ಬಾಪುರನ್ನು ಕೊಲ್ಲಲು ಗೋಡ್ಸೆಗೆ ಬಂದೂಕು ಹುಡುಕಲು ಸಾವರ್ಕರ್ ಸಹಾಯ ಮಾಡಿದ್ದರು: ತುಷಾರ್‌ ಗಾಂಧಿ

ಮುಂಬೈ: ಮಹಾತ್ಮ ಗಾಂಧಿಯವರ ಮರಿಮೊಮ್ಮಗ ತುಷಾರ್ ಗಾಂಧಿ ವಿನಾಯಕ ದಾಮೋದರ್‌ ಸಾವರ್ಕರ್ ಬಗ್ಗೆ ಟ್ವೀಟ್ ಮಾಡಿದ್ದು, ಸಾವರ್ಕರ್ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದು ಮಾತ್ರವಲ್ಲದೇ ನಾಥೂರಾಂ ಗೋಡ್ಸೆ ಅವರಿಗೆ ಬಾಪು ಅವರನ್ನು ಕೊಲ್ಲಲು ಸಮರ್ಥ ಬಂದೂಕನ್ನು ಪಡೆಯಲು ಸಹಾಯ ಮಾಡಿದ್ದರು ಎಂದು ತಿಳಿಸಿದ್ದಾರೆ.

ವಿ.ಡಿ.ಸಾವರ್ಕರ್ ಬಗ್ಗೆ ಕಾಂಗ್ರೆಸ್‌ ಭಾರತ ಐಕ್ಯತಾ ಯಾತ್ರೆ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯೊಂದನ್ನು ನೀಡಿದ್ದರು. ರಾಹುಲ್ ಗಾಂಧಿ ಬಳಿಕ ಇದೀಗ ತುಷಾರ್ ಗಾಂಧಿ ಮತ್ತೊಂದು ಹೇಳಿಕೆ ನೀಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಭಾರತ ಐಕ್ಯತಾ ಯಾತ್ರೆಯಲ್ಲಿ ತುಷಾರ್‌ ಗಾಂಧಿ ರಾಹುಲ್‌ ಗಾಂಧಿಯೊಂದಿಗೆ ಹೆಜ್ಜೆ ಹಾಕಿದರು.

ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದ್ದಲ್ಲದೇ, ಬಾಪು ಅವರನ್ನು ಕೊಲ್ಲಲು ನಾಥೂರಾಂ ಗೋಡ್ಸೆಗೆ ಸಮರ್ಥ ಬಂದೂಕನ್ನು ಹುಡುಕಲು ಸಹಾಯ ಮಾಡಿದ್ದರು. ಬಾಪು ಹತ್ಯೆಗೂ 2 ದಿನಗಳ ಮೊದಲು ಗೋಡ್ಸೆ ಬಳಿ ಪ್ರಬಲವಾದ ಯಾವುದೇ ಶಸ್ತ್ರಗಳಿರಲಿಲ್ಲ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೂ ಮಾತನಾಡಿರುವ ತುಷಾರ್‌ ಗಾಂಧಿ ತಮ್ಮ ಹೇಳಿಕೆಯನ್ನು ವಿವರಿಸಿದ್ದಾರೆ. ನಾನು ಯಾವುದೇ ಆರೋಪ ಮಾಡುತ್ತಿಲ್ಲ. ಇತಿಹಾಸದಲ್ಲಿ ದಾಖಲಾಗಿರುವುದನ್ನು ಹೇಳುತ್ತಿದ್ದೇನೆ. ಪೊಲೀಸ್ ಎಫ್‌ಐಆರ್ ಪ್ರಕಾರ ನಾಥೂರಾಂ ಗೋಡ್ಸೆ ಮತ್ತು ಸಾವರ್ಕರ್ ಅವರು 1948ರ ಜನವರಿ 26, 27 ರಂದು ಭೇಟಿಯಾಗಿದ್ದರು. ಅವರ ಭೇಟಿಯಾಗುವವರೆಗೂ ಗೋಡ್ಸೆ ಬಳಿ ಬಂದೂಕು ಇರಲಿಲ್ಲ. ಅವರು ಬಂದೂಕು ಹುಡುಕುತ್ತಾ ಮುಂಬೈನಾದ್ಯಂತ ಸುತ್ತಾಡಿದ್ದಾರೆ. ಆದರೆ ಈ ಭೇಟಿಯ ಬಳಿಕ ಅವರು ನೇರವಾಗಿ ದೆಹಲಿಗೆ ಹೋಗಿ, ಅಲ್ಲಿಂದ ಗ್ವಾಲಿಯರ್‌ಗೆ ಹೋದರು. ಅಲ್ಲಿ ಅವರಿಗೆ ಒಳ್ಳೆಯ ಪಿಸ್ತೂಲ್ ಸಿಕ್ಕಿದೆ. ಇದೆಲ್ಲವೂ ಬಾಪು ಹತ್ಯೆಯ 2 ದಿನಗಳ ಮೊದಲು ನಡೆದಿದೆ. ಇದು ಆರೋಪ ಅಲ್ಲ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *