ನವದೆಹಲಿ: ಕಿವಿ ಕೇಳಿಸದಿರುವ ವಕೀಲೆಯೊಬ್ಬರಿಗೆ ‘ಸಂಕೇತ ಭಾಷೆ’ಯ ಮೂಲಕ ವಾದಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ನ್ಯಾಯಾಲಯಗಳಲ್ಲಿ ಎಲ್ಲವನ್ನೂ ಗಟ್ಟಿಯಾಗಿ ಮಾತನಾಡುವ ಅಗತ್ಯವಿಲ್ಲ ಎಂಬ ಸಂದೇಶವನ್ನು ಶುಕ್ರವಾರ ರವಾನಿಸಿದೆ. ಶ್ರವಣದೋಷವುಳ್ಳ ವಕೀಲೆಯ ಸಂಕೇತ ಭಾಷೆಯ ವಾದವನ್ನು ಭಾಷಾಂತರಗಾರರ ಸಹಾಯದಿಂದ ಸುಪ್ರೀಂಕೋರ್ಟ್ ಆಲಿಸಿದೆ.
ಕಿವಿ ಕೇಳಿಸದಿರುವ ವಕೀಲೆ ಸಾರಾ ಸನ್ನಿ ಅವರ ಅಂಗವಿಕಲರ (ಪಿಡಬ್ಲ್ಯೂಡಿ) ಹಕ್ಕುಗಳ ಬಗ್ಗೆಗಿನ ಒಂದು ಪ್ರಕರಣವನ್ನು ಸಂಕೇತ ಭಾಷೆಯ ಮೂಲಕ ವಾದಿಸಲು ಅನುಮತಿ ನೀಡಬೇಕೆಂದು ವಕೀಲರಾದ ಸಂಚಿತಾ ಐನ್ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವನ್ನು ಕೋರಿದ್ದರು. ಅವರ ಈ ಕೋರಿಕೆಯನ್ನು ತಕ್ಷಣವೇ ಒಪ್ಪಿಕೊಂಡ ಸಿಜೆಐ ಆನ್‌ಲೈನ್ ವಿಚಾರಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಶ್ರವಣದೋಷ
ಇದನ್ನೂ ಓದಿ: ‘ನನ್ನ ಎಂಪಿ ಟಿಕೆಟ್ ರದ್ದು ಮಾಡಲು ಯಾರಿಂದ ಸಾಧ್ಯ?’ – ಲೈಂಗಿಕ ಕಿರುಕುಳದ ಆರೋಪಿ ಬ್ರಿಜ್ ಭೂಷಣ್ ಸವಾಲು
ಮುಖ್ಯ ನ್ಯಾಯಮೂರ್ತಿಯ ಅನುಮತಿ ಸಿಗುತ್ತಿದ್ದಂತೆ ಆನ್‌ಲೈನ್ ಕೋರ್ಟ್ ಮೇಲ್ವಿಚಾರಕರು ವಕೀಲೆ ಸಾರಾ ಸನ್ನಿ ಮತ್ತು ಭಾಷಾಂತರಗಾರ ಸೌರವ್‌ಗಾಗಿ ಆನ್‌ಲೈನ್ ವಿಚಾರಣೆಯ ವಿಂಡೋಗಳನ್ನು ತೆರೆದಿದ್ದಾರೆ. ಅವರ ಪ್ರಕರಣದ ಕ್ರಮ ಸಂಖ್ಯೆ 37 ಕ್ಕೆ ನಿಗದಿಪಡಿಸಲಾಗಿದ್ದರೂ, ಪೀಠವು ಇಬ್ಬರಿಗೂ ದಿನದ ನಡಾವಳಿಗಳಿಗೆ ಲಾಗ್ ಇನ್ ಆಗಿರಲು ಅನುಮತಿ ನೀಡಿತು.
ಮೊದಲಿಗೆ ಸಿಜೆಐ ನೇತೃತ್ವದ ಪೀಠವು ತುರ್ತು ವಿಚಾರಣೆ ನಡೆಸುತ್ತಿದ್ದ ಪ್ರಕರಣದ ಬಗ್ಗೆ ಭಾಷಾಂತರಗಾರ ಸೌರವ್ ಅವರು ವಕೀಲೆ ಸಾರಾ ಅವರಿಗೆ ಕೈ ಸನ್ನೆಗಳ ಮೂಲಕ ತ್ವರಿತವಾಗಿ ತಿಳಿಸುತ್ತಿದ್ದರು. ಅವರ ವೇಗವನ್ನು ಗಮನಿಸಿದ ಸಾಲಿಟರ್ ಜನರಲ್ ತುಷಾರ್ ಮೆಹ್ತಾ, “ನ್ಯಾಯಾಲಯದ ವಿಚಾರಣೆಗಳನ್ನು ಭಾಷಾಂತರಕಾರ ವಕೀಲೆ ಸಾರಾ ಅವರಿಗೆ ತಿಳಿಸಿದ ವೇಗವು ಅದ್ಭುತವಾಗಿದೆ!” ಎಂದು ಹೇಳಿದ್ದು, ಇದಕ್ಕೆ ಸಿಜೆಐ ಕೂಡಾ ಒಪ್ಪಿಗೆ ಸೂಚಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನಂತರ ಜಾವೇದ್ ಅಬಿದಿ ಫೌಂಡೇಶನ್ ಸಲ್ಲಿಸಿದ ಅವರ ಪ್ರಕರಣದ ವೇಳೆ ಕೂಡಾ ವಕೀಲೆ ಮತ್ತು ಭಾಷಾಂತರಕಾರ ಜೋಡಿಯು ತ್ವರಿತವಾಗಿ ಹಾಗೂ ಮೌನವಾಗಿ ಕೈ ಸನ್ನೆ ಭಾಷೆಯ ವಿನಿಮಯ ಮಾಡಿದ್ದು, ಅದನ್ನು ನಂತರ ವಾದಗಳಿಗೆ ಪರಿವರ್ತಿಸಲಾಯಿತು. ಶ್ರವಣದೋಷ
ವಿಡಿಯೊ ನೋಡಿ: ಕಟ್ಟಡ ಕಾರ್ಮಿಕರ ಮಕ್ಕಳ ಸ್ಕಾಲರ್ಶಿಪ್‌ಗೆ ಕೊಕ್ಕೆ! ಭುಗಿಲೆದ್ದ ಕಾರ್ಮಿಕರ ಆಕ್ರೋಶ Janashakthi Media