ಕಳೆದ ಹತ್ತು ವರ್ಷಗಳಲ್ಲಿ ದೇಶದ್ರೋಹಿ ಪ್ರಕರಣ ದಾಖಲಾಗಿದ್ದು ಎಷ್ಟು ಗೊತ್ತೆ?

– ಬಿ. ಶ್ರೀಪಾದ ಭಟ್

ಕಳೆದ ಹತ್ತು ವರ್ಷಗಳಲ್ಲಿ ದೇಶದ್ರೋಹಿ ಪ್ರಕರಣ ದಾಖಲಾಗಿರುವುದರ ವಿವರಗಳು ಅಚ್ಚರಿ ಮೂಡಿಸುತ್ತವೆ.  ಈ ಕಾಯ್ದೆ ಜಾರಿಗೆ ವೇದಿಕೆ ಮಾಡಿ ಕೊಟ್ಟದ್ದು ಕಾಂಗ್ರೆಸ್‌, ಅದರ ಮೇಲೆ ಸಂಘ ಪರಿವಾರ ಫ್ಯಾಸಿಸಂನ ಪೆಡಂಭೂತ ಬೆಳೆಸುತ್ತಿದೆ.

ಎಲ್ಲರೂ ಹೇಳುತ್ತಿರುವಂತೆ ಎರಡು ಅವಧಿಯ ಯುಪಿಎ ಆಡಳಿತದಲ್ಲಿ ಈ ಕರಾಳ ಶಾಸನವನ್ನು ರದ್ದುಗೊಳಿಸುವ ಎಲ್ಲಾ ಅವಕಾಶಗಳಿದ್ದವು. ಆದರೆ ಕಾಂಗ್ರೆಸ್ ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಲಿಲ್ಲ. ಅದರ ಫಲವೇ ಇಂದಿನ ದುರಂತ

ಕಪಿಲ್ ಸಿಬಲ್ ಅವರು ಸುಪ್ರೀಂಕೋರ್ಟ್ ನಲ್ಲಿ ಕೊಟ್ಟ ಮಾಹಿತಿ ಪ್ರಕಾರ ದೇಶದಾದ್ಯಂತ 800 ದೇಶದ್ರೋಹಿ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ 13,000 ನಾಗರಿಕರು ದೇಶದ್ರೋಹದ ಆಪಾದನೆಯ ಮೇರೆಗೆ ಜೈಲಿನಲ್ಲಿದ್ದಾರೆ.

2010 ರಿಂದ 2014 ರವರೆಗೆ  ದಾಖಲಾದ ಒಟ್ಟು ದೇಶದ್ರೋಹದ ಪ್ರಕರಣಗಳ ಸಂಖ್ಯೆ : 3762

2014 ರಿಂದ 2020 ರ ವರೆಗೆ ದಾಖಲಾದ ಒಟ್ಟು ದೇಶದ್ರೋಹದ ಪ್ರಕರಣಗಳ ಸಂಖ್ಯೆ : 7136

ಕಳೆದ ಎಂಟು ವರ್ಷಗಳಲ್ಲಿ ಅಕ್ರಮವಾಗಿ ಜೈಲಿನಲ್ಲಿದ್ದ ಈ ರಾಜಕೀಯ ಕೈದಿಗಳ ಪರವಾಗಿ ಯಾವುದೇ ಹೋರಾಟ ನಡೆಸದ ಕಾಂಗ್ರೆಸ್ ಪಕ್ಷವನ್ನು ಕಂಡಾಗ “ಅವರ ನಡೆಯೊಂದು
ನುಡಿಯೊಂದಾದೆಡೆ ಶಿವಾಚಾರಕ್ಕವರು ಸಲ್ಲರಯ್ಯ” ಎಂಬ ಬಸವಣ್ಣನ ವಚನದ ಸಾಲುಗಳು ನೆನಪಾಗುತ್ತದೆ.

ಈಗ ರಾಜಸ್ಥಾನದ ಉದಯಪುರದಲ್ಲಿ ಚಿಂತನ ಬೈಠಕ್ ನಡೆಸುತ್ತಿರುವ ಕಾಂಗ್ರೆಸ್ ಗೆ ಇನ್ನಾದರೂ ಯೋಚನೆ ಮಾಡಲಿ. ಈ ಕಾಯ್ದೆಯ ರದ್ದಿಗೆ ಎಲ್ಲಾ ವಿರೋಧ ಪಕ್ಷಗಳು ಹೋರಾಟ ನಡೆಸಲಿ.

 

Donate Janashakthi Media

Leave a Reply

Your email address will not be published. Required fields are marked *