ಇಸ್ರೋದ ಮತ್ತೊಂದು ಸಾಧನೆ; ಕಕ್ಷೆಗೆ ಯಶಸ್ವಿಯಾಗಿ ಸೇರಿದ 3 ಉಪಗ್ರಹಗಳು

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮತ್ತೊಂದು ಮಹತ್ವದ ಸಾಧನೆಗೈದಿದ್ದು, ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಮೂರು ಉಪಗ್ರಹಗಳನ್ನು ಹೊತ್ತ ‘ಕಿರು ಉಪಗ್ರಹ ಉಡಾವಣಾ ನೌಕೆ (ಎಸ್‌ಎಸ್‌ಎಲ್‌ವಿ-ಡಿ2)’ ಯಶಸ್ವಿಯಾಗಿ ಉಡಾವಣೆಗೊಂಡಿದೆ.

ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಎಸ್‍ಎಸ್‍ಎಲ್‍ವಿ-ಡಿ2 ರಾಕೆಟ್ ಮೂರು ಉಪಗ್ರಹಗಳನ್ನು ಹೊತ್ತಯೈದಿದೆ. ಇದರಲ್ಲಿ ಭಾರತದ ವಿದ್ಯಾರ್ಥಿನಿಯರು ಅಭಿವೃದ್ಧಿಪಡಿಸಿದ ಉಪಗ್ರಹವು ಬೆಳಿಗ್ಗೆ 9:18 ಕ್ಕೆ ಮತ್ತು ಅದರ 15 ನಿಮಿಷದ ಅವಧಿಯಲ್ಲಿ ಅವುಗಳನ್ನು 450 ಕಿಮೀ ದೂರದ ಕಕ್ಷೆಗೆ ಸೇರಿಸಿತು.

ಇದನ್ನು ಓದಿ: ಇಸ್ರೋದಿಂದ ಬ್ರೆಜಿಲ್‌ನ ಉಪಗ್ರಹ ಯಶಸ್ವಿ ಉಡಾವಣೆ

34 ಮೀಟರ್ ಎತ್ತರದ ಎಸ್‌ಎಸ್‌ಎಲ್‌ವಿ-ಡಿ2 ರಾಕೆಟ್ ಮೂಲಕ ಇಸ್ರೊ ತನ್ನ ಭೂ ವೀಕ್ಷಣಾ ಉಪಗ್ರಹವಾದ ಇಒಎಸ್‌–07, ಅಮೆರಿಕ ಮೂಲದ ‘ಅಂಟಾರಿಸ್’ನ ‘ಜಾನಸ್‌’ ಮತ್ತು ಚೆನ್ನೈನ ‘ಸ್ಪೇಸ್ ಕಿಡ್ಜ್ ಇಂಡಿಯಾ’ದ ‘ಆಜಾದಿಸ್ಯಾಟ್‌–2’ ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಿದೆ.

ಉಪಗ್ರಗಳ ವಿವರ

ಇಒಎಸ್‌–07: ಇದು 156.3 ಕೆ.ಜಿ. ತೂಕದ ಭೂ ವೀಕ್ಷಣಾ ಉಪಗ್ರಹವಾಗಿದ್ದು, ಇಸ್ರೊ ಅಭಿವೃದ್ಧಿಪಡಿಸಿದೆ.

ಜಾನಸ್-1: 10.2 ಕೆ.ಜಿ. ತೂಕದ ಉಪಗ್ರಹವು ಅಮೆರಿಕದ ‘ಅಂಟಾರಿಸ್‌’ನದ್ದಾಗಿದೆ.

ಆಜಾದಿಸ್ಯಾಟ್-2: 8.7 ಕೆ.ಜಿ. ತೂಕದ ಉಪಗ್ರಹವು ಭಾರತದ ಸುಮಾರು 750 ವಿದ್ಯಾರ್ಥಿನಿಯರ ಸಂಯೋಜಿತ ಪ್ರಯತ್ನದ ಫಲವಾಗಿದ್ದು, ‘ಸ್ಪೇಸ್ ಕಿಡ್ಜ್ ಇಂಡಿಯಾ’ ಅಭಿವೃದ್ಧಿಪಡಿಸಿದೆ.

2023ನೇ ನಲ್ಲಿ ಇಸ್ರೋ ಕೈಗೊಂಡದ ಮೊದಲ ರಾಕೆಟ್‌ ಉಡಾವಣೆ ಇದಾಗಿದೆ.

ಇದನ್ನು ಓದಿ: ‘ರಾಕೆಟ್ರಿ: ದಿ ನಂಬಿ ಎಫೆಕ್ಟ್‌’ ಚಿತ್ರದಲ್ಲಿನ ಶೇ. 90 ಭಾಗ ಸುಳ್ಳು: ಇಸ್ರೊ ವಿಜ್ಞಾನಿಗಳು

ಇಸ್ರೋ ಬಾಹ್ಯಾಕಾಶ ಸಂಸ್ಥೆಯಿಂದ ಸಣ್ಣ ಉಪಗ್ರಹ ಉಡಾವಣಾ ವಾಹನದ ಎರಡನೇ ಅಭಿವೃದ್ಧಿ ವಿಮಾನವಾಗಿದೆ. ಕಳೆದ ಆಗಸ್ಟ್ 9 ರಂದು ನಡೆದಿದ್ದ ಮೊದಲ ಪರೀಕ್ಷಾರ್ಥ ಹಾರಾಟ ನಡೆಸಲಾದರೂ ಸಹ ಅವು ವೈಫಲ್ಯಗೊಂಡಿತು. ಕಕ್ಷೆಯ ವೈಪರೀತ್ಯ, ರಾಕೆಟ್‌ನ ಹಾದಿಯಲ್ಲಿನ ವಿಚಲನೆಯಿಂದಾಗಿ ಭಾಗಶಃ ವಿಫಲವಾಗಿತ್ತು. ಕೊನೇ ಹಂತದಲ್ಲಿ ದತ್ತಾಂಶ ನಷ್ಟವಾಗಿತ್ತು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *