“ಹೊರಳು ನೋಟದ” ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್‌ ಇನ್ನಿಲ್ಲ

ಬೆಂಗಳೂರು: ಹಿರಿಯ ಪತ್ರಕರ್ತ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾಜಿ ಮಾಧ್ಯಮ ಸಲಹೆಗಾರ ಮಹಾದೇವ​ ಪ್ರಕಾಶ್ (65) ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 10 ದಿನದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಈ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರಿಗೆ ಮಾಧ್ಯಮ ಸಲಹೆಗಾರರಾಗಿ ಹಿರಿಯ ಪತ್ರಕರ್ತ ಮಹಾದೇವ ಪ್ರಕಾಶ್ ಸೇವೆ ಸಲ್ಲಿಸಿದ್ದರು. ಆನಂತರ ಅವರು ಮಾಧ್ಯಮ ಸಲಹೆಗಾರ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. 1975ರ ಅಕ್ಟೋಬರ್ 15ರಂದು “ಲೋಕವಾಣಿ” ದಿನ ಪತ್ರಿಕೆಯ ಮೂಲಕ ಅವರು ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ರು. ಜತೆಗೆ ಮುಂದಿನ ದಿನಗಳಲ್ಲಿ ರಾಜಕೀಯ ವಿಶ್ಲೇಷಕರಾಗಿ ಮತ್ತು ಅಂಕಣಕಾರರಾಗಿಯೂ ಸೇವೆ ಸಲ್ಲಿಸಿದ್ದರು.

2020ನೇ ಸಾಲಿನ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಮಹಾದೇವ ಪ್ರಕಾಶ್ ಅವರಿಗೆ ಕೊಡಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ ಈ ಮಾಹಿತಿ ಪಡೆದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಮಹಾದೇವ ಪ್ರಕಾಶ್ ಅವರು ರಾಜ್ಯೋತ್ಸವ ಪ್ರಶಸ್ತಿಯನ್ನು ವಿನಯಪೂರ್ವಕವಾಗಿ ನಿರಾಕರಿಸಿದ್ದರು.

ಕರ್ನಾಟಕದ ರಾಜಕೀಯ ಇತಿಹಾಸವನ್ನು ಸಂಪೂರ್ಣ ಬಲ್ಲವರಾಗಿದ್ದ ಮಹದೇವ ಪ್ರಸಾದ್‌ ರವರು,   ಕೆಂಗಲ್ ಹನುಮಂತಯ್ಯ ಅವರ ಕಾಲದಿಂದ ಇಂದಿನ ರಾಜಕಾರಣದ ಬೆಳವಣಿಗೆಗಳ ಜ್ಞಾನ ಅವರಲ್ಲಿತ್ತು.   ಪಕ್ಷಗಳು ಬೆಳೆದ ರೀತಿ, ಚುನಾವಣೆ, ರಾಜಕೀಯ ಧ್ರುವೀಕರಣ, ಪಕ್ಷಾಂತರ ಮತ್ತು ಪರಿಣಾಮ ಹೀಗೆ ಎಲ್ಲ ವಿಚಾರಗಳನ್ನು ವಿಶ್ಲೇಷಿಸುವ ಶಕ್ತಿ ಇದ್ದ ಹಿರಿಯ ಪತ್ರಕರ್ತರಾಗಿದ್ದರು.

ಈ ಭಾನುವಾರ ಪತ್ರಿಕೆಯನ್ನು ನಡೆಸಿಕೊಂಡು ಬಂದಿದ್ದ ಪ್ರಕಾಶ್ ವಿಶ್ಲೇಶಕರಾಗಿಯೇ ಗುರುತಿಸಿಕೊಂಡವರು.  ಕರ್ನಾಟಕದ ಚುನಾವಣೆ, ರಾಜಕೀಯ ಬದಲಾವಣೆ, ರಾಜಕಾರಣದ ನಾಯಕರು ತೆಗೆದುಕೊಂಡ ತೀರ್ಮಾನಗಳು ನಂತರ ಅವರು ಎದುರಿಸಿದ ಲಾಭ-ನಷ್ಟ  ಆಳ -ಅಗಲ ಎಲ್ಲವನ್ನೂ ಎಳೆ ಎಳೆಯಾಗಿ ವಿಶ್ಲೇಷಿಸುತ್ತಿದ್ದರು.  ಒಂಭತ್ತು ವರ್ಷಗಳಿಂದ  “ವಿಜಯ ಕರ್ನಾಟಕ ”ದಲ್ಲಿ “ಹೊರಳು ನೋಟ” ಎನ್ನುವ  ಅಂಕಣ ಬರೆಯುತ್ತಿದ್ದರು.  ಇವರ ಸಂಪದಾಕತ್ವದ ರಾಜ್ಯ ಸರಕಾರದ ಸಾಧನೆಗಳನ್ನು ಹೊತ್ತ ಪುಸ್ತಕ ಪುಟಕ್ಕಿಟ್ಟ ಚಿನ್ನ ಬಹಳಷ್ಟು ಟೀಕೆಗೆ ಗುರಿಯಾಗಿತ್ತು. ಇದಾದ ಕೆಲ ತಿಂಗಳಲ್ಲಿ ಅವರು ಮಾಧ್ಯಮ ಸಲಹೆಗಾರ ಹುದ್ದೆಗ ರಾಜೀನಾಮೆ ಸಲ್ಲಿಸಿ, ಪ್ರಕಾಶದತ್ತ ಗಮನವನ್ನು ಹರಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *