‘ಕೋಮುವಾದ ಅಳಿಸಿ ಕರ್ನಾಟಕ ಕೇಂದ್ರೀಯ ವಿವಿ ಉಳಿಸಿ ಆಂದೋಲನ’ | ಬುಧವಾರ ಬೃಹತ್ ರ‍್ಯಾಲಿ; ಮುತ್ತಿಗೆ

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೋಮುವಾದಿ ಹಾಗೂ ಜಾತಿವಾದಿ ಆರ್‌ಎಸ್‌ಎಸ್‌ ಮತ್ತು ಎಬಿವಿಪಿ ಸಂಘಟನೆಗಳು ಸಮಾಜದ್ರೋಹಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ಅವರಿಂದ ವಿಶ್ವವಿದ್ಯಾಲಯವನ್ನು ಉಳಿಸುವಂತೆ ಆಗ್ರಹಿಸಿ ‘ಕೋಮುವಾದ ಅಳಿಸಿ ಕರ್ನಾಟಕ ಕೇಂದ್ರೀಯ ವಿವಿ ಉಳಿಸಿ ಆಂದೋಲನ’ವು ಅಕ್ಟೋಬರ್ 11ರ ಬುಧವಾರ ಬೃಹತ್ ಜಾಥಾ ಮೂಲಕ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಲಿದೆ.

ಸಮಾಜದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಸಮಾಜಮುಖಿ ಮೌಲ್ಯಗಳನ್ನು ಕಲಿಸುವ ಮೂಲಕ ಶಿಕ್ಷಣ ನೀಡುವ ವಿಶ್ವವಿದ್ಯಾಲಯದ ಸದುದ್ದೇಶವನ್ನು ಆರೆಸ್ಸೆಸ್‌ ಮತ್ತು ಎಬಿವಿಪಿ ಸಂಘಟನೆಗಳು ಮಣ್ಣುಪಾಲು ಮಾಡುತ್ತಿವೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಇದನ್ನು ವಿರೋಧಿಸಿ ಬುಧವಾರ ಕಲಬುರಗಿಯ ಅಂಬೇಡ್ಕರ್ ಪ್ರತಿಮೆ ಮೈದಾನ ಕಡಗಂಚಿಯಿಂದ ಕೇಂದ್ರೀಯ ವಿಶ್ವವಿದ್ಯಾಲಯವರೆಗೆ ಬೃಹತ್ ಬೃಹತ್ ಪ್ರತಿಭಟನಾ ಜಾಥಾ ನಡೆಯಲಿದ್ದು, ಹೋರಾಟಗಾರರು ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ವರದಿಯಾಗಿದೆ. ಕರ್ನಾಟಕ ಕೇಂದ್ರೀಯ ವಿವಿ

ಇದನ್ನೂ ಓದಿ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಕಾರಿಗೆ ಈರುಳ್ಳಿ, ಟೊಮೆಟೊ ಎಸೆದ ಉದ್ರಿಕ್ತ ರೈತರು

ಆರೆಸ್ಸೆಸ್‌ನ ಉದ್ದೇಶಗಳಿಗೆ ಪೂರಕವಾಗಿ ಕೆಲವು ಜಾತಿವಾದಿ, ಕೋಮುವಾದಿ ಪ್ರಾಧ್ಯಾಪಕರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂಲಭೂತವಾದದ ವಿಷವನ್ನು ಬಿತ್ತುತ್ತಾ, ವಿದ್ಯಾರ್ಥಿಗಳನ್ನು ಮತಾಂಧರನ್ನಾಗಿ ಮಾಡುತ್ತಿದ್ದಾರೆ. ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಬೇಕು ಎಂದು ಎಂದು ಆಂದೋಲನದ ಮುಖಂಡರು ಒತ್ತಾಯಿಸಿದ್ದಾರೆ.

“ಕಲ್ಯಾಣ ಕರ್ನಾಟಕ ಭಾಗದ ಜನರ ಸಾಮುದಾಯಿಕ ಸಮಸ್ಯೆಗಳಿಗೆ ಸಂಶೋಧನೆಯ ಮೂಲಕ ಪರಿಹಾರವನ್ನು ಸೂಚಿಸುವುದಕ್ಕೆ ಬದಲಾಗಿ, ವಿಶ್ವವಿದ್ಯಾಲಯವನ್ನು ಕೋಮುವಾದಿಗಳ ಪ್ರಯೋಗ ಶಾಲೆಯನ್ನಾಗಿ ರೂಪಿಸಲು ಹೊರಟಿರುವುದು ಬೌದ್ಧಿಕ ದಾರಿದ್ರತನವಾಗಿದೆ. ಜನಸಾಮಾನ್ಯರ ತೆರಿಗೆ ಹಣದ ಋಣಪ್ರಜ್ಞೆಯ ಕನಿಷ್ಠ ವಿವೇಕವೂ ಇಲ್ಲದ ವಿಶ್ವವಿದ್ಯಾಲಯದ ಕೆಲವು ಜಾತಿವಾದಿ ಅಧಿಕಾರಿಗಳು ಮತ್ತು ಪ್ರಾಧ್ಯಾಪಕರು ತಮ್ಮ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದೆ ಸಮಾಜಕ್ಕೆ ದ್ರೋಹ ಎಸಗುತ್ತಿದ್ದಾರೆ” ಎಂದು ಆಂದೋಲನದ  ಅಧ್ಯಕ್ಷ ಡಾ. ಡಿ.ಜಿ ಸಾಗರ ಹೇಳಿದ್ದಾರೆ.

ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ಪ್ರೊ . ಬಟ್ಟು ಸತ್ಯನಾರಾಯಣ ಅವರು ನೇಮಕವಾದ ಮೇಲೆ ವಿದ್ಯಾಲಯದ ಶೈಕ್ಷಣಿಕ ವಾತಾವರಣವು ಕೋಮುವಾದೀಕರಣಕ್ಕೆ ಒಳಗಾಗಿದೆ. ಆರ್‌ಎಸ್‌ಎಸ್‌, ಎಬಿವಿಪಿಗಳಂತಹ ಕೋಮುವಾದಿ ಸಂಘಟನೆಗಳಿಗೆ ಸಹಕಾರ ನೀಡುವ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಸಂಶೋಧಕರಿಗೆ ಮಾತ್ರ ಅಲ್ಲಿ ಮನ್ನಣೆ ಸಿಗುತ್ತಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣ: ಅಕ್ರಮ ಜೂಜಾಟ ಆಯೋಜನೆ ಪ್ರಕರಣದ ಆರೋಪಿ ಬಿಜೆಪಿ ಸೇರ್ಪಡೆ

“ಕೋಮುವಾದವನ್ನು ವಿರೋಧಿಸುವವರು ವಿಶ್ವವಿದ್ಯಾಲಯ ತೊರೆಯಬೇಕು ಎಂಬ ಭಯದ ವಾತಾವರಣವನ್ನು ನಿರ್ಮಿಸಲಾಗಿದೆ. ಸರ್ವಜನಾಂಗ ಶಾಂತಿಯ ತೋಟದಂತೆ, ಬಹುತ್ವ ಭಾರತದ ಮೌಲ್ಯಾಧಾರಿತ ವಾತಾವರಣದಲ್ಲಿ ವಿದ್ಯಾರ್ಥಿಗಳು ವಿದ್ಯೆಯನ್ನು ಕಲಿಯುವುದಕ್ಕೆ ಬದಲಾಗಿ, ಭಯದಲ್ಲಿ ಬದುಕಬೇಕಾಗಿದೆ” ಎಂದು ಡಿ.ಜಿ. ಸಾಗರ ಕಳವಳ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಕೇಂದ್ರೀಯ ವಿವಿ

ವಿಶ್ವವಿದ್ಯಾಲಯದಲ್ಲಿ ರಾಮನವಮಿ, ಸರಸ್ವತಿ ಪೂಜೆ, ಹೋಮ ಹವನ, ಗಣೇಶ ಉತ್ಸವಗಳು ಆರಂಭವಾಗಿದ್ದು, ಪ್ರೊ. ಬಟ್ಟು ನಾರಾಯಣ ಅವರು ಅಧಿಕಾರ ವಹಿಸಿದ ನಂತರ ಇದು ಪ್ರಾರಂಭವಾಗಿದೆ ಎಂದು ಹೋರಾಟಗಾರು ಆರೋಪಿಸಿದ್ದಾರೆ. ಅವರ ಆಗಮನದ ನಂತರ ದೇಶದ ಬೇರೆಬೇರೆ ರಾಜ್ಯಗಳಿಂದ ಬಂದ ಎಲ್ಲ ಜಾತಿ, ಧರ್ಮ, ಭಾಷೆ, ಸಮುದಾಯದ ವಿದ್ಯಾರ್ಥಿಗಳು ಭ್ರಾತೃತ್ವದಿಂದ ವಿದ್ಯೆ ಕಲಿಯುವ ಸಾಮರಸ್ಯದ ವಾತಾವರಣವನ್ನು ಹಾಳು ಮಾಡಿ, ಇಡೀ ವಿಶ್ವವಿದ್ಯಾಲಯವನ್ನು ದ್ವೇಷದ ಕೇಂದ್ರವನ್ನಾಗಿ ಮಾರ್ಪಡಿಸಲಾಗಿದೆ ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ಜೀವ ಜಗತ್ತಿನ ಓಟದಲ್ಲಿ ಗೆದ್ದ ಆಮೆಯೆಂಬ ಅದ್ಭುತ ಪ್ರಾಣಿ Janashakthi Media

Donate Janashakthi Media

Leave a Reply

Your email address will not be published. Required fields are marked *