“ಅದಾಣಿ ಗುಂಪಿನ ಶೇರು ಬೆಲೆಗಳಲ್ಲಿ ಕೈಚಳಕದ ಜೆಪಿಸಿ ತನಿಖೆ ನಡೆಯಬೇಕು”
ನವದೆಹಲಿ: ಅದಾಣಿ ಸಮೂಹದ ಕಂಪನಿಗಳು ಷೇರು ಬೆಲೆಗಳಲ್ಲಿ ಕೈಚಳಕ ನಡೆಸಿವೆ ಎಂದು ಈ ಮೊದಲು ಬಯಲಿಗೆ ತಂದಿರುವ ಹಿಂಡೆನ್‍ಬರ್ಗ್ ರಿಸರ್ಚ್ ಇದೀಗ ಸೆಕ್ಯುರಿಟಿ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಎಸ್‌ಇಬಿಐ) ಅಧ್ಯಕ್ಷೆ ಮಾಧಬಿ ಪುರಿ ಬುಚ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದೆ. ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಲು ವಿನೋದ್ ಅದಾನಿ ಳಸಿದ ಅದೇ ಸಾಗರೋತ್ತರ ನಿಧಿಗಳಲ್ಲಿ ಸೆಬಿ ಮುಖ್ಯಸ್ಥರು ಮತ್ತು ಅವರ ಪತಿ ಷೇರುಗಳನ್ನು ಹೊಂದಿದ್ದಾರೆ ಎಂದು ತೋರಿಸಲು ದಾಖಲೆಗಳನ್ನು ಉಲ್ಲೇಖಿಸಿದೆ. ಮುಖ್ಯ ಸ್ಥ
ಶೇರು ಮಾರುಕಟ್ಟೆ ಮೇಲೆ ನಿಯಂತ್ರಣವಿಡಬೇಕಾದ ಪ್ರಾಧಿಕಾರದ ಮುಖ್ಯಸ್ಥರ ವಿರುದ್ಧವೇ ಈ ಗಂಭೀರ ಆರೋಪಗಳನ್ನು ಮಾಡಿರುವಾಗ, ಒಂದು ಸರಿಯಾದ ತನಿಖೆ ನಡೆಯುವ ವರೆಗೆ ಸೆಬಿ ಅಧ್ಯಕ್ಷರು ತಮ್ಮ ಸ್ಥಾನದಿಂದ ಪಕ್ಕಕ್ಕೆ ಸರಿಯುವುದು ಅಗತ್ಯವಾಗಿದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.
ಅದಾನಿ ಸಮೂಹದ ಷೇರುಗಳ ಷೇರು ಮಾರುಕಟ್ಟೆ ಕೈಚಳಕದ ಸಮಸ್ತ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ರಚಿಸುವ ಮೂಲಕ ತನಿಖೆ ನಡೆಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ. ಮುಖ್ಯಸ್ಥ
ಇದನ್ನೂ ಓದಿ: 10 ಸಾವಿರ ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ ಮರುವಶಕ್ಕೆ ಈಶ್ವರ ಖಂಡ್ರೆ ಸೂಚನೆ
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಗಳ ಬಗ್ಗೆ ಗಂಭೀರ ಕಳವಳ
ಶೇಖ್ ಹಸೀನಾ ಸರ್ಕಾರದ ಪತನದ ನಂತರ ಬಾಂಗ್ಲಾದೇಶದಲ್ಲಿ ಹಿಂದೂ ಪೂಜಾ ಸ್ಥಳಗಳು ಮತ್ತು ಅಲ್ಪಸಂಖ್ಯಾತ ಸಮುದಾಯದ ಮೇಲೆ ಹಲವಾರು ದಾಳಿಗಳ ವರದಿಗಳ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯೂರೋ ತನ್ನ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ.
ಸರ್ಕಾರದ ಪತನದ ಪರಿಣಾಮವಾಗಿ ಉಂಟಾದ ಅತ್ಯಂತ ಗೊಂದಲದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೂಲಭೂತವಾದಿ ಶಕ್ತಿಗಳು ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗಿದೆ.
ಈಗ ಸ್ಥಾಪಿವಾಗಿರುವ ಮಧ್ಯಂತರ ಸರಕಾರ ಅಲ್ಪಸಂಖ್ಯಾತರು, ಅವರ ಮನೆಗಳು ಮತ್ತು ಪೂಜಾ ಸ್ಥಳಗಳ ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಲು ತಕ್ಷಣದ ಮತ್ತು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಒಕ್ಕೂಟ ಸರ್ಕಾರವು ಬಾಂಗ್ಲಾದೇಶದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಚರ್ಚಿಸಬೇಕು ಎಂದು ಪೊಲಿಟ್‍ಬ್ಯುರೊ ಆಗ್ರಹಿಸಿದೆ..
ಇದನ್ನೂ ನೋಡಿ: ‘ಆಕಾಶಕ್ಕೆ ಏಣಿ ಹಾಕು’ ಕವನ ಸಂಕಲನದ ಕುರಿತು ಎಸ್. ಜಿ.ಸಿದ್ದರಾಮಯ್ಯ ಮಾತುಗಳುJanashakthi Media