ನವದೆಹಲಿ : ಮೊನ್ನೆಯಷ್ಟೇ ಕರ್ನಾಟಕ ಮೂಲದ ವೈದ್ಯಕೀಯ ವಿದ್ಯಾರ್ಥಿ ಯುದ್ಧಪೀಡಿತ ಉಕ್ರೇನ್ ನಲ್ಲಿ ಸಾವನ್ನಪ್ಪಿದ್ದ ಘಟನೆ ಬೆನ್ನಲ್ಲೇ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವಿಗೀಡಾಗಿರುವುದು ತಿಳಿದು ಬಂದಿದೆ.
ಪಂಜಾಬ್ನ ಬರ್ನಾಲ್ ಗ್ರಾಮದ 22 ವರ್ಷದ ಚಂದನ್ ಜಿಂದಾಲ್ ಮೃತ ವಿದ್ಯಾರ್ಥಿ. ಚಂದನ್ ಉಕ್ರೇನ್ನಲ್ಲಿರುವ ವಿನ್ನಿಟ್ಸಿಯಾ ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ 4 ವರ್ಷಗಳಿಂದ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಹುಟ್ಟಿದೂರಿನಲ್ಲಿ ಎಲ್ಲವೂ ಸಿಕ್ಕಿದ್ದರೆ ನವೀನ್ ಸಾಯುತ್ತಿರಲಿಲ್ಲ
ರಷ್ಯಾ ದಾಳಿ ನಡೆಸುತ್ತಿದ್ದಂತೆ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದ ಚಂದನ್ ಜಿಂದಾಲ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂದನ್ ಕುಟುಂಬಸ್ಥರಿಗೆ ಈಗಾಗಲೇ ಮಾಹಿತಿ ತಿಳಿಸಲಾಗಿದೆ. ಮೃತದೇಹ ವಾಪಸ್ ತರಲು ಸಹಾಯ ಮಾಡುವಂತೆ ಅವರ ತಂದೆ, ಕೇಂದ್ರ ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದ್ದಾರೆ.
Chandan Jindal, a 22-year-old student from Punjab's Barnala district who had suffered a stroke and was undergoing treatment for about a month died on Wednesday in war-torn Ukraine. https://t.co/H2lG2pwm6q
— The Wire (@thewire_in) March 2, 2022
ಕನ್ನಡಿಗ ವಿದ್ಯಾರ್ಥಿ ನವೀನ್ ದಿನಸಿ ತರಲೆಂದು ಹೊರ ಹೋದ ವೇಳೆ ರಷ್ಯನ್ನರು ನಡೆಸಿದ ಷೆಲ್ ದಾಳಿಯಿಂದಾಗಿ ಮಂಗಳವಾರದಂದು ಮೃತಪಟ್ಟಿದ್ದರು.