ಹಾಸನ: ವಿಜ್ಞಾನ ಮತ್ತು ವೈಜ್ಞಾನಿಕತೆ ಇಂದಿನ ಜಗತ್ತಿನ ಅಗತ್ಯ, ವಿಶೇಷವಾಗಿ ಭಾರತದ ಸರ್ವತೋಮುಖ ಅಭಿವೃದ್ಧಿಗಂತೂ ಅಗತ್ಯವಾಗಿ ಬೇಕಾಗಿದೆ. ಇದನ್ನು ರೂಢಿಸಿಕೊಳ್ಳಲು ಪ್ರತಿಯೊಬ್ಬರಲ್ಲೂ ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವುದು ಅಗತ್ಯವಿದೆ. ಅದನ್ನು ಭಾರತ ಜ್ಞಾನ ವಿಜ್ಞಾನ ಸಮಿತಿ ಬಹಳ ವರ್ಷಗಳಿಂದಲೂ ಮಾಡುತ್ತಿರುವುದು ಶ್ಲಾಘನೀಯ ಎಂದು ಎವಿಕೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಹೇಳಿದರು. ಸರ್ವತೋಮುಖ
ಅವರು ಇತ್ತೀಚೆಗೆ ನಗರದ ಎವಿಕೆ ಕಾಲೇಜಿನ ಸಭಾಂಗಣದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯು ಹಾಸನ ನಗರದ ಪದವಿ ಕಾಲೇಜುಗಳಿಂದ ಆಯ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವುದು ಹಾಗೂ ಬೆಳೆಸುವುದು ಹೇಗೆ ಸಂಪನ್ಮೂಲ ವ್ಯಕ್ತಿಗಳ ಸಬಲೀಕರಣ ಶೀಬಿರದ ಉದ್ಘಾಟನೆ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ವತೋಮುಖ
ಭಾರತದ ಜನತಂತ್ರ ಬಲಗೊಳ್ಳಲು ವಿಜ್ಞಾನಾಧಾರಿತ ಶಿಕ್ಷಣದ ಅಗತ್ಯವಿದೆ ಹಾಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಬಿತ್ತುವ ಕೆಲಸದಲ್ಲಿ ಶಾಲಾ-ಕಾಲೇಜುಗಳ ಹೊಣೆಗಾರಿಕೆ ದೊಡ್ಡದಿದೆ ಎಂದು ನುಡಿದು ಇಂದು ಪದವಿ ಕಾಲೇಜಿನ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಹೊಸಪೀಳೀಗೆಗೆ ಮಾನವೀಯತೆ, ವೈಜ್ಞಾನಿಕತೆಯನ್ನು ಮೂಡಿಸಲು ಸಜ್ಜಾಗಿರುವುದು ಸಂತಸದ ಸಂಗತಿ ಎಂದರು. ಸರ್ವತೋಮುಖ
ಇದನ್ನೂ ಓದಿ: ಡಿಜಿಟಲ್ ಯುಗದಲ್ಲಿ ಭಗತ್ ಸಿಂಗ್- ನಾಸ್ತಿಕತೆ
ಕಾರ್ಯಕ್ರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎವಿಕೆ ಪದವಿ ಕಾಲೇಜಿನ ಪ್ರಾಂಶುಪಾಲ ಸಿ.ಚ.ಯತೀಶ್ವರ್ ಮಾತನಾಡಿ ಕುವೆಂಪು ಹೊಸಕಾಲದ ವಿದ್ಯಾರ್ಥಿಗಳಿಗೆ 5೦ ವರ್ಷದ ಹಿಂದೆಯೇ ಭಾರತವನ್ನು ಕಂದಾಚಾರ, ಮೂಢನಂಬಿಕೆಗಳಿಂದ ಮುಕ್ತಗೊಳಿಸಿ ವೈಜ್ಞಾನಿಕ ಭಾರತ ಕಟ್ಟಲು ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ, ಆಮತದ ಈ ಮತದ ಹಳೆಮತದ ಸಹವಾಸ ತೊರೆದು ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ ಎಂದು ಕರೆನೀಡಿದರು ಆದರೆ ಅದನ್ನು ನಾವು ನಮ್ಮ ಬದುಕಿನ ಮಂತ್ರ ಮಾಡಿಕೊಳ್ಳಲಿಲ್ಲ ಹಾಗಾಗಿ ಭಾರತವಿಂದು ಅಭಿವೃದ್ಧಿಯಲ್ಲಿ ಬಹಳಷ್ಟು ಹಿಂದುಳಿದಿರುವುದು ಕಾಣುತ್ತಿದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜಿವಿಎಸ್ ಹಾಸನ ತಾಲ್ಲೂಕು ಅಧ್ಯಕ್ಷ ಡಾ. ಎಚ್.ಜಿ.ಮಂಜುನಾಥ್ ಮಾತನಾಡಿ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ ನೆಹರು 1958 ರಲ್ಲಿ “ವಿಜ್ಞಾನ ನೀತಿ ನಿರ್ಣಯ” ಸಂಸತ್ತಿನಲ್ಲಿ ಮಂಡನೆ ಮಾಡುತ್ತಾ ಇದು ದೇಶಕ್ಕೆ ವಿಜ್ಞಾನದ ಸಾಧನಗಳನ್ನು ಕೊಡುತ್ತದೆ, ಜೀವನದ ಮೌಲ್ಯಗಳನ್ನು ಉತ್ತಮಗೊಳಿಸುತ್ತದೆ, ಇದು ಭಾರತೀಯ ನಾಗರೀಕತೆಗೆ ಹೊಸ ಚೈತನ್ಯ ಮತ್ತು ನವನವೀನ ಶಕ್ತಿ ನೀಡುತ್ತದೆ ಹಾಗಾಗಿ ಭಾರತೀಯರೆಲ್ಲರೂ ಹಳೆ ನಂಬಿಕೆಗೆ ಬದಲಾಗಿ ಹೊಸ ವಿಜ್ಞಾನಾಧಾರಿತ ನಂಬಿಕೆಗಳನ್ನ ಮೈಗೂಡಿಸಿಕೊಳ್ಳುವುದು ಅಗತ್ಯ ಎಂದು ವಿವರಿಸಿದ್ದರು. ಸರ್ವತೋಮುಖ
ಮತ್ತು ಇದು ಸುಧೀರ್ಘ ಚರ್ಚೆಯ ನಂತರ ಅಂಗೀಕಾರವಾಗಿತ್ತು ಆದರೆ ಯಾವ ಪ್ರಮಾಣದಲ್ಲಿ ಜಾರಿಗೊಳಿಸಬೇಕಿತ್ತೋ ಅದು ಆಗಲಿಲ್ಲ ಎಂದು ವಿಷಾಧಿಸಿದ ಅವರು, ನಮಗೆ ಸ್ವಾತಂತ್ರ್ಯ ಲಭಿಸಿ 75ವರ್ಷ ಕಳೆಯುತ್ತಾ ಬಂದರೂ ಅಜ್ಞಾನ, ಅಂಧಕಾರ, ಮೂಢನಂಬಿಕೆ, ಕಂದಾಚಾರಗಳನ್ನ ಕಳಚಿಕೊಳ್ಳಲೇ ಇಲ್ಲ ಬದಲಾಗಿ ಕಳೆದ ಒಂದು ದಶಕದಿಂದ ವಿಜ್ಞಾನ ಜ್ಞಾನಕ್ಕೆ ವಿಮುಖವಾಗಿ ಹಳೆಯ ಮೌಢ್ಯಾಚರಣೆಗಳೆ ಹೆಚ್ಚಾಗುತ್ತಿವೆ. ಅದರ ಪರಿಣಾಮ ವಿಜ್ಞಾನ ಜ್ಞಾನ ಮತ್ತು ವೈಚಾರಿಕತೆ ಬಿತ್ತುವವರ ವಿರುದ್ಧ ಮಾರಾಣಾಂತಿ ದಾಳಿಗಳು ನಡೆಯುತ್ತಿವೆ. ಇವು ಭಾರತದ ಬೆಳವಣಿಗೆಗೆ ತೊಡಕಾಗಿವೆ ಇದರಿಂದ ಮುಕ್ತಿ ಪಡೆದು ಭಾರತವನ್ನು ವಿಜ್ಞಾನ ಭಾರತವಾಗಿ ನಿರೂಪಿಸಲು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತುವ, ಸಂವಿಧಾನ ಬದ್ಧ ಬದುಕು ನಡೆಸುವ ಸಂಸ್ಕಾರ ಕಲಿಸಬೇಕಾದುದು ಅಗತ್ಯ ಹಾಗಾಗಿ ಈ ಕಾರ್ಯಗಾರ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿರುವುದು ಎಂದರು. ಸರ್ವತೋಮುಖ
ಕಾರ್ಯಕ್ರಮದದ ಕುರಿತು ಪರಿಚಯ ನೀಡಿ ಎಲ್ಲರನ್ನು ಸ್ವಾಗತಿಸಿದ ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಚಿನ್ನೇನಹಳ್ಳ ಸ್ವಾಮಿ ವಿವರಿಸಿ ಬಿಜಿವಿಎಸ್ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಸಂಪನ್ಮೂಲ ವ್ಯಕ್ತಿಗಳನ್ನು ತಯಾರುಮಾಡಲು ಈ ಕಾರ್ಯಗಾರ ಆಯೋಜಿಸಿದೆ ಇಲ್ಲಿ ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಲ್ಲಿ ಕನಿಷ್ಠ 1೦೦ ಸಂವಾದ ಚಟುವಟಿಕೆ ನಡೆಸಲಿದ್ದಾರೆ ಎಂದರು. ಶಿಬಿರದ ಸಂಚಾಲಕಿ ಜಾನಕಿ ಉದ್ಘಾಟನಾ ಸಮಾರಂಭದ ವಂದನಾರ್ಪಣೆ ನೆರವೇರಿಸಿದರು.

ನಂತರ ನಡೆದ ಸಬಲೀಕರಣ ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿ ಅಹಮದ್ ಹಗರೆ ಧರ್ಮಕ್ಕೂ ಮೂಢನಂಬಿಕೆಗೂ ಯಾವ ಸಂಬಂಧವೂ ಇಲ್ಲ ಎನ್ನುವುದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು, ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳನ್ನು ಹೇಗೆ ಅರ್ಥಮಾಡಿಕೊಂಡು ವಿವರಿಸಬೇಕು, ಭಾರತ ಹಿಂದುಳಿವೆಕೆಗೆ ಮೌಢ್ಯ ಹೇಗೆ ಕಾರಣವಾಗಿದೆ ಎಂಬುದನ್ನು ತಿಳಿಕೊಳ್ಳುವ ಬಗೆ ವಿವರಿಸಿದರು.
ನಂಬಿಕೆ-ಮೂಢನAಬಿಕ-ವೈಜ್ಞಾನಿಕ ಮನೋಭಾವ ಎಂದರೇನು ಹಾಗೂ ಹೇಗೆ ಅರ್ಥ ಮಾಡಿಕೊಳ್ಳಬೇಕು ಎನ್ನುವ ಚಟುವಟಿಕೆಯನ್ನು ಸಂಪನ್ಮೂಲ ವ್ಯಕ್ತಿ ಬಿ.ಆರ್.ಜಾನಕಿ ನಡೆಸಿಕೊಟ್ಟು ನಿರ್ದಿಷ್ಟ ಪುರಾವೆಯ ಹೊರತಾಗಿಯೂ; ಅಥವಾ ಪುರಾವೆಯ ನಿರೀಕ್ಷೆಯೂ ಇಲ್ಲದೇ ಯಾವುದೇ ವಸ್ತು, ವ್ಯಕ್ತಿ, ಶಕ್ತಿ, ಸಂಗತಿ ಇದೆ/ಇಲ್ಲ ಅಥವಾ ನಿಜ/ಸುಳ್ಳು ಎಂದು ಭಾವಿಸುವುದು “ನಂಬಿಕೆ” ಅರಿವಿನ ಹೊರತಾಗಿಯೂ ಆ ನಂಬಿಕೆಯನ್ನು ಮುಂದುವರಿಸಿಕೊಂಡು ಹೋದರೆ ಅದು ಮೂಢನಂಬಿಕೆ ಆಗುತ್ತದೆ, ಮತ್ತವುಗಳಿಂದ ಆಗುವ ಹಾನಿಗಳನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ಶಿಬಿರಾರ್ಥಿಗಳಿಂದಲೇ ಮಾಡಿಸಿ ತೋರಿಸಿದರು.
ನಂತರದ ಅವಧಿಯಲ್ಲಿ ವೈಜ್ಞಾನಿಕ ಮನೋಭಾವ ಎಂದರೇನು ಹಾಗೂ ಬೆಳೆಸಿಕೊಳ್ಳುವ ಹಲವಾರು ಚಟುವಟಿಕೆಗಳನ್ನು ವಿಜ್ಞಾನ ಶಿಕ್ಷಕಿ ಸಂಫನ್ಮೂಲ ವ್ಯಕ್ತಿ ಬಿ.ಕೆ.ಲೋಲಾಕ್ಷಿ ನಡೆಸಿಕೊಟ್ಟು “ವಿಜ್ಞಾನ ಬುದ್ಧಿ ಅಥವ ವೈಜ್ಞಾನಿಕ ಮನೋಧರ್ಮ ಎಂದರೇನು? : ಏನು ? ಏಕೆ? ಹೇಗೆ? ಎಂಬ ಪ್ರರ್ಶನೆ ಹಾಕಿ ತಾರ್ಕಿಕವಾಗಿ ಆಲೋಚಿಸುವ ವಿಧಾನ ತಿಳಿಸಿದರು ಕಡೆಯಲ್ಲಿ ಯಾವ ವಿಷಯವೇ ಆಗಿರಲಿ, ಮತ್ತು ಯಾವುದೇ ಘಟನೆ ಸಂಭವಿಸಿರಲಿ ಅದನ್ನು ಪುರಾವೆ ಇಲ್ಲದೆ ನಂಬಬಾರದು ಎನ್ನುವ ತಿಳುವಳಿಕೆ ಕೊಟ್ಟರು.
ಶಿಬಿರವನ್ನು ಸಮಾರೋಪಗೊಳಿಸಿದ ಬಿಜಿವಿಎಸ್ ಜಿಲ್ಲಾ ಗೌರವಾಧ್ಯಕ್ಷೆ ಡಾ. ಎ.ಸಾವಿತ್ರಿ ನೂತನ ಶಂಪನ್ಮೂಲ ವ್ಯಕ್ತಿಗಳು ವಿಜ್ಞಾನಧಾಋಇತ ತಾರ್ಕಿಕ ಗುಣಲಕ್ಷಣಗಳನ್ನು ಮಕ್ಕಳಲ್ಲಿ ಅವರ ಮೂಲಕ ಸಮಾಜದಲ್ಲಿ ಮೂಢಿಸಿದರೆ ಭಾರತವನ್ನು ಯಾರೂ ಮೋಸಗೊಳಿಸಲು ಆಗುವುದಿಲ್ಲ, ಬೀದಿ ಬೀದಿಯಲ್ಲಿ ಧರ್ಮಕಾಳಗ ನಡೆಯುವುದಿಲ್ಲ, ಸಾಮರಸ್ಯ, ಸಹಬಾಳ್ವೆ, ಸಹೋದರತೆ ನಮ್ಮೆಲ್ಲರ ಜೀನುಗಳಲ್ಲೇ ತುಂಬಿಕೊಳ್ಳುತ್ತದೆ ಎಂಬ ಆಶಯ ವ್ಯಕ್ತಪಡಿಸಿ ಈ ಸಂವಾಧ ನಡೆಸಲು ತಾವೆಲ್ಲರೂ ಕ್ರಿಯಾ ಯೋಜನೆ ರೂಪಿಸಿ ಎಂದು ತಿಳಿಸಿದರು.
ಕಾರ್ಯಗಾರದಲ್ಲಿ, ಎಂ.ಕೃಷ್ಣ ಕಾನೂನು ಕಾಲೇಜು, ಮಲ್ನಾಡ್ ಎಂಜಿನೀಯರಿAಗ್ ಕಾಲೇಜು, ಮಹಿಳಾ ಪದವಿ ಕಾಲೇಜು, ಹೋಂಸೈನ್ಸ್ ಕಾಲೇಜು, ಸರ್ಕಾರಿ ಎಂಜಿನೀಯರಿಂಗ್ ಕಾಲೇಜು, ಸಂತಜೋಸೆಫರ ಪದವಿ ಕಾಲೇಜು, ಶ್ರೀರಂಗ ಶಿಕ್ಷಣ ಮಹಾವಿದ್ಯಾಲಯ, ಎ.ವಿ.ಕೆ ಕಾಲೇಜಿನಿಂದ ಆಯ್ದ ವಿದ್ಯಾರ್ಥಿಗಳು ಹಾಗೂ ಬಿಜಿವಿಎಸ್ ಕಾರ್ಯಕರ್ತರು ಭಾಗಹಿವಹಿಸಿದ್ದರು.
ಇದನ್ನೂ ನೋಡಿ: ಧರ್ಮಸ್ಥಳ ಪ್ರಕರಣ | ಕೊಂದವರು ಯಾರು ಎಂಬ ಸತ್ಯ ಸಧ್ಯದಲ್ಲೇ ಗೊತ್ತಾಗಲಿದೆ – ಕೆ.ನೀಲಾJanashakthi Media
