ಸಾರ್ವಜನಿಕವಾಗಿಯೇ ಸಂಸದ-ಶಾಸಕರ ಕಿತ್ತಾಟ: ಏಕ ವಚನದಲ್ಲಿ ಬೈಗುಳ

ತುಮಕೂರು: ಲೋಕಸಭಾ ಸದಸ್ಯ ಜಿ.ಎಸ್.ಬಸರಾಜು ಮತ್ತು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ನಡುವೆ ಏಕವಚನದಲ್ಲಿ ಬೈದಾಡಿಕೊಂಡುರವ ಘಟನೆ ಸಂಭವಿಸಿದೆ. ಚೆಕ್‍ಡ್ಯಾಂ ಯೋಜನೆಯ ವಿಚಾರವಾಗಿ ಸಾರ್ವಜನಿಕರ ಎದುರೇ ಜಗಳವಾಡಿಕೊಂಡಿದ್ದಾರೆ. ಗುಬ್ಬಿ ತಾಲ್ಲೂಕಿನ ಸಿ.ನಂದಿಹಳ್ಳಿ ಗ್ರಾಮದಲ್ಲಿ ಬೆಸ್ಕಾಂ ಎಂಎಸ್‍ಎಸ್ ಘಟಕ ಉದ್ಘಾಟನೆ ಸಮಾರಂಭದಲ್ಲಿ ಇಬ್ಬರೂ ಭಾಗವಹಿಸಿದ್ದರು.

ಚೇಳೂರು ಚೆಕ್‍ಡ್ಯಾಂ ನಿರ್ಮಾಣಕ್ಕಾಗಿ ಭೂ ಸ್ವಾಧೀನ ವಿಚಾರಕ್ಕೆ ಸಂಬಂಧಿಸಿದಂತೆ ಜಮೀನು ಕಳೆದುಕೊಂಡ ರೈತರಿಗೆ ಒಂದು ಕೋಟಿ ಪರಿಹಾರ ಕೊಡಿಸುವುದಾಗಿ ಸಂಸದರು ಭರವಸೆ ನೀಡಿದ್ದರು ಎನ್ನಲಾಗಿದೆ.

‘ಈ ಭಾಗದಲ್ಲಿ ಡ್ಯಾಂ ನಿರ್ಮಿಸಲಾಗುತ್ತದೆ. ರೈತರಿಗೆ ಹೆಚ್ಚಿನ ರೀತಿಯಲ್ಲಿ ಪರಿಹಾರ ಕೊಡಿಸಲಾಗುತ್ತದೆ. ಅದಕ್ಕೆ ಕೇಂದ್ರ ಸರ್ಕಾರ ಹಣ ಕೊಡುತ್ತಿದೆ. ಇಲ್ಲಿನ ಜನರಿಗೆ ಸಹಕಾರಿಯಾಗುತ್ತದೆ’ ಎಂದು ಬಸವರಾಜು ವಿಷಯ ಪ್ರಸ್ತಾಪಿಸುತ್ತಾರೆ.

ಇದನ್ನು ಓದಿ: ಸಂಚಾರಿ ಪೊಲೀಸರ ಭ್ರಷ್ಟಾಚಾರ ತಡೆಗೆ ಬಾಡಿ ಓನ್ ಕ್ಯಾಮರ ನೀಡಲು ಚಿಂತನೆ : ಜಂಟಿ ಪೊಲೀಸ್ ಆಯುಕ್ತ (ಸಂಚಾರಿ) ಡಾ. ಬಿ.ಆರ್. ರವಿಕಾಂತೇಗೌಡ

ತಕ್ಷಣ ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಎಸ್‌.ಆರ್‌.ಶ್ರೀನಿವಾಸ್ ಯೋಜನೆಯೇ ಇಲ್ಲ, ಹಣವೇ ಇಲ್ಲ. ಪರಿಹಾರ ಎಲ್ಲಿಂದ ಕೊಡಿಸುವುದು, ರೈತರಿಗೆ ಸುಳ್ಳು ಹೇಳಬೇಡಿ. ಅವರು ನಮ್ಮ ಮನೆ ಬಾಗಿಲಿಗೆ ಬಂದು ಪರಿಹಾರ ಕೇಳಿದರೆ ಎಲ್ಲಿಂದ ತರುವುದು ಎಂದು ಪ್ರತ್ಯೂತ್ತರ ನೀಡಿದರು. ಆಗ ಸಿಟ್ಟುಗೆದ್ದ ಸಂಸದ ಬಸವರಾಜು ನಿನಗೆ ಏನು ಗೊತ್ತಿಲ್ಲ. ಸುಮ್ಮನಿರು ಎಂದು ಅಸಂಸದೀಯ ಪದ ಬಳಕೆ ಮಾಡಿ ನಿಂದಿಸಿದರು ಎನ್ನಲಾಗಿದೆ.

ಇದರಿಂದ ರೊಚ್ಚಿಗೆದ್ದ ಶ್ರೀನಿವಾಸ್ ಅವರು, ನಿನಗೆ ವಯಸ್ಸಾಗಿದೆ. ಯೋಗ್ಯತೆಗಿಷ್ಟು ಬೆಂಕಿ ಹಾಕ, ಸುಳ್ಳು ಹೇಳುವುದನ್ನು ನಿಲ್ಲಿಸು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇಬ್ಬರು ನಾಯಕರು ಪರಸ್ಪರ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ಸ್ಥಳದಲ್ಲಿ ಹಾಜರಿದ್ದ ಪ್ರಮುಖರು ಇಬ್ಬರನ್ನು ಸಮಾಧಾನ ಮಾಡುವ ಯತ್ನ ಮಾಡಿದ್ದಾರೆ. ಇದರಿಂದ ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಯಿತು. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಶ್ರೀನಿವಾಸ್ ಅವರು, ಸಂಸದರು ಪ್ರತಿ ಬಾರಿಯೂ ಸುಳ್ಳು ಹೇಳಿಕೊಂಡೇ ಬರುತ್ತಿದ್ದಾರೆ. ಜನರನ್ನು ಈ ರೀತಿ ದಾರಿ ತಪ್ಪಿಸಬೇಡಿ ಎಂದು ಹಲವಾರು ಬಾರಿ ಸಲಹೆ ನೀಡಿದ್ದೇನೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ನನ್ನ ಎದುರೇ ಸುಳ್ಳು ಹೇಳಿದಾಗ ಸುಮ್ಮನಿರಲು ಸಾದ್ಯವಾಗಲಿಲ್ಲ. ಅದನ್ನು ಪ್ರಶ್ನಿಸಿದಾಗ ಅವರು ನಿಂದನಾತ್ಮಕ ಪದ ಬಳಿಸಿದರು. ನಾನು ಅದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *