಕು.’

ಇದನ್ನೂ ನೋಡಿ: ಅಲಹಾಬಾದ ಹೈಕೋರ್ಟ್- ಸ್ತ್ರೀ ದ್ವೇಷದ ಹೇಳಿಕೆಗಳು, ಸುಪ್ರೀಂ ಗರಂ Janashakthi Media

Donate Janashakthi Media

Leave a Reply

Your email address will not be published. Required fields are marked *