ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯು ಕೆಎಸ್ಇಎಬಿ 12 ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿದೆ. ಬೆಂಗಳೂರಿನಲ್ಲಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವ ಮಧುಬಂಗಾರಪ್ಪ ಹಾಗೂ ಮಂಡಳಿ ಅಧ್ಯಕ್ಷ ಎಚ್.ಬಸವರಾಜೇಂದ್ರ ಫಲಿತಾಂಶವನ್ನು ಪ್ರಕಟಿಸಿದರು. ಒಟ್ಟುಶೇ 73. 45 ಮಕ್ಕಳು ಉತ್ತೀರ್ಣರಾಗಿದ್ದಾರೆ. ಉಡುಪಿ ಜಿಲ್ಲೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಈ ಬಾರಿಯೂ ಪ್ರತಿ ವರ್ಷದಂತೆಯೇ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಟಾಪರ್‌ಗಳ ಹೆಸರುಗಳನ್ನು ಪ್ರಕಟಿಸಲಾಗಿದೆ. ಕಲಾ ವಿಭಾಗದಲ್ಲಿ ಬಳ್ಳಾರಿಯ ಸಂಜನಾ ಬಾಯಿ 597 ಅಂಕದೊಂದಿಗೆ ಟಾಪರ್ ಎನ್ನಿಸಿದ್ದಾರೆ. ಪಿಯುಸಿ
ಯಾವ ವಿಭಾಗದಲ್ಲಿ ಎಷ್ಟು
ಕಲಾ ವಿಭಾಗದಲ್ಲಿ ಹಾಜರಾದವರು 1,53,043 ವಿದ್ಯಾರ್ಥಿಗಳು. ಉತ್ತೀರ್ಣರಾದವರು 81553 ವಿದ್ಯಾರ್ಥಿಗಳು. ಶೇಕಡವಾರು ಉತ್ತೀರ್ಣವಾದ ಪ್ರಮಾಣ 53.29
ವಾಣಿಜ್ಯ ವಿಭಾಗದಲ್ಲಿ ಹಾಜರಾದವರು ವಿದ್ಯಾರ್ಥಿಗಳು 2,04,329. ಉತ್ತೀರ್ಣರಾದವರು ವಿದ್ಯಾರ್ಥಿಗಳು 1,55,425. ಶೇಕಡವಾರು ಉತ್ತೀರ್ಣವಾದ ಪ್ರಮಾಣ 76.07
ವಿಜ್ಞಾನ ವಿಭಾಗದಲ್ಲಿ ಹಾಜರಾದವರು ವಿದ್ಯಾರ್ಥಿಗಳು 2,80,433. ಉತ್ತೀರ್ಣರಾದವರು ವಿದ್ಯಾರ್ಥಿಗಳು 2.31.461 ಶೇಕಡವಾರು ಉತ್ತೀರ್ಣವಾದ ಪ್ರಮಾಣ 82.54 .
ಒಟ್ಟು ಹಾಜರಾದ ವಿದ್ಯಾರ್ಥಿಗಳು 6,37,805 ಉತ್ತೀರ್ಣರಾದ ವಿದ್ಯಾರ್ಥಿಗಳು 4,68,439 ಹಾಗೂ ಶೇಕಡವಾರು ಉತ್ತೀರ್ಣವಾದ ಪ್ರಮಾಣ 73.45
ಇದನ್ನೂ ಓದಿ: ಬೆಂಗಳೂರು| ಏಪ್ರಿಲ್ 8 ರಂದು ದ್ವಿತೀಯ ಪಿಯುಸಿ ಫಲಿತಾಂಶ; ಪರಿಶೀಲಿಸುವುದು ಹೇಗೆ? ಪಿಯುಸಿ
ಜಿಲ್ಲಾವಾರು ಫಲಿತಾಂಶ
ಉಡುಪಿ ಜಿಲ್ಲೆಗೆ ಈ ಬಾರಿಯೂ ಮೊದಲ ಸ್ಥಾನ. ಶೇ 93.90 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಯಾದಗಿರಿಗೆ ಕೊನೆಯ ಸ್ಥಾನ. ಸರಾಸರಿ ಶೇ 48.45 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ಬಾರಿ ಪ್ರಥಮ ಸ್ಥಾನ ಪಡೆದಿದ್ದ ದಕ್ಷಿಣ ಕನ್ನಡ ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಶೇ 93.57ರಷ್ಟು ಫಲಿತಾಂಶ ಲಭಿಸಿದೆ. ಮೂರನೇ ಸ್ಥಾನ ಬೆಂಗಳೂರು ದಕ್ಷಿಣ ಶೇ.85.36. ಅದೇ ರೀತಿ ಶೇ. 83.84 ಫಲಿತಾಂಶ ಪಡೆದಿರುವ ಕೊಡಗು ಜಿಲ್ಲೆ 4ನೇ ಸ್ಥಾನಕ್ಕೇರಿದೆ. ಐದನೇ ಸ್ಥಾನ ಬೆಂಗಳೂರು ಉತ್ತರ; ಶೇ 83.31, ಆರನೇ ಸ್ಥಾನ ಉತ್ತರ ಕನ್ನಡ ;ಶೇ 82.93, ಏಳನೇ ಸ್ಥಾನ ಶಿವಮೊಗ್ಗ ; ಶೇ 79.91, ಎಂಟನೇ ಸ್ಥಾನ ಬೆಂಗಳೂರು ಗ್ರಾಮಾಂತರ ;ಶೇ 79.70, ಒಂಭತ್ತನೇ ಸ್ಥಾನ ಚಿಕ್ಕಮಗಳೂರು; ಶೇ 79.56, ಹತ್ತನೇ ಸ್ಥಾನ ಹಾಸನ; ಶೇ 77.56
ಹೆಚ್ಚು ಅಂಕ ಪಡೆದವರು
ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ- ಎಕ್ಸ್‌ಪರ್ಟ್ ಕಾಲೇಜಿನ ಅಮೂಲ್ಯ ಕಾಮತ್, ಮಂಗಳೂರು, ದ್ವಿತೀಯ ಸ್ಥಾನ-ಆಸ್ತಿ ಶೆಟ್ಟಿ(ಉಡುಪಿ), ತೃತೀಯ ಸ್ಥಾನ-ಚೈತನ್ಯ ಗಣೇಶ್ ಭಟ್(ಬೆಂಗಳೂರು)
ಕಾಮರ್ಸ್ ವಿಭಾಗದಲ್ಲಿ ದಕ್ಷಿಣ ಕನ್ನಡದ ಕೆನಾರ ಪಿಯು ಕಾಲೇಜು ವಿದ್ಯಾರ್ಥಿನಿ ದೀಪಶ್ರೀ ಗೆ ಮೊದಲ ರಾಂಕ್ 600 ಕ್ಕೆ 599 ಲಭಿಸಿದೆ.
ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಸಂಜನಾ ಬಾಯಿ 597 ಅಂಕದೊಂದಿಗೆ ಟಾಪರ್ ಎನ್ನಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಶ್ರೀ ಪಂಚಮಸಾಲಿ ಪಿಯು ಕಾಲೇಜು ನಿರ್ಮಲಾ ಕಲಾ ವಿಭಾಗದಲ್ಲಿ 596 ಅಂಕದೊಂದಿಗೆ ಎರಡನೇ ಟಾಪರ್ ಎನ್ನಿಸಿದ್ದಾರೆ.
ಶೂನ್ಯ ಫಲಿತಾಂಶ ಕಾಲೇಜುಗಳು
ಶೇ. 100 ಫಲಿತಾಂಶ ಪಡೆದ ಸರ್ಕಾರಿ ಕಾಲೇಜು-13. ಶೂನ್ಯ ಫಲಿತಾಂಶ ಪಡೆದ 08 ಸರ್ಕಾರಿ ಕಾಲೇಜು. ಶೇ.100 ಫಲಿತಾಂಶ ಪಡೆದ ಕಾಲೇಜುಗಳು-134. ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳು-123.
ನಕಲಿ ಲಿಂಕ್ ಕುರಿತು ಎಚ್ಚರಿಕೆ
ಫಲಿತಾಂಶ ಮಾತ್ರವಲ್ಲದೇ, ಉಚಿತ ಕೋರ್ಸ್, ಉಚಿತ ಸೀಟು ಹಂಚಿಕೆ, ವಿದ್ಯಾರ್ಥಿವೇತನ ಕುರಿತು ಕೂಡ ಸೈಬರ್ ವಂಚಕರು ವಿವಿಧ ಲಿಂಕ್‌ಗಳನ್ನು ಹರಿಯಬಿಡುವ ಮೂಲಕ ವಿದ್ಯಾರ್ಥಿಗಳು ಮತ್ತು ಪಾಲಕರ ಹಾದಿ ತಪ್ಪಿಸುತ್ತಿದ್ದಾರೆ. ಈ ಲಿಂಕ್‌ಗಳ ಮೂಲಕ ವಿದ್ಯಾರ್ಥಿಗಳು ಮತ್ತು ಪಾಲಕರ ವೈಯಕ್ತಿಕ ವಿವರ ಪಡೆದುಕೊಂಡು ವಂಚಿಸುವ ಸಾಧ್ಯತೆಗಳು ಕೂಡ ಇರುತ್ತದೆ, ಜತೆಗೆ ಎಚ್ಚರಿಕೆ ಅಗತ್ಯ. ಜತೆಗೆ ಪಿಯು ನಂತರದ ಕೋರ್ಸ್‌ಗಳಿಗೆ ಪ್ರವೇಶಾತಿ ಶುಲ್ಕ ಎಂದು ಹಣ ವಸೂಲಿ ಮಾಡುವ ಕುರಿತು ಕೂಡ ಜನರು ಜಾಗೃತೆ ವಹಿಸಬೇಕಿದೆ.
ದ್ವಿತೀಯ ಪಿಯುಸಿ ಫಲಿತಾಂಶ 2025 ಕರ್ನಾಟಕ ಅಧಿಕೃತ ವೆಬ್‌ಸೈಟ್ – http://karresults.nic.in ನಲ್ಲಿ ಲಭ್ಯವಿದೆ.
ಇದನ್ನೂ ನೋಡಿ: ಆರೋಗ್ಯ ಹಕ್ಕು | ಆರೋಗ್ಯ ಎಂದರೆ ರೋಗವಿಲ್ಲದಿರುವುದೇ?! | ಸರಣಿ ಕಾರ್ಯಕ್ರಮ – ಸಂಚಿಕೆ 01 Janashakthi Media ಪಿಯುಸಿ