ತೆಲಂಗಾಣ ವೈದ್ಯಕೀಯ ವಿದ್ಯಾರ್ಥಿನಿ ಡಾ. ಪ್ರೀತಿ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಎಐಡಿಎಸ್‌ಒ ಪ್ರತಿಭಟನೆ

ಮೈಸೂರು: ತೆಲಂಗಾಣದ ಒರಂಗಲ್ ಜಿಲ್ಲೆಯ ಕಾಕತೀಯ ವೈದ್ಯಕೀಯ ಕಾಲೇಜಿನಲ್ಲಿ(ಕೆಎಂಸಿ) ಸ್ನಾತಕ ವ್ಯಾಸಂಗ ಮಾಡುತ್ತಿದ್ದ ಡಾ.ಧರಾವತ್ ಪ್ರೀತಿ ಎಂಬ ವಿದ್ಯಾರ್ಥಿನೀಯ ಮೇಲೆ ರ‍್ಯಾಗಿಂಗ್ ನಡೆದಿದ್ದು, ಆಕೆ ಆತ್ಮಹತ್ಯೆಗೆ ಯತ್ನಿಸಿ, ಫೆಬ್ರವರಿ 26ರಂದು ಸಾವನ್ನಪ್ಪಿದ್ದಾರೆ.

ಡಾ.ಪ್ರೀತಿ ಸಾವಿನ ಘಟನೆಯನ್ನು ಕೂಡಲೇ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿರುವ ಆಲ್‌ ಇಂಡಿಯಾ ಸ್ಟೂಡೆಂಟ್ಸ್‌ ಆರ್ಗನೈಜಶೇನ್‌(ಎಐಡಿಎಸ್‌ಒ) ಸಂತಾಪ ಸಭೆಯನ್ನು ನಡೆಸಿತು.

ನಗರದ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ನಡೆದ ಸಂತಾಪ ಸಭೆ ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಭಾಷ್‌, ಡಾ. ಪ್ರೀತಿ ಸಾವಿನ ಬಗ್ಗೆ ತಕ್ಷಣವೇ ಕೂಲಂಕುಷ ಮತ್ತು ನಿಷ್ಪಕ್ಷಪಾತ ತನಿಖೆ ಕೈಗೊಂಡು ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಹಾಗೂ ಕಾಲೇಜಿನಲ್ಲಿ ರ‍್ಯಾಗಿಂಗ್‌ ಮತ್ತು ಪ್ರಾಬಲ್ಯ ಪ್ರವೃತ್ತಿಯ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾಲೇಜು ಆಡಳಿತ ಮಂಡಳಿ ಮತ್ತು ಸರ್ಕಾರ ಈ ಸಾವಿನ ಹೊಣೆ ಹೊತ್ತು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಜರುಗಿಸಬೇಕು. ವೈದ್ಯಕೀಯ ಹಾಸ್ಟೆಲ್ ಮತ್ತು ಕಾಲೇಜು ಕ್ಯಾಂಪಸ್‌ ಗಳಲ್ಲಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಶೈಕ್ಷಣಿಕ ವಾತಾವರಣವನ್ನು ಸಂರಕ್ಷಿಸಬೇಕು ಎಂದರು.

ಸಂತಾಪ ಸಭೆಯಲ್ಲಿ ಎಐಡಿಎಸ್‌ಒ ಕಾರ್ಯದರ್ಶಿ ಚಂದ್ರಕಲಾ, ಪದಾಧಿಕಾರಿಗಳಾದ ಚಂದ್ರಿಕಾ ಚಂದನ, ಹೇಮಾ ಹಾಗೂ ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *